Friday, April 11, 2025
Google search engine

Homeಸಿನಿಮಾಖ್ಯಾತ ನಟರಾದ ಬ್ಯಾಂಕ್​ ಜನಾರ್ದನ್​, ಡಿಂಗ್ರಿ ನಾಗರಾಜ್​ಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ

ಖ್ಯಾತ ನಟರಾದ ಬ್ಯಾಂಕ್​ ಜನಾರ್ದನ್​, ಡಿಂಗ್ರಿ ನಾಗರಾಜ್​ಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ

2022-23ನೇ ಸಾಲಿನ ಕನ್ನಡ ರಾಜ್ಯೋತ್ಸವ  ಪ್ರಶಸ್ತಿ ಪ್ರಕಟ ಆಗಿದೆ. ನಾಡಿನ ವಿವಿಧ ಕ್ಷೇತ್ರಗಳ ಅನೇಕ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಈ ಬಾರಿ ಚಲನಚಿತ್ರ ಕ್ಷೇತ್ರದಿಂದ ಅನುಭವಿ ಕಲಾವಿದರಾದ ಬ್ಯಾಂಕ್​ ಜನಾರ್ದನ್​ ಮತ್ತು ಡಿಂಗ್ರಿ ನಾಗರಾಜ್ ​ ಅವರಿಗೆ ಪ್ರಶಸ್ತಿ ಘೋಷಣೆ ಆಗಿದೆ. ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಈ ಕಲಾವಿದರು ಸಕ್ರಿಯರಾಗಿದ್ದಾರೆ. ನೂರಾರು ಸಿನಿಮಾಗಳ ಮೂಲಕ ಜನರನ್ನು ರಂಜಿಸಿದ್ದಾರೆ. ​ ಮತ್ತು ಬ್ಯಾಂಕ್​ ಜನಾರ್ದನ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಆಗಿರುವುದಕ್ಕೆ ಅವರ ಅಭಿಮಾನಿಗಳಿಗೆ ಸಂತಸ ಆಗಿದೆ. ಚಿತ್ರರಂಗದವರು, ಆಪ್ತರು, ಅಭಿಮಾನಿಗಳು ಈ ಕಲಾವಿದರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ರಾಜ್ಯ ಸರ್ಕಾರವು ಇಂದು (ಅಕ್ಟೋಬರ್​ 31) ಮಧ್ಯಾಹ್ನ ಬಿಡುಗಡೆ ಮಾಡಿದೆ. ಸಂಘ-ಸಂಸ್ಥೆಗಳು ಮತ್ತು ವೈಯಕ್ತಿಕವಾಗಿ ಒಟ್ಟು 68 ರಾಜ್ಯೋತ್ಸವ ಪ್ರಶಸ್ತಿಯನ್ನು ಈ ಬಾರಿ ನೀಡಲಾಗುತ್ತಿದೆ. ಸಂಗೀತ, ಸಿನಿಮಾ, ಕ್ರೀಡೆ, ನ್ಯಾಯಾಂಗ, ರಂಗಭೂಮಿ, ಶಿಕ್ಷಣ, ಪರಿಸರ, ಮಾಧ್ಯಮ, ತಂತ್ರಜ್ಞಾನ ಸೇರಿದಂತೆ ಹಲವು ವಿಭಾಗಗಳಲ್ಲಿ ಪ್ರಶಸ್ತಿಗೆ ಅನೇಕರು ಭಾಜನರಾಗಿದ್ದಾರೆ.

RELATED ARTICLES
- Advertisment -
Google search engine

Most Popular