ಕೋಲಾರ: ಗಡಿನಾಡು ಕೋಲಾರದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಮಂಕಾಗಿತ್ತು. ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್ ಕಾರ್ಯಕ್ರಮ ಗೈರು ಹಾಜರಾಗಿದ್ದರು. ಕೋಲಾರ ಜಿಲ್ಲಾಧಿಕಾರಿ ಅಕ್ರಂ ಪಾಷಾ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಈ ಬದಲಾವಣೆ ಗಮನಿಸಿದ ಜಿಲ್ಲಾಧಿಕಾರಿ ಗೌರವವಂದನೆ ಸ್ವೀಕರಿಸಿದರು.
ಸಚಿವ ಸ್ಥಾನ ಬೇಕೆನ್ನುವವರು ರಾಜೀನಾಮೆ ಕೊಟ್ಟು ಮನೆಯಲ್ಲಿರಲಿ: ಶಾಸಕ ಕೊತ್ತೂರು ಮಂಜುನಾಥ್: ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನಕ್ಕೆ ಲಾಭಿ ಹೆಚ್ಚಿದೆ. ಸಚಿವ ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ವಿಚಾರವಾಗಿ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಸ್ವಪಕ್ಷದ ಶಾಸಕರಿಗೆ ತಿರುಗೇಟು ನೀಡಿದ್ದಾರೆ. ಸಚಿವ ಸ್ಥಾನ ಬೇಕೆನ್ನುವವರು ರಾಜೀನಾಮೆ ಕೊಟ್ಟು ಮನೆಯಲ್ಲಿರಲಿ. ಜನರು ನಮ್ಮನ್ನು ಗೆಲ್ಲಿಸಿರುವುದು ಅವರ ಸೇವೆ ಮಾಡುವುದಕ್ಕಾಗಿ ಎಂದು ಗರಂ ಆಗಿದ್ದಾರೆ.
ಕೋಲಾರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ನಾವು ೧೩೬ ಶಾಸಕರಿದ್ದೇವೆ, ನಮ್ಮ ಸರ್ಕಾರ ಬೀಳಿಸಲು ಆಗುವುದಿಲ್ಲ. ಅಂತಹ ಕನಸು ಯಾರೂ ಕಾಣುವುದು ಬೇಡ, ಸ್ಟ್ರಾಂಗ್ ಆಗಿ ಇದ್ದೇವೆ. ಆಪರೇಷನ್ ಕಮಲನೂ ಇಲ್ಲ, ಮರನೂ ಇಲ್ಲ, ಗಿಡವೂ ಇಲ್ಲ. ಸರ್ಕಾರ ಪತನಗೊಳಿಸುವ ಹೇಳಿಕೆ ಕೇವಲ ಊಹಾಪೋಹ ಅಷ್ಟೇ ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜಿಲ್ಲಾ ಮಟ್ಟದ ಸಾಧಕರನ್ನು ಸನ್ಮಾನಿಸಲಾಯಿತು. ಇದೇ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಸಕ ಕೊತ್ತೂರು ಮಂಜುನಾಥ್, ಕಾರ್ಯಕ್ರಮದಲ್ಲಿನ ಅವ್ಯವಸ್ಥೆಯನ್ನು ಒಪ್ಪಿಕೊಂಡು ಮುಂದಿನ ವರ್ಷ ಅದ್ಧೂರಿಯಾಗಿ ಕಾರ್ಯಕ್ರಮ ಮಾಡುವುದಾಗಿ ಹೇಳಿದರು.