Tuesday, March 17, 2026
Google search engine

Homeರಾಜಕೀಯಕಾಂಗ್ರೆಸ್‌‍ ಸರ್ಕಾರ ತೊಲಗುವವರೆಗೂ ಕರ್ನಾಟಕದ ಪ್ರಗತಿ ಸಾಧ್ಯವೇ ಇಲ್ಲ

ಕಾಂಗ್ರೆಸ್‌‍ ಸರ್ಕಾರ ತೊಲಗುವವರೆಗೂ ಕರ್ನಾಟಕದ ಪ್ರಗತಿ ಸಾಧ್ಯವೇ ಇಲ್ಲ

ಬೆಂಗಳೂರು : ಕೇಂದ್ರ ಸರ್ಕಾರ ನೀಡಿದ ಅನುದಾನವನ್ನೂ ರಾಜ್ಯಸರ್ಕಾರ ಸಕಾಲಕ್ಕೆ ಬಳಸಲಾಗದೆ ಮರಳಿ ಕಳುಹಿಸುತ್ತಿದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅಶೋಕ್‌ ಆರೋಪಿಸಿದ್ದಾರೆ.

ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ಅಭಿವೃದ್ಧಿ ಶೂನ್ಯ ಕಾಂಗ್ರೆಸ್‌‍ ಸರ್ಕಾರಕ್ಕೆ ಕೇಂದ್ರ ಕೊಟ್ಟ ಹಣವನ್ನೂ ಬಳಸಲಾಗದ ದೌರ್ಭಾಗ್ಯ. ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವಂತಿದೆ ರಾಜ್ಯ ಕಾಂಗ್ರೆಸ್‌‍ ಸರ್ಕಾರದ ಸ್ಥಿತಿ ಎಂದು ಟೀಕಿಸಿದ್ದಾರೆ.

ಒಂದೆಡೆ ರಾಜ್ಯದ ಖಜಾನೆ ಖಾಲಿ ಮಾಡಿ, ಅಭಿವೃದ್ಧಿ ಕೆಲಸಗಳಿಗೆ ನಯಾಪೈಸೆ ಅನುದಾನ ನೀಡಲು ಯೋಗ್ಯತೆ ಇಲ್ಲದೆ ದಿವಾಳಿಯಾಗಿರುವ ಈ ಸರ್ಕಾರ, ಇನ್ನೊಂದೆಡೆ ಕೇಂದ್ರದ ಅನುದಾನವನ್ನು ಬಳಸಲಾಗದೆ ವಾಪಸ್‌‍ ನೀಡುತ್ತಿದೆ ಎಂದು ಆಪಾದಿಸಿದರಲ್ಲದೆ, ಸಿಟೀಸ್‌‍ 2.0 ಯೋಜನೆಯಡಿ ನಗರಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದ ಮೊದಲ ಕಂತಿನ ಹಣವನ್ನು ಬಳಸುವಲ್ಲಿ ವಿಫಲವಾಗಿರುವ ಕಾಂಗ್ರೆಸ್‌‍ ಸರ್ಕಾರ, ಈಗ ಆ ಹಣವನ್ನು ಕೇಂದ್ರಕ್ಕೆ ವಾಪಸ್‌‍ ನೀಡಬೇಕಾದ ಪರಿಸ್ಥಿತಿ ತಂದೊಡ್ಡಿದೆ. ಇದು ಕೇವಲ ಆಡಳಿತಾತಕ ವೈಫಲ್ಯವಲ್ಲ, ರಾಜ್ಯದ ಜನತೆಗೆ ಮಾಡುತ್ತಿರುವ ಮಹಾ ದ್ರೋಹ ಎಂದಿದ್ದಾರೆ.

ಬರೀ ಡಿನ್ನರ್‌ ಮೀಟಿಂಗ್‌ಗಳು, ಔತಣಕೂಟಗಳು, ರಾಜಕೀಯ ಮೇಲಾಟಗಳಲ್ಲೇ ಕಾಲ ಕಳೆಯುತ್ತಿರುವ ಸಿಎಂ ಹಾಗೂ ಡಿಸಿಎಂ ಅವರೇ, ಅನುದಾನ ಬಳಸಲು ನಿಮ ಸರ್ಕಾರಕ್ಕೆ ಯೋಗ್ಯತೆ ಇಲ್ಲದಿದ್ದರೆ ಅಧಿಕಾರ ಬಿಟ್ಟು ತೊಲಗಿ. ನಿಮ್ಮ ಈ ನಿಷ್ಕ್ರಿಯತೆಯಿಂದಾಗಿ ರಾಜ್ಯದ ಅಭಿವೃದ್ಧಿ ಹಳಿ ತಪ್ಪುತ್ತಿದೆ. ಈ ಭ್ರಷ್ಟ ಮತ್ತು ಅಧಕ್ಷ ಕಾಂಗ್ರೆಸ್‌‍ ಸರ್ಕಾರ ತೊಲಗುವವರೆಗೂ ಕರ್ನಾಟಕದ ಪ್ರಗತಿ ಸಾಧ್ಯವೇ ಇಲ್ಲ. ಇದು ಮಾತ್ರ ಗ್ಯಾರೆಂಟಿ ಎಂದು ವ್ಯಂಗ್ಯವಾಡಿದ್ದಾರೆ.

RELATED ARTICLES
- Advertisment -
Google search engine

Most Popular