Friday, April 18, 2025
Google search engine

Homeರಾಜ್ಯಆಗಸ್ಟ್ 13ರಿಂದ ಜಿಲ್ಲೆಯಲ್ಲಿ ಕನ್ನಡ ಜ್ಯೋತಿ ರಥಯಾತ್ರೆ ಸಂಚಾರ: ಅದ್ದೂರಿ ಸ್ವಾಗತ,ಅಗತ್ಯಕ್ರಮಕ್ಕೆ ಎಡಿಸಿ ಸೂಚನೆ

ಆಗಸ್ಟ್ 13ರಿಂದ ಜಿಲ್ಲೆಯಲ್ಲಿ ಕನ್ನಡ ಜ್ಯೋತಿ ರಥಯಾತ್ರೆ ಸಂಚಾರ: ಅದ್ದೂರಿ ಸ್ವಾಗತ,ಅಗತ್ಯಕ್ರಮಕ್ಕೆ ಎಡಿಸಿ ಸೂಚನೆ

ರಾಮನಗರ: ಮುಂಬರುವ ಆಗಸ್ಟ್ ೧೩ ರಿಂದ ೧೭ ರವರೆಗೆ ಕನ್ನಡ ಜ್ಯೋತಿ ರಥಯಾತ್ರೆಯು ಜಿಲ್ಲೆಯಲ್ಲಿ ಸಂಚರಿಸಲಿದ್ದು ಆ ಸಂದರ್ಭದಲ್ಲಿ ರಥಯಾತ್ರೆಗೆ ಅದ್ದೂರಿ ಸ್ವಾಗತ ಕೋರುವುದು ಸೇರಿದಂತೆರಥ ಸಂಚರಿಸುವ ಮಾರ್ಗಗಳಲ್ಲಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಚಂದ್ರಯ್ಯ ಅವರು ಜಿಲ್ಲೆಯ ತಹಶೀಲ್ದಾರರಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜು.೨೩ರ ಮಂಗಳವಾರ ಈ ಕುರಿತು ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯಲ್ಲಿಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೈಸೂರುರಾಜ್ಯವು ಕರ್ನಾಟಕ ಎಂದು ಮರುನಾಮಕರಣವಾಗಿ೨೦೨೩ರ ನವೆಂಬರ್ ೧ಕ್ಕೆ ೫೦ ವರ್ಷ ಪೂರ್ಣಗೊಂಡಿದೆ ಈ ಶುಭ ಸಂದರ್ಭದಲ್ಲಿ ಹೆಸರಾಯಿತುಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಹೆಸರಿನಲ್ಲಿ ಕರ್ನಾಟಕದ ಇತಿಹಾಸ, ಕಲೆ, ಸಾಹಿತ್ಯ ಸಂಸ್ಕೃತಿ ಹಾಗೂ ನಾಡು-ನುಡಿಗೆ ಸಂಬಂಧಿಸಿದಂತೆ ಮತ್ತುಯುವಜನತೆಯಲ್ಲಿಕನ್ನಡ-ಕನ್ನಡಿಗ-ಕರ್ನಾಟಕದ ಅರಿವು ಮೂಡಿಸುವ ಯೋಜನೆಗಳನ್ನು ಹಮ್ಮಿಕೊಳ್ಳಬೇಕಾಗಿರುತ್ತದೆ ಎಂದರು. ಕನ್ನಡಜ್ಯೋತಿರಥವುಆಗಸ್ಟ್ ೧೩ ರಂದು ಮಾಗಡಿ, ೧೪ ರಂದುರಾಮನಗರ, ೧೫ ರಂದು ಹಾರೋಹಳ್ಳಿ, ೧೬ ರಂದುಕನಕಪುರ ಮತ್ತುಆಗಸ್ಟ್ ೧೭ ರಂದುಚನ್ನಪಟ್ಟಣಕ್ಕೆಆಗಮಿಸಲಿದೆಎಂದು ತಿಳಿಸಿದರು.

ಕನ್ನಡ ಜ್ಯೋತಿ ರಥಯಾತ್ರೆಯು ಜಿಲ್ಲೆಯಲ್ಲಿ ಆಗಸ್ಟ್ ೧೩ ರಿಂದ ೧೭ ರವರೆಗೆ ಸಂಚರಿಸಲಿದ್ದು ಈ ಸಂಬಂಧಜನಪ್ರತಿನಿಧಿಗಳು, ಶಾಲಾ ಶಿಕ್ಷಣ ಇಲಾಖೆ ಹಾಗೂ ಕನ್ನಡ ಪರ ಸಂಘಟನೆಗಳ ಸಹಯೋಗದಲ್ಲಿ ಪೂರ್ವಭಾವಿ ಸಭೆ ಹಮ್ಮಿಕೊಂಡುರಥ ಸಂಚಾರದಲ್ಲಿ ಯಾವುದೇ ಸಮಸ್ಯೆಗಳು ಉದ್ಬವಿಸದಂತೆಎಲ್ಲಾ ತಹಶೀಲ್ದಾರರು ಎಚ್ಚರಿಕೆ ವಹಿಸಬೇಕು, ರಥವು ನಗರದಲ್ಲಿ ಸಂಚರಿಸುವ ಮಾರ್ಗವನ್ನು ಮೊದಲೇ ಸಿದ್ದಪಡಿಸಿ ಸಂಬಂಧಪಟ್ಟ ಪೊಲೀಸ್‌ಠಾಣೆಗೆ ಮಾಹಿತಿ ನೀಡಬೇಕೆಂದರು. ಕನ್ನಡಜ್ಯೋತಿರಥಯಾತ್ರೆಯನ್ನುಅದ್ದೂರಿಯಾಗಿ ಬರಮಾಡಿಕೊಂಡು ನಂತರ ಬಿಳ್ಕೋಡಬೇಕು, ಈ ಮಧ್ಯೆಕನ್ನಡಜ್ಯೋತಿರಥಯಾತ್ರೆ ಸಂಚರಿಸುವ ವೇಳೆ ಖುದ್ದು ತಹಶೀಲ್ದಾರುಗಳು ಹಾಜರಿದ್ದುಯಾವುದೇ ಲೋಪದೋಗಳು ಆಗದಂತೆ ಕ್ರಮವಹಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ವರದಿ ಸಲ್ಲಿಸುವಂತೆನಿರ್ದೇಶನ ನೀಡಿದರು.

ಕನ್ನಡ ಮತ್ತು ಸಂಸ್ಕೃತಿಇಲಾಖೆಯ ಸಹಾಯಕ ನಿರ್ದೇಶಕರಮೇಶ್ ಬಾಬು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಾಗೇಶ್ ಬಿ.ಟಿ, ಕನ್ನಡ ಪರ ಸಂಘಟನೆಯ ಮುಖ್ಯಸ್ಥರುಗಳಾದ ರಾಜು, ರವಿ, ಶಿವು, ಜಗದೀಶ್, ಮಾದೇಗೌಡ, ಕಿರಣ್, ಜಯಕುಮಾರ್ ಹಾಗೂ ಇತರರು ಸಭೆಯಲ್ಲಿ ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular