Friday, April 11, 2025
Google search engine

Homeರಾಜ್ಯಸುದ್ದಿಜಾಲಕನ್ನಡ ರಾಜ್ಯೋತ್ಸವ : ೨೮ ಸಾಧಕರಿಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಸನ್ಮಾನ

ಕನ್ನಡ ರಾಜ್ಯೋತ್ಸವ : ೨೮ ಸಾಧಕರಿಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಸನ್ಮಾನ

ಚಿತ್ರದುರ್ಗ : ಜಿಲ್ಲಾಡಳಿತದ ವತಿಯಿಂದ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ಏರ್ಪಡಿಸಿದ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಜಿಲ್ಲೆಯ ೨೮ ಜನ ಸಾಧಕರಿಗೆ ಜಿಲ್ಲಾ ಉಸ್ತುವಾರಿ ಹಾಗೂ ಯೋಜನೆ ಮತ್ತು ಸಾಂಖ್ಯಿಕ ಸಚಿವರಾದ ಡಿ. ಸುಧಾಕರ್ ಅವರು ಸನ್ಮಾನಿಸಿ ಗೌರವಿಸಿದರು.

ಸನ್ಮಾನಿತಗೊಂಡವರ ವಿವರ ಇಂತಿದೆ. ವರ್ಷ, ಆದಿವಾಲ, ಹಿರಿಯೂರು ತಾಲ್ಲೂಕು- ಕ್ರೀಡಾ ಕ್ಷೇತ್ರ (ವಿಶೇಷ ಚೇತನರು). ಶ್ರೇಯ ಬಿನ್ ಕೆ. ಕುಮಾರಸ್ವಾಮಿ, ಚಿತ್ರದುರ್ಗ- ಕ್ರೀಡೆ, ರವಿ ಅಂಬೇಕರ್ ಯೋಗ ತರಬೇತುದಾರರು, ಚಿತ್ರದುರ್ಗ-(ಕ್ರೀಡೆ). ಡಾ. ಆರ್.ಎ. ದಯಾನಂದಮೂರ್ತಿ, ಚಳ್ಳಕೆರೆ- ಕೃಷಿ. ಕೆ.ಸಿ. ಹೊರಕೇರಪ್ಪ, ಹಿರಿಯೂರು- ಕೃಷಿ. ಮೋಹನ ಮುರಳಿ, ಚಿತ್ರದುರ್ಗ- ಚಿತ್ರಕಲೆ. ಟಿ.ಎಂ. ವೀರೇಶ್, ಚಿತ್ರದುರ್ಗ- ಚಿತ್ರಕಲೆ. ಜಿ. ಪರಶುರಾಮ, ಚಿತ್ರದುರ್ಗ- ಭೂವಿಜ್ಞಾನಿ. ಡಾ. ದೀಪಕ್ ಆರ್.ಎಸ್., ಚಿತ್ರದುರ್ಗ- ಸಂಶೋಧನೆ. ಡಾ. ಪಿ.ವಿ. ಶ್ರೀಧರ ಮೂರ್ತಿ, ಚಿತ್ರದುರ್ಗ- ವೈದ್ಯಕೀಯ. ಡಾ. ಬಿ. ಚಂದ್ರನಾಯ್ಕ್, ನವಜಾತ ಶಿಶು ಮತ್ತು ಮಕ್ಕಳ ತಜ್ಞರು, ಚಿತ್ರದುರ್ಗ- ವೈದ್ಯಕೀಯ. ಹನುಮಂತಪ್ಪ, ಹೊಸದುರ್ಗ- ಶಿಕ್ಷಣ. ಜಿ.ಎಸ್. ವಸಂತ, ಮೊಳಕಾಲ್ಮೂರು ತಾಲ್ಲೂಕು- ಶಿಕ್ಷಣ. ಡಾ. ಸ್ವಾಮ್ಯ, ಕೆಳಗೋಟೆ- ಸಮಾಜಸೇವೆ. ವೀಣಾ ಗೌರಣ್ಣ, ಚಿತ್ರದುರ್ಗ- ಸಮಾಜ ಸೇವೆ. ಪ್ರೊ. ಜಿ. ಪರಮೇಶ್ವರಪ್ಪ, ಚಿತ್ರದುರ್ಗ- ಸಾಹಿತ್ಯ. ಬಾಗೂರು ಆರ್. ನಾಗರಾಜಪ್ಪ, ಹೊಸದುರ್ಗ ತಾಲ್ಲೂಕು- ಸಾಹಿತ್ಯ. ಎಸ್.ಡಿ. ರಾಮಸ್ವಾಮಿ, ಚಿತ್ರದುರ್ಗ- ರಂಗಭೂಮಿ. ಡಿ. ಶ್ರೀಕುಮಾರ್, ಚಿತ್ರದುರ್ಗ- ರಂಗಭೂಮಿ. ಶೈಲಜ ಸುದರ್ಶನ್, ಚಿತ್ರದುರ್ಗ- ಸಂಗೀತ. ಡಿ.ಓ. ಮುರಾರ್ಜಿ, ಚಿಕ್ಕೋಬನಹಳ್ಳಿ- ಸಂಗೀತ. ಜಿ. ರಾಜಣ್ಣ, ಚಿತ್ರದುರ್ಗ- ಜಾನಪದ. ಶ್ರೀನಿವಾಸ, ಚಿಕ್ಕುಂತಿ, ಮೊಳಕಾಲ್ಮೂರು ತಾಲ್ಲೂಕು- ಜಾನಪದ. ಲಕ್ಷ್ಮಣ ಹೆಚ್., ವರದಿಗಾರರು, ಕ್ರಾಂತಿದೀಪ ಕನ್ನಡ ದಿನಪತ್ರಿಕೆ, ಚಿತ್ರದುರ್ಗ- ಪತ್ರಿಕೋದ್ಯಮ, ರವಿ ಮಲ್ಲಾಪುರ, ಸಂಪಾದಕರು, ನಳಂದ ಕನ್ನಡ ದಿನಪತ್ರಿಕೆ, ಚಿತ್ರದುರ್ಗ- ಪತ್ರಿಕೋದ್ಯಮ, ವೀರೇಶ್ ವಿ., ವರದಿಗಾರರು, ರಿಪಬ್ಲಿಕ್ ಟಿ.ವಿ., ಕನ್ನಡ, ಚಿತ್ರದುರ್ಗ- ಪತ್ರಿಕೋದ್ಯಮ, ಮಂಜುನಾಥ್ ಟಿ.ವಿ.-೯ ಕ್ಯಾಮೆರಾಮನ್, ಚಿತ್ರದುರ್ಗ- ಛಾಯಾಗ್ರಹಣ. ದ್ವಾರಕನಾಥ್, ಕನ್ನಡಪ್ರಭ ಫೋಟೋಗ್ರಾಫರ್, ಚಿತ್ರದುರ್ಗ- ಛಾಯಾಗ್ರಹಣ.

ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂಧರ್ ಕುಮಾರ್ ಮೀನಾ, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ತಹಶೀಲ್ದಾರ್ ನಾಗವೇಣಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಸ್ವಾಮಿ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular