Saturday, April 12, 2025
Google search engine

Homeರಾಜ್ಯಸುದ್ದಿಜಾಲಕೀರ್ತನೆಗಳ ಮೂಲಕ ಕನಕದಾಸರು ಜಾತಿ ವ್ಯವಸ್ಥೆ ವಿರುದ್ಧ ಧ್ವನಿಯಾಗಿದ್ದರು- ಶಾಸಕ ಅನಿಲ್ ಚಿಕ್ಕಮಾದು

ಕೀರ್ತನೆಗಳ ಮೂಲಕ ಕನಕದಾಸರು ಜಾತಿ ವ್ಯವಸ್ಥೆ ವಿರುದ್ಧ ಧ್ವನಿಯಾಗಿದ್ದರು- ಶಾಸಕ ಅನಿಲ್ ಚಿಕ್ಕಮಾದು

ವರದಿ: ಎಡೆತೊರೆ ಮಹೇಶ್

ಎಚ್.ಡಿ.ಕೋಟೆ: ಕನಕದಾಸರು ಕೀರ್ತನೆಗಳ ಮೂಲಕ ಜಾತಿ ವ್ಯವಸ್ಥೆ ವಿರುದ್ಧ ಧ್ವನಿಯಾಗಿದ್ದರು ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.

ಪಟ್ಟಣದ ತಾಲ್ಲೂಕು ಆಡಳಿತ ಸೌಧದ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಭಕ್ತ ಕನಕದಾಸರ 537 ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹರಿಭಕ್ತರಾದ ಕನಕದಾಸರು 1509 ರಂದು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ಬಾಡ ಗ್ರಾಮದಲ್ಲಿ ಹಿಂದೂ ಕುರುಬ ಜನಾಂಗಕ್ಕೆ ಸೇರಿದ ಬಚ್ಚಮ್ಮ ಮತ್ತು ಬೀರಪ್ಪನಾಯಕ ಎಂಬ ದಂಪತಿಗಳ ಮಗನಾಗಿ ಜನಿಸಿದರು. ಕನಕದಾಸರ ಮೂಲ ಹೆಸರು ತಿಮ್ಮಪ್ಪನಾಯಕ. ಸಂತನಾಗುವ ಮೊದಲು ಯೋಧನಾಗಿದ್ದ ಇವರು, ಯುದ್ಧದಲ್ಲಿ ಗಂಭೀರವಾಗಿ ಗಾಯಗೊಂಡರು. ದೇವರ ಲೀಲೆಯಿಂದ ಬದುಕುಳಿದ ನಂತರ ಹರಿದಾಸರಾದರು ಮತ್ತು ತಮ್ಮನ್ನು ದೇವರ ಸೇವೆಯಲ್ಲಿ ತೊಡಗಿಸಿಕೊಂಡರು ಎಂದರು.

ಕನಕದಾಸರ ಭಕ್ತಿ ಮೆಚ್ಚಿ ಕೃಷ್ಣ ದರ್ಶನ ನೀಡಿದ್ದು ದೇಶದ ಇತಿಹಾಸದಲ್ಲಿ ಎಂದೂ ಮರೆಯಾಗದ ಘಟನೆ ಎಂದರು. ಐದು ಜಿಲ್ಲೆಗೆ ಮಾದರಿಯಾಗಿ ಪಟ್ಟಣದಲ್ಲಿ ಕನಕ ಭವನವನ್ನು ನಿರ್ಮಿಸಲಾಗಿದೆ ಎಂದರು.
ವಿಜಯನಗರ ಸಾಮ್ರಾಜ್ಯದ 70 ಹಳ್ಳಿಗಳ ಪಾಳೆಗಾರರಾಗಿದ್ದ ಕನಕದಾಸರು ಕೀರ್ತನೆಗಳ ಮೂಲಕ ಸಮಾಜದ ಸಮಸ್ಯೆಗಳಿಗೆ ದಾರಿ ದೀಪವಾದರೂ ಅಂಬೇಡ್ಕರ್ ಸಂದೇಶದ ಮಾದರಿಯಲ್ಲಿ ಅವರು ಸಹ ಅತ್ಯುತ್ತಮ ಸಂದೇಶಗಳನ್ನು 16ನೇ ಸಮಾನದಲ್ಲಿ ಸಾಮಾನ್ಯ ಜನರಿಗೆ ನೀಡಿದ್ದಾರೆ ಎಂದರು. ಸಮಾಜ ದ ಸಮಾನತೆಗಾಗಿ ನಿರಂತರ ಶ್ರಮಿಸಿದರು.

ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಹ ಕನಕದಾಸರ ಮಾದರಿಯಲ್ಲೇ ಸಮ ಸಮಾಜದ ನಿರ್ಮಾಣದ ರೀತಿಯಲ್ಲಿ ಎಲ್ಲಾ ಜಾತಿ, ಧರ್ಮದವರನ್ನು ಸಮಾನ ರೀತಿಯಲ್ಲಿ ಕಂಡು ಸಮಾಜದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ ಎಂದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಶಿಕ್ಷಕ ರಮೇಶ್ ಮಾತನಾಡಿ, ಭಕ್ತಿ ಮಾರ್ಗದ ಮೂಲಕ ಕನಕದಾಸರು ಸಮಾಜದ ಒಳಿತಿಗಾಗಿ ಸಂದೇಶವನ್ನು ಸಾರಿದ್ದಾರೆ. ಅವರ ಸಂದೇಶ ಸಾವಿರಾರು ಜನರ ಬದುಕಿಗೆ ನಂದಿಯಾಗಿದ್ದು, ಅವರು ಹೋರಾಟದ ರೀತಿಯಲ್ಲಿ ಜನಜಾಗೃತಿ ಮಾಡಿದ ಸಂತ, ಜಾತಿ ಜಾತಿಗಳ ನಡುವೆ ತಾರತಮ್ಯಗಳಿಂದ ಹೊರಹಾಕಲು ಶ್ರಮಿಸಿದ್ದರು, ಅವರು ತಿಳಿಸಿದ ಸಂದೇಶಗಳು ಪ್ರಸ್ತುತ ಸಮಾಜಕ್ಕೆ ಮಾರ್ಗದರ್ಶನವಾಗಿವೆ, ಅವರ ಮಾರ್ಗದರ್ಶನವನ್ನು ಪಾಲಿಸುವ ಮೂಲಕ ಸಮ ಸಮಾಜ ನಿರ್ಮಾಣ ಮಾಡಬೇಕಿದೆ ಎಂದರು.

ತಹಶೀಲ್ದಾರ್ ಶ್ರೀನಿವಾಸ ಮಾತನಾಡಿ, ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿಳಿಸುವ ಮೂಲಕ ಜನರನ್ನ ಸರಿದಾರಿಗೆ ತರುವಲ್ಲಿ ಶ್ರಮಿಸಿದ ಮಹಾನ್ ಚೇತನ ಕನಕದಾಸರು ಎಂದರು. ದೇವರನ್ನ ಭಕ್ತಿಯಿಂದ ಒಲಿಸಿಕೊಳ್ಳಲು ಸಾಧ್ಯವಿದೆ ಎಂಬುವ ಸಂದೇಶವನ್ನು ಸಮಾಜಕ್ಕೆ ಸಾರಿದರು, ಉಡುಪಿ ಕೃಷ್ಣ ನನ್ನ ಒಲಿಸಿಕೊಳ್ಳುವ ಮೂಲಕ ಜನರಿಗೆ ಸಂದೇಶ ಸಾರಿದರು ಎಂದರು.

ನಾನು ಎಂಬ ದುರಹಂಕಾರವನ್ನು ಬಿಟ್ಟರೆ ಎಲ್ಲವನ್ನು ಸಾಧಿಸಲು ಸಾಧ್ಯವಿದೆ ಎಂಬುವ ಸಾಮಾನ್ಯ ಜ್ಞಾನವನ್ನ ಜನರಲ್ಲಿ ತಿಳಿಸಲು ಶ್ರಮಿಸಿದ ಮಹಾನ್ ದಾಸ ಶ್ರೇಷ್ಠರು ಎಂದರು. ಇಓ ಧರಣೇಶ್, ಕುರುಬ ಸಮಾಜದ ಅಧ್ಯಕ್ಷ ಎಂ.ಬಿ.ಆನಂದ, ಸತೀಶ್ ಗೌಡ, ಚಿಕ್ಕವೀರನಾಯ್ಕ, ಏಜಾಜ್ ಪಾಷ, ವೀರೇಗೌಡ, ಪರಶಿವಮೂರ್ತಿ, ಸೌಮ್ಯ, ಅಶೋಕ್, ಮಾಲೆಗೌಡ, ಚಂದ್ರೇಗೌಡ, ಸಫಿ, ಜೀವಿತ ಬಸವರಾಜು, ಜವರಯ್ಯ ಇದ್ದರು.

RELATED ARTICLES
- Advertisment -
Google search engine

Most Popular