Sunday, November 9, 2025
Google search engine

Homeರಾಜ್ಯಸುದ್ದಿಜಾಲಒಂದೇ ಮನುಷ್ಯ ಜಾತಿ ಇದೆ ಎಂದು ಸಾರಿದ ಕನಕದಾಸರ ಚಿಂತನೆಗಳು ಸಮಾಜದ ಮಾರ್ಗದೀಪ : ಶಾಸಕ...

ಒಂದೇ ಮನುಷ್ಯ ಜಾತಿ ಇದೆ ಎಂದು ಸಾರಿದ ಕನಕದಾಸರ ಚಿಂತನೆಗಳು ಸಮಾಜದ ಮಾರ್ಗದೀಪ : ಶಾಸಕ ಡಿ. ರವಿಶಂಕರ್

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಯಾವ ಜಾತಿ ಇಲ್ಲ ಇರುವುದು ಒಂದೇ ಮನುಷ್ಯ ಜಾತಿ ಎಂದು ಸಮಾಜದಲ್ಲಿ ಜಾತಿ ವ್ಯವಸ್ಥೆಯನ್ನು ಹೊಗಲಾಡಿಸಲು ತಮ್ಮ ಸಾಹಿತ್ಯ ಸಂದೇಶದ ಮೂಲಕ ಶ್ರಮಿಸಿದ ಕೀರ್ತಿ ಕನಕ ದಾಸರಿಗೆ ಸಲ್ಲುತ್ತದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಸಾಲಿಗ್ರಾಮ ತಾಲೂಕಿನ‌ ಚಿಕ್ಕಕೊಪ್ಪಲು-ದೊಡ್ಡಕೊಪ್ಪಲು ಅವಳಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಯುವಕರ ಸಂಘದ ವತಿಯಿದ ನಡೆದ 538 ನೇ ಭಕ್ತ ಕನಕದಾಸರ ಜಯಂತಿ ಮತ್ತು ಕನ್ನಡ ರಾಜೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಾತನಾಡಿದರು.

ಸಮಾಜದಲ್ಲಿ ಮೌಡ್ಯತೆ ತುಂಬಿದ ಸಂದರ್ಭದಲ್ಲಿ ಅವರು ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ನೀಡಿದ ಕೊಡುಗೆ ಅಪಾರವಾಗಿದೆ ನಾವು ಕೂಡ ಅವರ ಚಿಂತನೆಗಳು ಹಾಗೂ ಅವರ ವಿಚಾರಧಾರೆಯನ್ನು ಮೈಗೂಡಿಸಿಕೊoಡು ಸಮಾಜದಲ್ಲಿ ನಡೆದರೆ ಮಾತ್ರ ಇಂತಹ ಮಹನೀಯರ ಜಯಂತಿಗಳಿಗೆ ಅರ್ಥಪೂರ್ಣ ಗೌರವ ಸಲ್ಲುವುದು ಎಂದು ಹೇಳಿದರು.

ಚಿಕ್ಕಕೊಪ್ಪಕೊಪ್ಪಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ನಿರ್ಮಿಸಲು 1 ಕೋಟಿ ರೂಪಾಯಿ ಅನುಧಾನ ಮಂಜೂರು ಮಾಡಿದ್ದು ಜತಗೆ ಇವೆರಡು ಗ್ರಾಮಗಳಲ್ಲಿ ಆಗಬೇಕಿರುವ ಅಭಿವೃದ್ದಿ ಕೆಲಸಗಳನ್ನು ಆದ್ಯತೆ ಮೇರೆಗೆ ಮಾಡುವುದರ ಜತಗೆ ಗ್ರಾಮಗಳ ಮಧ್ಯ ಭಾಗದಲ್ಲಿ ಕನಕ ದಾಸರ ಪ್ರತಿಮೆ ನಿರ್ಮಿಸಿಕೊಡುವುದಾಗಿ ತಿಳಿಸಿದರು.

ಕಾರ್ಯಕ್ರವನ್ನು ಉದ್ಘಾಟಿಸಿದ ಜಿ.ಪಂ.ಮಾಜಿ ಅಧ್ಯಕ್ಷ ಸಿ.ಜೆ.ದ್ವಾರಕೀಶ್ ಮಾತನಾಡಿ ಜಾತಿ, ಮತ, ಕುಲಗಳನ್ನು ಮೀರಿ ಭಕ್ತಿ ಮಾರ್ಗದಿಂದ ಶ್ರೀ ಕೃಷ್ಣ ನನ್ನು ಒಲಿಸಿಕೊಂಡ ದಾಸಶ್ರೇಷ್ಠರಾದ ಶ್ರೀ ಕನಕದಾಸರು ಈ ಮೂಲಕ‌ ಎಲ್ಲರನ್ನು ಸಮಾನತೆ ದೃಷ್ಟಿಕೋನದಿಂದ ನೋಡುವಂತೆ ತಿಳಿಸಿ ತೋರಿಸಿ ಕೊಟ್ಟ ಜಾತಿ ವ್ಯವಸ್ಥೆಯನ್ನು ದೂರ ಮಾಡುವ ಪ್ರಯತ್ನವನ್ನ ನಾವುಗಳು ಅನುಸರಿಕೊಂಡು ಜಾತಿ ವ್ಯವಸ್ಥೆಯಿಂದ ದೂರ ಇರಬೇಕು ವಿಶ್ವ ಮಾನವರಾಗ ಬೇಕೆಂದ ಅವರು ಈ ಮೂಲಕ ಅವರ ಜಯಂತಿ ಅಚರಣೆ ಅರ್ಥ ನೀಡಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಯುವರಾಜ ಕಾಲೇಜಿನ ಪ್ರಾಧ್ಯಪಕ ಡಾ.ಸಿ.ಡಿ.ಪರುಶುರಾಮ್ ಮತ್ತು ಉಪನ್ಯಾಸಕ ಕಲ್ಕುಣಿಕೆ.ಜೆ.ಮಹದೇವ್ ಅವರು ಕನಕ ದಾಸರು ಮತ್ತು ಕನ್ನಡ ರಾಜೋತ್ಸವದ ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಅಂಗವಾಗಿ ಕಲಾ ತಂಡದೊಂದಿಗೆ ಗ್ರಾಮದಲ್ಲಿ ಕನಕ ದಾಸರ ಭಾವ ಚಿತ್ರದೊಂದಿಗೆ ಜಾನುವಾರುಗಳ ಆಕರ್ಷಕ ಮೆರವಣಿಗೆ ನಡೆಸಲಾಯಿತು ಅಲ್ಲದೇ ಎಸ್.ಎಸ್.ಎಲ್.ಸಿ.ಮತ್ತು ದ್ವೀತಿಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಲ್ಲದೇ ಚಿಕ್ಕಕೊಪ್ಪಲು ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಕರ್ತಾಳ್ ಕುಮಾರ್ , ಹೇಮಂತ್ ಅವರನ್ನ ಸನ್ಮಾನಿಸಲಾಯಿತು.

ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯ ಅಮಿತ್.ವಿ.ದೇವರಹಟ್ಟಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಂಗೊಳ್ಳಿ ರಾಯಣ್ಣ ಯುವ ವೇದಿಕೆ ಅಧ್ಯಕ್ಷ ಅರುಣ್ ಕಲ್ಲಹಟ್ಟಿ, ನಿವೃತ್ತ ಶಿಕ್ಷಕರಾದ ಟಿ.ಪುರುಷೋತ್ತಮ್, ಧನಪಾಲ್, ಶಿಕ್ಷಕ ಕುಮಾರ್, ಕೆ.ಅರ್.ನಗರ ಪುರಸಭಾ ಸದಸ್ಯ ನಟರಾಜ್, ಮಾಜಿ ಸದಸ್ಯ ವಿನಯ್ , ಗ್ರಾ.ಪಂ.ಸದಸ್ಯರಾದ ಸಿ.ಬಿ.ಧರ್ಮ, ಡಿ.ಎಂ.ವಿನಯ್, , ಡೈರಿ ಅಧ್ಯಕ್ಷ ಕುಮಾರಸ್ವಾಮಿ, ವಕೀಲ ಜಗ್ಗು, ಸರ್ವೆಯರ್, ಬಸವರಾಜು, ಕುಪ್ಪೆ ಸಹಕಾರ ಸಂಘದ ಮಾಜಿ ಅಧ್ಯಕ್ಷ ಸಿ.ಬಿ. ಸಂತೋಷ್, ಹೊಸೂರು ಸಹಕಾರ ಸಂಘದ ನಿರ್ದೇಶಕ ರಾಜಣ್ಣ, ಮುಖಂಡರಾದ ಸಿ.ಟಿ.ಪಾರ್ಥ, ಸಿ.ಎಚ್.ನವೀನ್ ಮನುರಾಜಣ್ಣ, ಸತ್ಯಪ್ಪ, ಸಿ.ಎಸ್.ಗಿರೀಶ್, ಶ್ರೀಕಾಂತ್ ಪಾಟೀಲ್ ಅಪ್ಪಾಜಿಗೌಡ,ಬೋರೇಗೌಡ, ಸಣ್ಣ ಮಹದೇವ್, ಸಿ.ಎಚ್.ನಾಗೇಂದ್ರ, ಶಶಿಧರ್, ಉದಯಮಾವತ್ತೂರು, ಸ್ವಾಮೀಗೌಡ, ಡೈರಿ ಕಾರ್ಯದರ್ಶಿ ಉಮೇಶ್, ಎಳನೀರು ಉದ್ಯಮಿ ನಿತಿನ್, ವೇದಿಕೆ ಪದಾಧಿಕಾರಿಗಳಾದ ಡಿ.ಅರ್.ಪ್ರಶನ್ನ, ಅಮಿತ್ ಕಲ್ಲಹಟ್ಟಿ, ಕಾರ್ತಿಕ್ ಕಲ್ಲಹಟ್ಟಿ, ವಿನೋದ ಕಲ್ಲಹಟ್ಟಿ, ಅಶೋಕಬಾಲಕಿಟ್ಟಿ, ಕಾರಂತ್, ಚಿರಂತ್, ಪುರುಷೋತ್ತಮ್, ಹೇಮಂತ್, ಅರುಣ್, ಗಣೇಶ್, ಚರಣ್, ವಿಕಾಸ್ ಪಾಟೀಲ್ ,ಚರಣ್ ಪಾಟೀಲ್ ಮಣಿಗೌಡ,ಕೋಳಿ ಕಿರಣ್, ಗಾರೆ ಅಭಿ, ನೀರುಗಂಟಿ ಚೆಲುವರಾಜ್, ಪ್ರದೀಪ, ತುಂಡು ದಿಲೀಪ್, ಸಿ.ಎಂ.ಗಗನ್, ಎಚ್ಸಣ್ಣ ಮಹದೇವ, ಪ್ರವೀಣ್, ಕುಪ್ಪೆ ಗಂಡು ಉಮೇಶ್, ಸಿ.ಎಂ.ಭರತ್, ಭಾನುಕಲ್ಕಿ, ಸಿ.ಬಿ.ಭರತ್,ಕಾರ್ತಿಕಕುಬೇರ್, ಹರ್ಷ ,ಸಂತೋಷ್, ಕಜ್ಜಿಪುನಿ, ಅರ್ಜುನ್, ಸಿ.ಪಿ.ರವಿ, ಡಿ.ಸಿ.ಶರತ್, ಮಾದ, ರಾಕಿ, ಸತ್ಯ ,ಸಂದೀಪ್, ಕೆಂಪ, ಭರತ್, ದಿನೇಶ್, ಜಗ್ಗ, ಜಲೇಂದ್ರ , ಸೇರಿದಂತೆ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular