Tuesday, April 22, 2025
Google search engine

Homeರಾಜ್ಯಮಂಡ್ಯದ ಕೆ.ಟಿ.ಚಂದು ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಮಂಡ್ಯದ ಕೆ.ಟಿ.ಚಂದು ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಬೆಂಗಳೂರು: ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟವಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಮಂಡ್ಯದ ಕೆ.ಟಿ.ಚಂದು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ದಿನಾಂಕ 22-10-1930 ರಂದು ಕೋಣಾಸಾಲೆ ಪಟೇಲ್ ತಮ್ಮಣ್ಣಗೌಡ  ಲಿಂಗಮ್ಮ ದಂಪತಿಯ 4 ಜನ ಗಂಡು ಮಕ್ಕಳು ಒಬ್ಬಳು ಹೆಣ್ಣು ಮಕ್ಕಳ ಕುಟುಬದಲ್ಲಿ ಎರಡನೇ ಒಡಲ ಕೂಡಿಯಾಗಿ ಕೆ. ಟಿ. ಚಂದು ಜನಿಸಿದ ಇವರಿಗೆ ಎಚ್. ಕೆ .ವೀರಣ್ಣಗೌಡ ತಾಯಮ್ಮ ದಂಪತಿಗಳು ಪ್ರೀತಿಯಿಂದ ಹರಸಿ ಹಾರೈಸಿ ಇಟ್ಟ ಹೆಸರು ಕೆ. ಟಿ ಚಂದ್ರಮೌಳಿ.

ನಂತರ ರೂಡಿಗತವಾಗಿ ಇವರನ್ನು ಕೆ. ಟಿ.ಚಂದು ಎಂದು ಕರೆಯಲಾಯಿತು. ಕೆ. ಟಿ. ಚಂದು ರವರು 91ರ ವಯಸ್ಸಿನ ತಮ್ಮ ಜೀವನ, ಇಟ್ಟ ಹೆಜ್ಜೆ ನಡೆದು ಬಂದ ದಾರಿ ಅನುಕರಣೆಯವಾಗಿದೆ. ತಮ್ಮ ಜೀವನವನ್ನು ಕೇವಲ ಪ್ರದರ್ಶನ ಮಾಡದ ನಿದರ್ಶನ ನಡೆಸಿದರು.

New Doc 2023-10-30 19.49.57

ಕೋಣಸಾಲೆ ತಮ್ಮಣ್ಣ ಗೌಡ ಚಂದು ರವರದು ಬಹುಮುಖ ಪ್ರತಿಭೆಯ ವ್ಯಕ್ತಿತ್ವ. ಸ್ವಾತಂತ್ರ್ಯ ಹೋರಾಟಗಾರ, ಬರಹಗಾರ, ಗಾಂಧಿವಾದಿ, ಕನ್ನಡಸಾಹಿತ್ಯ ಅಭಿಮಾನಿ, ಸಹಕಾರ ಸಂಘಟಕ, ಪುಸ್ತಕ ಪ್ರೇಮಿ, ರೈತ ಹೋರಾಟಗಾರ, ಪ್ರಗತಿಪರ ರೈತ, ಹೀಗೆ ಹಲವಾರು ಸೇವೆ ಮತ್ತು ಕಾರ್ಯ ಚಟುವಟಿಕೆಗಳಿಂದ  ಈ ಭಾಗದ ಜನರಿಗೆ ಅವರು ಪರಿಚಿತರಾಗಿದ್ದು ತಮ್ಮ ಸರಳ-ಸಜ್ಜನ, ಮುಗ್ಧ ಮನಸು, ನಯಾ-ವಿನಯದಂತಹ ಸಚ್ಚಾರಿತ್ರ್ಯ ಗುಣಗಳಿಂದಾಗಿ ಜನ ‘ಚಂದು ಅಣ್ಣ’ ಎಂದು ಕರೆಯುತ್ತಾರೆ.

ಕೆಟಿ ಚಂದುರವರ  ಸೇವಾತತ್ವರ ಕ್ಷೇತ್ರಗಳು.

1947- ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿ.

1965- ಎಂ ಹೆಚ್  ಚನ್ನೇಗೌಡ ವಿದ್ಯಾನಿಲಯ ಸ್ಥಾಪನೆ ಸ್ಥಾಪಕ ಕಾರ್ಯದರ್ಶಿಯಾಗಿ ನಿರಂತರ ಸೇವೆ ಪ್ರಸ್ತುತ ಗೌರವಾಧ್ಯಕ್ಷರಾಗಿರುತ್ತಾರೆ.

1971- ತೆಂಗಿನಕಾಯಿ ಮಂಡಳಿ ರಾಜ್ಯ ಸಮಿತಿ ಸದಸ್ಯ.

1963-71 ಮದ್ದೂರು ತಾಲೂಕು ವ್ಯವಸಾಯ ಉತ್ಪನ್ನಗಳ ಸಹಕಾರಿ ಅಧ್ಯಕ್ಷ.

1971-ಬೆಂಗಳೂರು ಹಾಲು ಉತ್ಪಾದಕರ ಸಂಘ ಯೂನಿಯನ್ ಮಂಡಳಿ ಸದಸ್ಯ.

1971-ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಂಘಟನೆ.

1971-ರಾಜ್ಯದಲ್ಲೇ ಪ್ರಥಮ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮದ್ದೂರಿನಲ್ಲಿ ಸಂಘಟನೆ.

1971-79 ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ.

1974- ಕರ್ನಾಟಕ ರಾಜ್ಯ ರೈತ ಮತ್ತು ರೈತ ಕಾರ್ಮಿಕ ಸಂಘ ಸಂಘಟನಾ ಕಾರ್ಯದರ್ಶಿ.

1975- ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂಘಟನೆ.

1974-80- ಮದ್ದೂರು ಪುರಸಭೆ ಅಧ್ಯಕ್ಷ.

1977- ವರುಣ ನಾಲಾ ಚಳುವಳಿ ತಾಲೂಕು ಕಾರ್ಯದರ್ಶಿ.

1995- ಮದ್ದೂರಿನಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ರೂವಾರಿ.

1974- ಜಿಲ್ಲಾ ಶಿಕ್ಷಕರ ಆಯ್ಕೆಸಮಿತಿಯ ಸದಸ್ಯನ ಸೇವೆ.

2003- ಜಿಲ್ಲಾ ಆಡಳಿತದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ.

2012- ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ.

1980-2000- ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಮಂಡ್ಯದ ನಿರ್ದೇಶಕರು ಹೆಚ್.ಕೆ ವೀರಣ್ಣಗೌಡರ ಮಾರ್ಗದರ್ಶನದೊಡನೆ ಸ್ಥಾಪಿತ ಕೆ.ಟಿ ಚಂದುರವರು ಸಂಸ್ಥಾಪಕ ಕಾರ್ಯದರ್ಶಿಗಳಾಗಿ ಪ್ರಸ್ತುತ ಗೌರವ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಶಿಕ್ಷಣ ಸಂಸ್ಥೆಗಳು ಶ್ರೀಮತಿ ತಾಯಮ್ಮ ವೀರಣ್ಣ ಗೌಡ ಶಿಶುವಿಹಾರ ಮದ್ದೂರು.

1965- ಜವಾಹರ್ ಪ್ರೌಢಶಾಲೆ ಮದ್ದೂರು.

1967- ಕಮಲ ನೆಹರು ಬಾಲಕಿಯರ ಪ್ರೌಢಶಾಲೆ, ಮದ್ದೂರು.

1969- ಕಸ್ತೂರಿಬಾ ಉನ್ನತ ಪ್ರಾಥಮಿಕ ಶಾಲೆ ಮದ್ದೂರು.

1970-71 ಅರ್ಜುನ ಪುರಿ ಕಲೆ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಮದ್ದೂರು

1978- ಎಚ್ ಕೆ ವೀರಣ್ಣಗೌಡ ಪದವಿ  ಕಾಲೇಜು, ಮದ್ದೂರು.

2000- ಡಾ.ಎಚ್ ಕೆ ಮರಿಯಪ್ಪ ಕಾನ್ವೆಂಟ್ ಮದ್ದೂರು.

 2013-ಡಾ.ಶಾಂತ ಮರಿಯಪ್ಪ ಪಬ್ಲಿಕ್ ಸ್ಕೂಲ್ ಮದ್ದೂರು.

RELATED ARTICLES
- Advertisment -
Google search engine

Most Popular