ಮೈಸೂರು: ಕೇರಳ ಗಡಿಭಾಗವಾದ ಡಿಬಿ ಕುಪ್ಪೆ ಗ್ರಾಮದಲ್ಲಿ ಕನ್ನಡ ಅಭಿಮಾನಿಗಳು ಭುವನೇಶ್ವರಿ ತಾಯಿ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಕನ್ನಡ ಬಾವುಟವನ್ನು ಮೊದಲ ಬಾರಿಗೆ ಹಾರಿಸುವ ಮೂಲಕ ಕನ್ನಡ ರಾಜ್ಯೋತ್ಸವ ಆಚರಿಸಿದ್ದಾರೆ.
ಕಾರ್ಯಕ್ರಮದ ಸಾರಥ್ಯವನ್ನು ಅಂತರಸಂತೆ ಪೋಲೀಸ್ ದಪೇದರ್ ರವರಾದ ಸುರೇಶ್ ಟಿ ಚಕ್ಕೋಡನಹಳ್ಳಿ ರವರು ವಹಿಸಿಕೊಂಡಿದ್ದು, ಕಾರ್ಯಕ್ರಮದಲ್ಲಿ ಡಿಬಿ ಕುಪ್ಪೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಬ್ರಹ್ಮಣ್ಯ ಹಾಗೂ ಎಚ್ ಡಿ ಕೋಟೆ ಮಾಜಿ ನಾಮಿನೇಟ್ ಪುರಸಭಾ ಸದಸ್ಯರಾದ ಸಿದ್ದರಾಜು, ರಾಜೇಶ್ವರಿ ಹಾಗೂ ಒಡಕನ್ಮಾಳ ಹಾಗೂ ಡಿ ಬಿ ಕುಪ್ಪೆ ಗ್ರಾಮದ ಕನ್ನಡ ಅಭಿಮಾನಿಗಳು ಭಾಗವಹಿಸಿರುತ್ತಾರೆ.