ಮೈಸೂರು: ವಿಜಯನಗರ ಮೊದಲನೇ ಹಂತದಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ಭೈರವಿ ಗೌಡತಿ ಬಳಗದಿಂದ ಕನ್ನಡ ರಾಜ್ಯೋತ್ಸವವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಣೆ ಮಾಡಲಾಯಿತು. ಆ ಸಂದರ್ಭದಲ್ಲಿ ಆಶಾ ಮಂದಿರದ ಅಧ್ಯಕ್ಷರು ಹಾಗೂ ಸೂರಿಲ್ಲದವರಿಗೆ ಸೂರು ನೀಡಿದ ಮನೆ ಮನೆ ಮಾದೇಗೌಡರು ಎಂದು ಪ್ರಸಿದ್ಧಿಯಾಗಿರುವ ಇತ್ತೀಚೆಗೆ ಗೌರವ ಡಾಕ್ಟರೇಟ್ ಪದವಿ ಪಡೆದ ಡಾ. ಡಿ ಮಾದೇಗೌಡ ಅವರನ್ನು ಭೈರವಿಗೌಡತಿ ಬಳಗದಿಂದ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಡಾ.ಮಾದೇಗೌಡರು ಕನ್ನಡ ನಾಡು ನುಡಿಯ ಬಗ್ಗೆ ಮಾತನಾಡಿ ಕನ್ನಡವನ್ನು ಉಳಿಸಿ ಬೆಳೆಸಿ ಎನ್ನುವ ಸಂದೇಶವನ್ನು ಹೇಳಿದರು.
ಈ ಸಂದರ್ಭದಲ್ಲಿ ಭೈರವಿ ಗೌಡತಿ ಬಳಗದ ಅಧ್ಯಕ್ಷರಾದ ಪ್ರೇಮಾ ಶಂಕರೇಗೌಡ, ಪದಾಧಿಕಾರಿಗಳಾದ ರೇಣುಕಾ ಜಗದೀಶ್, ರಾಜೇಶ್ವರಿ ನಾಗರಾಜ್, ನಾಗಮಣಿ, ಸವಿತಾ ಗೋವಿಂದೇಗೌಡ, ಕಮಲ ಅನಿತಾ ರಘು, ಶಿವಕುಮಾರಿ ಲತಾ ರಾಣಿ ಹಾಗೂ ಭೈರವಿ ಗೌಡತಿ ಬಳಗದ ಸದಸ್ಯರು ಉಪಸ್ಥಿತರಿದ್ದರು.



