Friday, April 4, 2025
Google search engine

Homeರಾಜ್ಯಸುದ್ದಿಜಾಲಕನ್ನಡ ಭಾಷೆಯೇ ಶ್ರೇಷ್ಠ ಭಾಷೆ : ಶೋಭಾ ರಮೇಶ್ ಅಭಿಮತ

ಕನ್ನಡ ಭಾಷೆಯೇ ಶ್ರೇಷ್ಠ ಭಾಷೆ : ಶೋಭಾ ರಮೇಶ್ ಅಭಿಮತ

ಮೈಸೂರು: ಮೈಸೂರಿನ ಮರುಳೆಶ್ವರ ಭವನದಲ್ಲಿ ನೇಗಿಲಯೋಗಿ ಮಹಿಳಾ ಕ್ಷೇಮಾಭಿವೃದ್ದಿ ಸಂಗದ ವತಿಯಿಂದ ಇಂದು ನಡೆದ ಕನ್ನಡ ರಾಜ್ಯೊತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.ನಮ್ಮ ಮಾತೃ ಭಾಷೆ ಯಾದ ಕನ್ನಡವೇ ಕನ್ನಡಿಗರಾದ ನಮ್ಮೆಲ್ಲರಿಗೂ ಶ್ರೇಷ್ಠ ವಾದ ಭಾಷೆಯಾಗಿದೆ. ಸುಮಾರು 2000 ಕ್ಕೂ ಹೆಚ್ಚು ಇತಿಹಾಸ ವನ್ನು ಹೊಂದಿರುವ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾಗಿರುವ ಕನ್ನಡ ಭಾಷೆಯು ಪರಕೀಯ ಭಾಷೆಯ ವ್ಯಾಮೋಹ ದಿಂದ ಸೊರಗುತ್ತಿದೆ. ಕನ್ನಡ ಬಳಸುವುದೇ ಅವಮಾನ ಎಂಬ ಹಂತಕ್ಕೆ ಇಂದಿನ ಯುವ ಸಮೂಹ ಮತ್ತು ಪೋಷಕರು ಬಂದಿದ್ದಾರೆ. ಇದು ಅತ್ಯಂತ ಅಪಾಯಕಾರಿ ಎಂದು ತಿಳಿಸಿದರು. ಕನ್ನಡ ವನ್ನು ಹೆಚ್ಚು ಹೆಚ್ಚು ಬಳಸುವ ಮೂಲಕ ಅದರ ಬೆಳೆವಣಿಗೆಗೆ ನಾವೆಲ್ಲ ದುಡಿಯ ಬೇಕಾಗಿದೆ ಎಂದು ಕರೆ ನೀಡಿದರು.

ಬೇರೆ ಭಾಷೆಯನ್ನು ಗೌರವಿಸೋಣ ನಮ್ಮ ಭಾಷೆ ಯನ್ನು ಪ್ರೀತಿಸಿ, ಬಳಸಿ ಬೆಳೆಸೋಣ ಎಂದು ತಿಳಿಸಿದರು. ಎಂದಿಗೂ ನಮ್ಮ ತಾಯಿ ನಮ್ಮವಳು ಎಂದು ಹೇಳಿದರು. ಕನ್ನಡಾಂಬೆಗೆ ದೀಪ ಬೆಳಗಿಸಿ ಹಚ್ಚೇವು ಕನ್ನಡದ ದೀಪ ಹಾಡನ್ನು ಎಲ್ಲಾ ಸದಸ್ಯರು ಒಟ್ಟಿಗೆ ಜೊತೆಗೂಡಿ ಹಾಡಿದರು. ಇದೆ ಸಂದರ್ಭದಲ್ಲಿ ಸದಸ್ಯರಿಗೆ ಕನ್ನಡ ನಾಡು ನುಡಿಯ ಬಗೆಗೆ ಜಾಗೃತಿ ಮೂಡಿಸಲಾಯಿತು .

ಸಮಾರಂಭದ ಪ್ರಯುಕ್ತ ಕನ್ನಡ ಭಾಷೆಯ ಬಗ್ಗೆ ಅವರ ಭಾವನೆಗಳಿಗೆ ಮಾತುಗಳು, ಹಾಗು ವಿವಿಧ ಆಟಗಳಾದ ಚಮಚ ನಿಂಬೆಹಣ್ಣಿನ ಓಟ, ಬಳೆಗಳನ್ನು ಬೆರಳಿನಲ್ಲಿ ಹಿಡಿದು ಗುರಿ ಮುಟ್ಟುವುದು, ಪಗಡೆ ,ಅಳಿಗುಳಿ ಮನೆ , ಮುಂತಾದ ಮನರಂಜನಾ ಸ್ಪರ್ದೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ 100 ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದ್ದರು. ಸದಸ್ಯರುಗಳು ಕನ್ನಡ ನಾಡಿನ ಸಂಕೇತವಾದ ಹಳದಿ ಮತ್ತು ಕೆಂಪು ಬಣ್ಣದ ಉಡುಗೆ ಧರಿಸಿ ಬಂದು ಸಂಭ್ರಮದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

RELATED ARTICLES
- Advertisment -
Google search engine

Most Popular