ಮೈಸೂರು: ಕನಕದಾಸರು ೧೫ನೇ ಶತಮಾನದಲ್ಲಿದ್ದ ಜಾತಿ ವ್ಯವಸ್ಥೆ ಮೌಡ್ಯತೆಯ ವಿರುದ್ಧ ಜನರಲ್ಲಿ ಮೂಡಿಸಲು ಶ್ರಮಿಸಿದ ಮಹಾಪುರುಷರು ಎಂದು ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ ಮೈಸೂರಿನ ಶ್ರೀಗಳಾದ ಶ್ರೀ ಶಿವಾನಂದಪುರಿ ಸ್ವಾಮೀಜಿ ತಿಳಿಸಿದರು.
ಸಿದ್ದಾರ್ಥನಗರದಲ್ಲಿರುವ ಶ್ರೀ ಕಾಗಿನೆಲೆ ಶಾಖಾಮಠದಲ್ಲಿ ೫೩೬ನೇ ಕನಕ ಜಯಂತಿಯ ಅಂಗವಾಗಿ ಕನಕದಾಸರ ಭಾವಚಿತ್ರಕ್ಕೆ ಪುಷ್ಟಾರ್ಚನೆ ಮಾಡಿ ಮಾತನಾಡಿನ ಅವರು ಕನಕದಾಸರು ಸಾಹಿತ್ಯದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ರಾಮಧಾನ್ಯ ಚರಿತ್ರೆ, ಮೋಹನ ತರಂಗಿಣಿ, ಹರಿಭಕ್ತಸಾರ ಮುಂತಾದ ಗ್ರಂಥಗಳನ್ನು ರಚಿಸಿದ್ದಾರೆ. ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಕನಕದಾಸರ ಕೀರ್ತನೆಗಳು ಮನೆಮಾತಾಗಿವೆ. ಉಡುಪಿಯ ಶ್ರೀ ಕೃಷ್ಣನು ಇವರ ಭಕ್ತಿಗೆ ಮೆಚ್ಚಿ ದರ್ಶನ ನೀಡಿದ್ದಾರೆ. ಕನಕದಾಸರು ತಿರುಪತಿ ತಿಮ್ಮಪ್ಪನ ಪರಮ ಭಕ್ತರು ಆಗಿದ್ದರು. ಆದ್ದರಿಂದ ಪ್ರತಿಯೊಬ್ಬರು ಕನಕದಾಸರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಬೇಕೆಂದು ಮನವಿ ಮಾಡಿದ ಅವರು ಎಲ್ಲರಿಗೂ ಕನಕಜಯಂತಿಯ ಶುಭಾಶಯ ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಬಸವರಾಜು, ಕಾರ್ಯಾಧ್ಯಕ್ಷ ನಾಡನಹಳ್ಳಿ ರವಿ, ಡಾ. ಮಾಲೇಗೌಡ ನಗರ ಪಾಲಿಕೆ ಮಾಜಿ ಸದಸ್ಯ ಬಿ.ಎಂ. ನಟರಾಜ್, ಹಿನಕಲ್ ರಾಜು, ಪಾಪಣ್ಣ, ಜಿಲ್ಲಾ ನೌಕರ ಸಂಘದ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ, ಶಿವರುದ್ರಪ್ಪ, ಶಿಂಷಾ ದಿನೇಶ್, ಅಪ್ಪುಗೌಡ, ರಾಜು, ಕಮಲ ಅನಂತರಾಮ್ ಜಗದೀಶ್, ರಾಘವೇಂದ್ರ, ಅಣ್ಣಯ್ಯ, ಕುಮಾರ, ಸ್ವಾಮಿ ಹಾಜರಿದ್ದರು.