Friday, April 11, 2025
Google search engine

Homeರಾಜ್ಯಸುದ್ದಿಜಾಲಕರಿಂಕ: ಗಣೇಶ ಶೋಭಾಯಾತ್ರೆಯಲ್ಲಿ ಸೌಹಾರ್ದತೆ ಮೆರೆದ ಮುಸ್ಲಿಂ ಐಕ್ಯ ವೇದಿಕೆ

ಕರಿಂಕ: ಗಣೇಶ ಶೋಭಾಯಾತ್ರೆಯಲ್ಲಿ ಸೌಹಾರ್ದತೆ ಮೆರೆದ ಮುಸ್ಲಿಂ ಐಕ್ಯ ವೇದಿಕೆ

ಭಕ್ತಾದಿಗಳಿಗೆ ಐಸ್ ಕ್ರೀಮ್, ನೀರು ವಿತರಣೆ

ಮಂಗಳೂರು (ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅನಂತಾಡಿ ಕರಿಂಕದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ನಡೆದ ಶ್ರೀ ಗಣೇಶನ ಶೋಭಾಯಾತ್ರೆಯಲ್ಲಿ ಭಾಗವಹಿಸಿದ ಭಕ್ತಾದಿಗಳಿಗೆ ಮಾಣಿ ಸಮೀಪದ ಕೊಡಾಜೆಯ ಮುಸ್ಲಿಂ ಐಕ್ಯ ವೇದಿಕೆಯ ವತಿಯಿಂದ ಐಸ್ ಕ್ರೀಮ್ ಹಾಗೂ ನೀರು ವಿತರಿಸಿ ಸೌಹಾರ್ದತೆ ಮೆರೆದಿದ್ದಾರೆ.

ಶ್ರೀ ಗಣೇಶನ ಶೋಭಾಯಾತ್ರೆಯು ಕರಿಂಕದಿಂದ ಕೊಡಾಜೆಗೆ ಆಗಮಿಸಿ ನೇರಳಕಟ್ಟೆ ತನಕ ಸಾಗಿ ಅಲ್ಲಿಂದ ಪುನಃ ಅನಂತಾಡಿ ತೆರಳಿತು. ಈ ಮಧ್ಯೆ ಕೊಡಾಜೆಗೆ ಆಗಮಿಸಿದ ವೇಳೆ ಭಕ್ತಾದಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡ ಕೊಡಾಜೆ ಮುಸ್ಲಿಂ ಐಕ್ಯ ವೇದಿಕೆಯ ಸದಸ್ಯರು ಸೌಹಾರ್ದತೆಯ ಸಂಕೇತವಾಗಿ ಐಸ್ ಕ್ರೀಮ್ ಹಾಗೂ ಪಾನೀಯ ವಿತರಿಸಿದರು.

ಇದೇ ವೇಳೆ ಹಿಂದೂ ಧರ್ಮೀಯರು ಮಾತನಾಡಿ ಇಲ್ಲಿನ ಶಾಂತಿ ಸೌಹಾರ್ದತೆಯ ಮಾದರಿ ದೇಶದೆಲ್ಲೆಡೆ ಪಸರಿಸಲಿ ಎಂದು ಶುಭ ಹಾರೈಸಿದರು. ಇನ್ನು ಈ ಪರಿಸರದ ಹಿಂದೂ ಮುಸ್ಲಿಂ ಸಮುದಾಯದ ಬಾಂಧವರು, ಕೊಡಾಜೆ ಮುಸ್ಲಿಂ ಐಕ್ಯ ವೇದಿಕೆಯ ಸದಸ್ಯರು ಭಾಗವಹಿಸಿದ್ದರು

RELATED ARTICLES
- Advertisment -
Google search engine

Most Popular