Monday, April 21, 2025
Google search engine

Homeಸಿನಿಮಾಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಿಂಚಲಿವೆ ಕನ್ನಡದ ಸಿನಿಮಾಗಳು

ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಿಂಚಲಿವೆ ಕನ್ನಡದ ಸಿನಿಮಾಗಳು

ಗೋವಾ ಸಿನಿಮಾ ಉತ್ಸವ ಎಂದೇ ಕರೆಯಲಾಗುವ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಘೋಷಣೆಯಾಗಿದ್ದು, ಸಿನಿಮಾ ಪ್ರವೇಶಕ್ಕೆ ಆಹ್ವಾನ ನೀಡಲಾಗಿದೆ. ಬಾಕ್ಸ್ ಆಫೀಸ್‌ನಲ್ಲಿ ಈಗಾಗಲೇ ಕಮಾಲ್ ತೋರಿಸುತ್ತಿರುವ ದಕ್ಷಿಣ ಭಾರತದ ಸಿನಿಮಾಗಳು, ಗೋವಾ ಸಿನಿಮೋತ್ಸವದಲ್ಲಿಯೂ ಕಮಾಲ್ ಮಾಡುವುದು ಪಕ್ಕಾ ಆಗಿದ್ದು, ಕೇವಲ ಕಲಾತ್ಮಕ ಅಥವಾ ಬ್ರಿಜ್ ಸಿನಿಮಾಗಳು ಮಾತ್ರವೇ ಅಲ್ಲದೆ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಯಶಸ್ಸು ಕಂಡ ದಕ್ಷಿಣದ ಸಿನಿಮಾಗಳು ಸಹ ಸಿನಿಮೋತ್ಸವದಲ್ಲಿ ಪ್ರದರ್ಶನ ಕಾಣಲಿವೆ.

ಕನ್ನಡದ ಕಾಂತಾರ ಸಿನಿಮಾ ಈ ವರ್ಷ ಗೋವಾ ಸಿನಿಮೋತ್ಸವದ ಪ್ರಮುಖ ಸಿನಿಮಾಗಳಲ್ಲಿ ಒಂದಾಗಿದೆ. ಅದರ ಜೊತೆಗೆ ಕನ್ನಡದ ಪಿಂಕಿ ಎಲ್ಲಿ, ಇನ್ನೂ ಕೆಲವು ಕನ್ನಡ ಸಿನಿಮಾಗಳು ಸಹ ಸಿನಿಮೋತ್ಸವದಲ್ಲಿ ಪ್ರದರ್ಶನಗೊಳ್ಳುವ ಸಾಧ್ಯತೆ ಇದೆ. ಕೆಜಿಎಫ್ -೨ ಸಿನಿಮಾ ಸಹ ಪಾಪ್ಯುಲರ್ ಸಿನಿಮಾ ವಿಭಾಗದಲ್ಲಿ ಪ್ರದರ್ಶನಗೊಳ್ಳುವ ಸಾಧ್ಯತೆ ಇದೆ.

ನ. ೨೦ಕ್ಕೆ ಗೋವಾ ಸಿನಿಮೋತ್ಸವವು ಆರಂಭಗೊಳ್ಳಲಿದ್ದು, ನ. ೨೮ಕ್ಕೆ ಸಿನಿಮೋತ್ಸವ ಅಂತ್ಯವಾಗಲಿದೆ. ಹಾಲಿವುಡ್‌ನ ಜನಪ್ರಿಯ ನಟ, ನಿರ್ಮಾಪಕ ಮೈಖಲ್ ಡಗ್ಲಸ್ ಅವರಿಗೆ ಸಿನಿಮೋತ್ಸವದಲ್ಲಿ ಸತ್ಯಜಿತ್ ರೇ ಜೀವನಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಈಗಾಗಲೇ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರು ಘೋಷಣೆ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular