ಮಂಡ್ಯ: ಫೋನ್ ಪೇ ಅನ್ ಇನ್ಸ್ಟಾಲ್ ಮಾಡಿ, ರಸ್ತೆಯಲ್ಲಿ ಮಲಗಿ ಫೋನ್ ಪೇ ಮಾಲೀಕನ ವಿರುದ್ಧ ಕನ್ನಡಿಗರು ಆಕ್ರೋಶ ಹೊರಹಾಕಿದ್ದಾರೆ.
ಕನ್ನಡಿಗರಿಗೆ ಉದ್ಯೋಗಕ್ಕಾಗಿ ಆಗ್ರಹಿಸಿ ಕನ್ನಡ ಸೇನೆ ವತಿಯಿಂದ ಮಂಡ್ಯದ ಸಂಜಯ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಬೆಂ-ಮೈ ಹೆದ್ದಾರಿ ತಡೆದು ರಸ್ತೆಯಲ್ಲೆ ಮಲಗಿ ಫೋನ್ ಪೇ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.
ಅಧಿವೇಶನದಲ್ಲಿ ಸರೋಜಿನಿ ಮಹಿಷಿ ವರದಿ ಜಾರಿ ಮಾಡಲು ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ಕೆ.ಆರ್.ಎಸ್ ಗೆ ಬಾಗೀನ ಬಿಡುವ ಸಂದರ್ಭದಲ್ಲಿ ಸಿಎಂಗೆ ಕಪ್ಪು ಪಟ್ಟಿ ಪ್ರದರ್ಶನ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕನ್ನಡಿಗರ ಬಗ್ಗೆ ಮಾತನಾಡಿದ ಫೋನ್ ಪೇ ಮಾಲೀಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಸಿ ಮತ್ತು ಡಿ ಗ್ರೂಪ್ ಕೆಲಸಕ್ಕೂ ವಿರೋಧ ಮಾಡ್ತಿದ್ದಾರೆ. ಕನ್ನಡಿಗರಿಗೆ ಯಾಕೆ ಇಷ್ಟೊಂದು ಅನ್ಯಾಯ. ತಕ್ಷಣವೇ ಮಸೂದೆ ಮಂಡನೆ ಮಾಡಬೇಕೆಂದು ಹಾಗೂ ಚಿತ್ರ ನಟರೂ, ಸಚಿವರು ಧ್ವನಿ ಎತ್ತಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಫೋನ್ ಫೇ ನಿಷೇಧ ಮಾಡುವಂತೆಯೂ ಮನವಿ ಮಾಡಿದ್ದಾರೆ.
ಹೆದ್ದಾರಿ ತಡೆಯಿಂದ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.