ಪಿರಿಯಾಪಟ್ಟಣ: ಪಟ್ಟಣದ ಕಗ್ಗುಂಡಿ ಬಳಿಯ ಸಾರಿಗೆ ಘಟಕದಲ್ಲಿ ಪ್ರತಿಷ್ಠಾಪಿಸಿದ್ದ ಗೌರಿ ಗಣೇಶ ಮೂರ್ತಿಯನ್ನು ಸಾಂಪ್ರದಾಯಿಕವಾಗಿ ಸಡಗರದಿಂದ ವಿಸರ್ಜಿಸಲಾಯಿತು.
ಗೌರಿ ಗಣೇಶ ಹಬ್ಬ ದಿನದಿಂದ ವಿಸರ್ಜನಾ ದಿನದವರೆಗೆ ಸಾರಿಗೆ ಘಟಕದಲ್ಲಿ ಪ್ರತಿನಿತ್ಯ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ವಿತರಿಸಲಾಯಿತು. ಹಬ್ಬದ ಪ್ರಯುಕ್ತ ಸಾರಿಗೆ ಘಟಕವನ್ನು ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಿ ತಳಿರು ತೋರಣ ಹಾಗೂ ಬಣ್ಣದ ರಂಗೋಲಿಯಿಂದ ಸಿಂಗರಿಸಲಾಗಿತ್ತು. ವಿಸರ್ಜನಾ ದಿನ ಘಟಕದಲ್ಲಿ ವಿಶೇಷ ಪೂಜೆ ನಡೆಸಿ ಅನ್ನಸಂತರ್ಪಣೆ ಬಳಿಕ ಹೂ ಗಳಿಂದ ಅಲಂಕೃತ ಸಾರಿಗೆ ವಾಹನದಲ್ಲಿ ನಗಾರಿ ಸದ್ದಿನೊಂದಿಗೆ ಪಟ್ಟಣದ ಬಿ.ಎಂ ಮುಖ್ಯ ರಸ್ತೆ ಮುಖಾಂತರ ಮೆರವಣಿಗೆಯಲ್ಲಿ ಸಾಗಿ ಹಮ್ಮಿಗೆ ರಸ್ತೆ ಬಳಿಯ ದೊಡ್ಡ ಕೆರೆಯಲ್ಲಿ ವಿಸರ್ಜಿಸಲಾಯಿತು.
ಈ ಸಂದರ್ಭ ಘಟಕ ವ್ಯವಸ್ಥಾಪಕ ದರ್ಶನ್ ರಾಮಚಂದ್, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಬೆಕ್ಕರೆ ಸತೀಶ್ ಆರಾಧ್ಯ, ಸಹಾಯಕ ಸಂಚಾರ ಅಧೀಕ್ಷಕ ಕುಮಾರ್, ಮೇಲ್ವಿಚಾರಕಿ ಭಾಗ್ಯಲಕ್ಷ್ಮಿ, ಸಂಚಾರ ನಿರೀಕ್ಷಕರಾದ ಪ್ರಕಾಶ್, ಪಾರು ಪತ್ತೆದಾರರಾದ ಗೋವಿಂದ್, ಪ್ರಕಾಶ್, ಚಾಲಕ ನಿರ್ವಾಹಕ ತಾಂತ್ರಿಕ ಭದ್ರತಾ ಮತ್ತು ಕಚೇರಿ ಸಿಬ್ಬಂದಿ ಇದ್ದರು.