ಕನಕಪುರ:, ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸತ್ ಸದಸ್ಯರಾದ ಡಿ.ಕೆ ಸುರೇಶ್ ಅವರು ಇಂದು ಕನಕಪುರ ಬಳಿಯ ಮುತ್ತುರಾಯನ ದೊಡ್ಡಿ ಗ್ರಾಮಕ್ಕೆ ಭೇಟಿ ನೀಡಿ ಇತ್ತೀಚೆಗೆ ಆನೆ ದಾಳಿಯಿಂದ ಮೃತಪಟ್ಟ ವೀರಭದ್ರ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಸಾಂಕೇತಿಕವಾಗಿ 15 ಲಕ್ಷ ರೂಪಾಯಿಗಳ ಪರಿಹಾರದ ಚೆಕ್ ವಿತರಿಸಿದರು. ಮೃತರ ಪತ್ನಿ ಮತ್ತು ಕುಟುಂಬದವರಿಗೆ ಬ್ಯಾಂಕ್ ಖಾತೆ ಇಲ್ಲದ ಕಾರಣ ತಕ್ಷಣವೇ ಬ್ಯಾಂಕ್ ಖಾತೆ ತೆರೆಸಿ ಆರ್.ಟಿ.ಜಿ.ಎಸ್. ಮೂಲಕ ಹಣ ಜಮಾ ಮಾಡುವಂತೆ ಸಚಿವರು ಹಾಗೂ ಸಂಸದರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.
ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವಂತೆ ಸಹ ಪಾಲಕರಿಗೆ ಮನವಿ ಮಾಡಿದರು.
ಜಿಲ್ಲೆಯಲ್ಲಿ ವನ್ಯ ಮೃಗಗಳ ದಾಳಿಯನ್ನು ತಡೆಯಲು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅರಣ್ಯ ಸಚಿವರು ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಮಾಧ್ಯಮದ ಜೊತೆ ಮಾತನಾಡಿದ ಅವರು, ಮಾನವ ಮತ್ತು ವನ್ಯ ಮೃಂಗಗಳ ಸಂಘರ್ಷ ಇದೆ ಇದರಿಂದ ಮಾನವನ ಹಾನಿ ಏನು ಆಗುತ್ತಾ ಇದೆ ಬಹಳಷ್ಟು ತಡೆಯಲು ಕ್ರಮ ಕೈಗೊಳ್ಳುತ್ತೇವೆ ಆನೆ ತುಳಿತದಿಂದ ಒಂದು ವಾರದಲ್ಲಿ ಇಬ್ಬರು ಸಾವನಪ್ಪಿದ್ದಾರೆ. ಅದಕ್ಕಾಗಿ ದುಃಖದ ಸಂಗತಿ ಆಗಿದೆ ಹಾಗೂ ಎಲ್ಲಾ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ ಮತ್ತು ರೈಲ್ವೆ ಬ್ಯಾರಿಗ್ರೇಡ್ ಮಾಡಲು ಪರಿಹಾರ ಇದೆ ಅದರ ಜೊತೆಗೆ ಸೋಲಾರ್ ಪಿಂಚ್ಚಿನ್. ಎಲ್ಲಿ ಪುಂಡನೆಗಳು ಇವೆ ಅವುಗಳನ್ನು ಅರಣ್ಯಗಳ ಹೊರಗಡೆ ಬರದಂತೆ ಹಿಡಿದು ಮತ್ತೆ ಅರಣ್ಯಕ್ಕೆ ಕಳಿಸುವಂತೆ ಒಂದು ಟೀಮ್ ಮಾಡಿದ್ದೇವೆ ಮತ್ತು ಒಂದು ಗಿಡದ ಬೆಲೆ ಹಳೆ ಸರ್ಕಾರವು 23 ರೂ . ಮಾಡಿದೆ ಅದರ ಬಗ್ಗೆ ಸಭೆ ಕರೆದಿದ್ದೇನೆ ಚರ್ಚೆ ಮಾಡಿ ಕೆಲವೊಂದು ಕಡೆ ದೂರುಗಳಿದೆ ನಾವು ಪ್ರಿಯಾಗಿ ಕೊಡುತ್ತೇವೆ. ದುಬಾರಿ ದುಪ್ಪಟವಾಗಿ ಮಾರಿಕೊಳ್ಳುತ್ತಿದ್ದಾರೆ ಯಾವ ಸಂಘ ಸಂಸ್ಥೆಗಳು ಒಳ್ಳೆ ರೀತಿ ಯಿಂದ ಕಾರ್ಯ ನಿರ್ವಹಿಸುತ್ತವೆ ಕಡಿಮೆ ದರದಲ್ಲಿ ಕೊಡುತ್ತೇವೆ ಮತ್ತು ಪರಿಶೀಲನೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಎಸ್. ರವಿ ಅವರು ಎಮ್ ಡಿ ವಿಜಯದೇವ್ .ತಾಶಿಲ್ದಾರ್ ಸ್ಮಿತಾರಾಮ್. ಡಿ.ಇ. ಎಫ್ ದೇವರಾಜ್ ಆರ್ ಎಫ್ ದಾಳೇಶ್. ಉಪಸ್ಥಿತರಿದ್ದರು.