ಬೆಂಗಳೂರು: ರಾಜ್ಯದೆಲ್ಲೆಡೆ ವಿವಿಧ ಸಂಘಟನೆಗಳಿಂದ ಕಾವೇರಿ ನೀರಿಗಾಗಿ ಬಂದ್, ಪ್ರತಿಭಟನೆ ನಡೆಯುತ್ತಿದೆ. ಇದೀಗ ಕಾವೇರಿಗಾಗಿ ರೈತರಪರ ಹೋರಾಟಕ್ಕೆ ಚಿತ್ರೋದ್ಯಮ ಬೆಂಬಲಕ್ಕೆ ನಿಂತಿದೆ. ಕಾವೇರಿಗಾಗಿ ಬೀದಿಗಿಳಿಯಲಿರುವ ಸ್ಯಾಂಡಲ್‌ವುಡ್ ತಾರೆಯರು ನಟ ಗುರುರಾಜ್ ಕಲ್ಯಾಣ ಮಂಟಪದಲ್ಲಿ ಪ್ರತಿಭಟನೆಗಿಳಿದಿದ್ದಾರೆ.
ಚಿತ್ರರಂಗದ ಕಲಾವಿದರು ಕನ್ನಡಪರ ಸಂಘಟನೆಗಳ ಪಾದಯಾತ್ರೆಯಿಂದ ದೂರ ಉಳಿದಿದ್ದಾರೆ. ಈಗಾಗಲೇ ಹಿರಿಯ ನಟ ಉಮಾಶ್ರೀ, ನಟರಾದ ಲೂಸ್ ಮಾದ ಯೋಗಿ, ಚಿಕ್ಕಣ್ಣ, ಹಿರಿಯ ನಟ ಶ್ರೀನಾಥ್, ನಟಿಯರಾದ ಪೂಜಾಗಾಂಧಿ, ಅನು ಪ್ರಭಾಕರ್, ರೂಪಿಕಾ, ಸೇರಿದಂತೆ ಪ್ರತಿಭಟನೆಯಲ್ಲಿ ಫಿಲ್ಮ್ ಚೇಂಬರ್ ಸದಸ್ಯರು ಭಾಗಿಯಾಗಿದ್ದಾರೆ.