Wednesday, April 9, 2025
Google search engine

Homeರಾಜ್ಯಸುದ್ದಿಜಾಲಕಲಬುರಗಿ: ಮತ್ತೆ ಕುಸಿದ ಮಳಖೇಡ ಕೋಟೆಯ ಗೋಡೆ

ಕಲಬುರಗಿ: ಮತ್ತೆ ಕುಸಿದ ಮಳಖೇಡ ಕೋಟೆಯ ಗೋಡೆ

ಸೇಡಂ (ಕಲಬುರಗಿ ಜಿಲ್ಲೆ): ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ತಾಲ್ಲೂಕಿನ ಮಳಖೇಡ ಕೋಟೆಯ ಗೋಡೆ ಮತ್ತೆ ಗುರುವಾರ ಉರುಳಿ ಬಿದ್ದಿದೆ.

ಸೇಡಂ ಪಟ್ಟಣ ಸೇರಿದಂತೆ ತಾಲ್ಲೂಕಿನ ‌ವಿವಿಧೆಡೆ ಮಂಗಳವಾರ ಮತ್ತು ಬುಧವಾರ ರಾತ್ರಿ ಜೋರು ಮಳೆಯಾಗಿದೆ. ಸತತ ಮಳೆಗೆ ಐತಿಹಾಸಿಕ ಮಳಖೇಡ ಕೋಟೆಯ ಗೋಡೆ ತೇವಗೊಂಡಿದೆ. ಗುರುವಾರ ಬೆಳಿಗ್ಗೆ ಇದ್ದಕ್ಕಿದ್ದಂತೆ ದಿಢೀರ್ ಕೋಟೆಯ ಗೋಡೆ ನೆಲಕ್ಕುರಳಿದೆ. ಸುತ್ತಲಿದ್ದ ಸ್ಥಳೀಯ ನಿವಾಸಿಗಳು ಆತಂಕಗೊಂಡಿದ್ದಾರೆ.

ಕಳೆದ ತಿಂಗಳ ಆಗಸ್ಟ್ 31ರಂದು ಸಹ ಸತತ ಮಳೆಗೆ ಕೋಟೆಯ ಗೋಡೆ ಉರುಳಿ ಬಿದ್ದಿತ್ತು. ಆಗ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಉಪವಿಭಾಗ ಅಧಿಕಾರಿ ಪ್ರಭುರೆಡ್ಡಿ, ತಹಶೀಲ್ದಾರ್ ಶ್ರೀಯಾಂಕಾ ಧನಶ್ರೀ ಭೇಟಿ ನೀಡಿದ್ದರು.‌ ಪುರಾತತ್ವ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದ್ದರು.

ಕಳೆದೆರಡು ದಿನಗಳಿಂದ ಸುರಿದ ಮಳೆಗೆ ತಿಂಗಳಲ್ಲಿ ಎರಡನೇ ಬಾರಿ ಕೋಟೆಯ ಗೋಡೆ ಉರುಳಿ ಬಿದ್ದಿದೆ.

RELATED ARTICLES
- Advertisment -
Google search engine

Most Popular