ಹೊಸೂರು: ತೀವ್ರ ಕೂತುಹಲ ಕೆರಳಿಸಿದ್ದ ಸಾಲಿಗ್ರಾಮ ತಾಲೂಕಿನ ಹೊಸೂರು ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಕಮಲಮ್ಮ ಶಿವಣ್ಣ ಚುನಾಯಿತರಾದರೇ, ಉಪಾಧ್ಯಕ್ಷರಾಗಿ ಹಳಿಯೂರು ಎಚ್.ಬಿ.ನವೀನ್ ಕುಮಾರ್ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಹೊಸೂರು ಕಮಲಮ್ಮ ಶಿವಣ್ಣ 8 ಮತಗಳನ್ನು ಪಡೆದರೆ ಇವರ ಪ್ರತಿಸ್ಪರ್ಧಿಯಾಗಿದ್ದ ಸಾಲೇಕೊಪ್ಪಲು ವಿವೇಕನಂದ 4 ಮತಗಳನ್ನು ಪಡೆದು ಪರಾಜಿತರಾದರು.
ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಎಚ್.ಬಿ.ನವೀನ್ ಕುಮಾರ್ ಮತ್ತು ಪಾರ್ಥಯ್ಯ ಸ್ಪರ್ಧಿಸಿದ್ದರು. ಅದರೆ ಪಾರ್ಥಯ್ಯ ತಮ್ಮ ನಾಮಪತ್ರವನ್ನು ವಾಪಸ್ ಪಡೆದ ಕಾರಣ ಉಪಾಧ್ಯಕ್ಷರಾಗಿ ಎಚ್.ಬಿ.ನವೀನ್ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿಯಾಗಿದ್ದ ಕೆ.ಆರ್.ನಗರ ಸಹಕಾರ ಇಲಾಖೆಯ ಸಿಡಿಓ ಎಸ್.ಎಸ್.ರವಿಕುಮಾರ್ ಪ್ರಕಟಿಸಿದರು.
ನಂತರ ಮಾತನಾಡಿದ ನೂತನ ಅಧ್ಯಕ್ಷೆ ಕಮಲಮ್ಮ ಶಿವಣ್ಣ ಮತ್ತು ಉಪಾಧ್ಯಕ್ಷ ಎಚ್.ಬಿ.ನವೀನ್ ಷೇರುದಾರ ರೈತರಿಗೆ ಸಕಾಲದಲ್ಲಿ ಸಾಲ ಸೌಲಭ್ಯ ಒದಗಿಸಿ ಜಿಲ್ಲಾ ಸಹಕಾರ ಬ್ಯಾಂಕಿನಿಂದ ಸಿಗುವ ಸವಲತ್ತುಗಳನ್ನು ಒದಗಿಸಿ ಕೊಡಲು ಶ್ರಮಿಸುವುದರ ಜೊತಗೆ ರೈತರಿಗೆ ರಸಗೊಬ್ಬರ ಸಾಲ ಇಲ್ಲವೇ ಸಂಘದಿಂದ ನೇರವಾಗಿ ರಸಗೊಬ್ಬರ ಮಾರಾಟ ಮಾಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು
ಚುನಾವಣಾ ಸಭೆಯಲ್ಲಿ ನಿರ್ದೇಶಕರಾದ ಎಚ್.ಆರ್.ಕೃಷ್ಣಮೂರ್ತಿ, ಎಚ್.ಎನ್.ರಮೇಶ್, ಎಚ್.ಎಸ್.ಜಗದೀಶ್, ಸಿ.ಎಂ.ರಾಜೇಗೌಡ, ಕಲ್ಯಾಣಮ್ಮ, ಕೆಂಪನಾಯಕ, ಜಿಲ್ಲಾ ಬ್ಯಾಂಕಿನ ಮೇಲ್ವಿಚಾರಕ ಎಂ.ಸತೀಶ್, ಸಂಘದ ಸಿಇಓ ಚಂದ್ರಕಲಾ ಪಾಪೇಗೌಡ, ಹಾಜರಿದ್ದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ -ಉಪಾಧ್ಯಕ್ಷರನ್ನು ಕೆ.ಆರ್.ನಗರ ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ಎನ್.ರಾಜೇಗೌಡ, ಹಾಪ್ ಕಾಮ್ಸ್ ಮಾಜಿ ಅಧ್ಯಕ್ಷ ಎಚ್.ಟಿ.ಸುದರ್ಶನ್, ಆಶ್ರಯ ಸಮಿತಿ ಮಾಜಿ ಸದಸ್ಯ ಬಿ.ರಮೇಶ್ ಸಂಘದ ಮಾಜಿ ಅಧ್ಯಕ್ಷರಾದ ಎಚ್.ಆರ್.ಮಧುಚಂದ್ರ, ಎಸ್.ಎಸ್.ಶಿವಸ್ವಾಮಿ, ಮಾಜಿ ಉಪಾಧ್ಯಕ್ಷರಾದ ಎಚ್.ಎಲ್.ಸುದರ್ಶನ್, ಡಿ.ಆರ್.ರಮೇಶ್, ಮುಖಂಡರಾದ ಎಚ್.ಕೆ.ಕೀರ್ತಿ, ಎಚ್.ಆರ್.ರಾಘವೇಂದ್ರ, ಎಚ್.ಡಿ.ಕೆ.ಭಾಸ್ಕರ್, ಅವಿನಾಶ್, ಕಿಟ್ಟ, ಪೂಜಾರಿ ಸಂತೋಷ್, ಪುರಿಮಂಜ,ಹೊಸೂರು ಡೈರಿ ನಿರ್ದೇಶಕರಾದ ಸ್ವಾಮಿ, ಬುದ್ದಿ ಸಾಗರ್ ಡಿ.ಆರ್.ನವೀನ್, ಕಾಂತ, ಮಂಚಿಮಾದ ಮತ್ತಿತರರು ಅಭಿನಂಧಿಸಿ ಪಟಾಕಿ ಸಿಡಿಸಿ ವಿಜಿಯೋತ್ಸವ ಆಚರಿಸಿದರು.