ರಾಯಚೂರು: ರಾಯಚೂರ ನಗರದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದಿಂದ, ೨೪ನೇ ಕಾರ್ಗಿಲ್ ವಿಜಯೋತ್ಸವದ ಸಂಭ್ರಮ ಆಚರಣೆ ಹಿನ್ನೆಲೆಯಲ್ಲಿ ಬೈಕ್ ರ್‍ಯಾಲಿ ನಡೆಸಿದರು.
ನಗರದ ಎಲಿವಿಡಿ ಮಹಾವಿದ್ಯಾಲಯದಿಂದ ಬೈಕ್ ರ್‍ಯಾಲಿ ಪ್ರಾರಂಭಗೊಂಡು ಪ್ರಮುಕ ವೃತಗಳಲ್ಲಿ ತಿರುಗಿ ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ವೃತ್ತದ ವರೆಗೆ ಬಂದು, ಅಂಬೇಡ್ಕರ್ ವೃತ್ತದಲ್ಲಿ ಮಾಲಾಪಣೆ ಮಾಡಿ, ವಿಜಯೋತ್ಸವ ಸಂಕೇತವಾಗಿ ‘ಜೈ ಜವಾನ್ ಜೈ ಕಿಸಾನ್’ ‘ಬೋಲೋ ಭಾರತ್ ಮಾತಾ ಕಿ ಜೈ’ ಎಂಬ ವಿವಿಧ ಘೋಷಣೆಗಳನ್ನು ಕೂಗಿದರು. ತದನಂತರ ಗಾಂಧಿ ವೃತ್ತಕ್ಕೆ ತೆರಳಿ ವಿಜಯೋತ್ಸವ ಆಚರಣೆ ಮಾಡಿ. ವಿಜಯೋತ್ಸವದ ಸಾಧನೆ ಮತ್ತು ಸೈನಿಕರ ಮಾಡಿದ ತ್ಯಾಗ ಬಲಿದಾನದ ಬಗ್ಗೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಲಾಗುವುದು, ಕೊನೆಗೆ ಮುಕ್ತಾಯ ಕಾರ್ಯಕ್ರಮವನ್ನು ನಗರದ ಸರಕಾರಿ ಪದವಿ ಮಹಾವಿದ್ಯಾಲಯದಲ್ಲಿ ನಡೆಸಲಾಗುವುದು ಎಂದು ಅಖಿಲ ಕರ್ನಾಟಕ ಮಾಜಿ ಸೈನಿಕರ ಜಿಲ್ಲಾಧ್ಯಕ್ಷ ಚನ್ನರೆಡ್ಡಿ ತಿಳಿಸಿದರು.