ಮದ್ದೂರು: ಕರ್ನಾಟಕ ಬಂದ್ ಹಿನ್ನೆಲೆ ಮದ್ದೂರು ಪಟ್ಟಣ ಸ್ತಬ್ಧಗೊಂಡಿದೆ.
ರೈತ, ಕನ್ನಡ, ಪ್ರಗತಿಪರ ಸಂಘನೆಗಳು ಮದ್ದೂರು ಬಂದ್ ಗೆ ಕರೆ ನೀಡಿರುವ ಹಿನ್ನಲೆ ಅಂಗಡಿ ಮುಂಗಟ್ಟು ಮುಚ್ಚಲಾಗಿದೆ.
ಪೇಟೆ ಬೀದಿ, ಪಟ್ಟಣದ ಎಲ್ಲ ಅಂಗಡಿ ಮುಗ್ಗಟ್ಟುಗಳು ಬಂದ್ ಆಗಿದ್ದು, ಆಸ್ಪತ್ರೆ, ಮೆಡಿಕಲ್, ಹಾಲಿನ ಬೂತ್ ತೆರೆದಿವೆ.

ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮದಿಂದ ವಳಗೆರಹಳ್ಳಿ ಸಂಪರ್ಕಿಸುವ ರೈಲ್ವೆ ಗೇಟ್ ಬಗ್ಗೆ ಪೊಲೀಸ್ ಬಿಗಿ ಬಂದೋಬಸ್ತನು ಏರ್ಪಡಿಸಲಾಗಿದ್ದು, ಯಾವುದೇ ಹಿತಕರ ಘಟನೆಗಳು ಜರುಗದಂತೆ ಪೊಲೀಸ್ ಇಲಾಖೆ ಹಾಗೂ ರೈಲ್ವೆ ಇಲಾಖೆ ಪೊಲೀಸ್ ಕ್ರಮವಹಿಸಿದ್ದಾರೆ.
ಕರ್ನಾಟಕ ಬಂದ್ ಹಿನ್ನೆಲೆ ಇಂದು ಗೆಜ್ಜಲಗೆರೆ ಬಳಿ ರೈತರು ರೈಲು ತಡೆಯುವುದಾಗಿ ಹೇಳಿಕೆ ನೀಡಿದ ಹಿನ್ನೆಲೆ ಬಿಗಿ ಭದ್ರತೆ ಒದಗಿಸಲಾಗಿದೆ.