ರದಿ: ಬೆಕ್ಕರೆ ಸತೀಶ್ ಆರಾಧ್ಯ
ಪಿರಿಯಾಪಟ್ಟಣ: ನಗರದಲ್ಲಿರುವ ಕಲ್ಪವೃಕ್ಷ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 2025 ನೇ ನೂತನ ವರ್ಷದ ಕ್ಯಾಲೆಂಡರ್ ಅನ್ನು ಸಂಸ್ಥೆ ಅಧ್ಯಕ್ಷರಾದ ಪಿ.ಪ್ರಶಾಂತ್ ಗೌಡ ಅವರು ಸೊಸೈಟಿ ಕಚೇರಿಯಲ್ಲಿ ಬಿಡುಗಡೆ ಮಾಡಿದರು.
ಬಳಿಕ ಪ್ರಶಾಂತ್ ಗೌಡ ಅವರು ಮಾತನಾಡಿ ಮುಂಬರುವ 2025ನೇ ವರ್ಷ ಎಲ್ಲರಿಗೂ ಒಳಿತಾಗಲಿ ಹಿಂದಿನ ವರ್ಷದ ಕಹಿ ನೆನಪು ಹಾಗೂ ಕಷ್ಟಗಳು ಮರೆಯಾಗಿ ಮುಂಬರುವ ವರ್ಷದಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ ಆಯುಷ್ಯ ಸಂಪತ್ತನ್ನು ಪಿರಿಯಾಪಟ್ಟಣ ಶಕ್ತಿ ದೇವತೆಗಳಾದ ಶ್ರೀ ಮಸಣಿಕಮ್ಮ ಶ್ರೀ ಕನ್ನಂಬಾಡಿಯಮ್ಮ ಶ್ರೀ ಮಹದೇಶ್ವರ ಸ್ವಾಮಿ ಕರುಣಿಸಲಿ ಎಂದು ಶುಭ ಕೋರಿದರು.
ಈ ಸಂದರ್ಭ ಸೊಸೈಟಿ ಉಪಾಧ್ಯಕ್ಷರಾದ ಕೃಷ್ಣೆಗೌಡ, ನಿರ್ದೇಶಕರಾದ ಚೌತಿ ದೇವರಾಜ್, ಎಸ್.ಆರ್ ದಿನೇಶ್, ನಟೇಶ್ ಕಿತ್ತೂರು, ಕೆಂಪಣ್ಣ, ಸಿಬ್ಬಂದಿ ಮಂಜು, ಚಿತ್ರ, ಆಶಾ, ಮಹದೇವ್, ಕುಮಾರಿ ಇದ್ದರು