Monday, April 21, 2025
Google search engine

Homeರಾಜ್ಯಸುದ್ದಿಜಾಲಕನ್ನಡ ರಾಜ್ಯೋತ್ಸವ: ಘಾಟಿ ಸುಬ್ರಮಣ್ಯಸ್ವಾಮಿಗೆ ಮುತ್ತಿನ ಅಲಂಕಾರ

ಕನ್ನಡ ರಾಜ್ಯೋತ್ಸವ: ಘಾಟಿ ಸುಬ್ರಮಣ್ಯಸ್ವಾಮಿಗೆ ಮುತ್ತಿನ ಅಲಂಕಾರ

ದೊಡ್ಡಬಳ್ಳಾಪುರ: ಇಂದು ಕನ್ನಡ ರಾಜ್ಯೋತ್ಸವದ ಹಿನ್ನೆಲೆ ರಾಜ್ಯಾದ್ಯಂತ ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ. ಹಾಗೆ ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಘಾಟಿ ಕ್ಷೇತ್ರದಲ್ಲೂ ರಾಜ್ಯೋತ್ಸವ ಹಿನ್ನೆಲೆ ಸುಬ್ರಮಣ್ಯಸ್ವಾಮಿ ಮತ್ತು ನರಸಿಂಹಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ಘಾಟಿ ದೇವಾರಧನೆಗೆ ಕೊಡುವಷ್ಟೇ ಪ್ರಾಮುಖ್ಯತೆ ಕನ್ನಡನಾಡು, ಭಾಷೆಗೆ ಇಲ್ಲಿನ ದೇವಸ್ಥಾನ ಆಡಳಿತ ಮಂಡಳಿ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿವರ್ಷ ನವೆಂಬರ್೧ ಕನ್ನಡ ರಾಜ್ಯೋತ್ಸವದಂದು ಸುಬ್ರಮಣ್ಯಸ್ವಾಮಿ ಮತ್ತು ನರಸಿಂಹಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ.

ದೊಡ್ಡಬಳ್ಳಾಪುರದ ಮಂಗಳವಾರ ಭಕ್ತ ಮಂಡಳಿ ಕಳೆದ ೨೬ ವರ್ಷಗಳಿಂದ ಈ ವಿಶೇಷ ಅಲಂಕಾರದ ಸಂಪ್ರದಾಯವನ್ನ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಸುಬ್ರಮಣ್ಯ ಸ್ವಾಮಿಗೆ ಮುತ್ತಿನ ಅಲಂಕಾರ ಹಾಗೂ ಹಿಂಬದಿಯಲ್ಲಿರುವ ನರಸಿಂಹಸ್ವಾಮಿಗೆ ಬೆಣ್ಣೆ ಅಲಂಕಾರವನ್ನ ಮಾಡಲಾಗಿದೆ. ಮುಂಜಾನೆಯಿಂದಲೇ ದೇವರಿಗೆ ಅಭಿಷೇಕ ಮತ್ತು ಪೂಜೆಗಳು ಪ್ರಾರಂಭವಾಗಿದ್ದು ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದು ಘಾಟಿ ಸುಬ್ರಮಣ್ಯ ಕ್ಷೇತ್ರದ ಪ್ರಧಾನ ಅರ್ಚಕರಾದ ನಾಗೇಂದ್ರ ಶರ್ಮಾ ಅವರು ಹೇಳಿದರು.

RELATED ARTICLES
- Advertisment -
Google search engine

Most Popular