Saturday, April 19, 2025
Google search engine

Homeರಾಜಕೀಯತೆಲಂಗಾಣದಲ್ಲಿ ಕರ್ನಾಟಕದ ಫಲಿತಾಂಶ ಮರುಕಳಿಸಲಿದೆ: ಜಮೀರ್ ಅಹಮದ್ ಖಾನ್

ತೆಲಂಗಾಣದಲ್ಲಿ ಕರ್ನಾಟಕದ ಫಲಿತಾಂಶ ಮರುಕಳಿಸಲಿದೆ: ಜಮೀರ್ ಅಹಮದ್ ಖಾನ್

ಹೈದರಾಬಾದ್ : ತೆಲಂಗಾಣ ವಿಧಾನ ಸಭೆ ಚುನಾವಣೆಯಲ್ಲಿ ಕರ್ನಾಟಕದ ಫಲಿತಾಂಶವೇ ಮರುಕಳಿಸಲಿದೆ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.

ಶನಿವಾರ ಹೈದರಾಬಾದ್ ನ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಹತ್ತು ವರ್ಷಗಳ ಕೆ ಸಿ ಆರ್ ಆಡಳಿತದಿಂದ ಜನ ಬೇಸರಗೊಂಡಿದ್ದು ಎ ಬಾರಿ ಬದಲಾವಣೆ ಬಯಸಿದ್ದಾರೆ. ಕರ್ನಾಟಕ ದ ಮಾದರಿಯಲ್ಲೇ ಇಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.

ತೆಲಂಗಾಣ ದಲ್ಲಿ ಅಲ್ಪಸಂಖ್ಯಾತ ಸಮುದಾಯ ಹಾಗೂ ಜಾತ್ಯತೀತ ಮನೋಭಾವದ ಎಲ್ಲ ವರ್ಗ ಕಾಂಗ್ರೆಸ್ ಪರ ವಿಶ್ವಾಸ ಹೊಂದಿದೆ. ಕೆ ಸಿ ಆರ್ ಕೊಟ್ಟ ಭರವಸೆ ಈಡೇರಿಸಿಲ್ಲ, ಆಡಳಿತ ವಿರೋಧಿ ಅಲೆ ತೀವ್ರವಾಗಿದೆ ಎಂದು ತಿಳಿಸಿದರು.

ಕರ್ನಾಟಕ ದಲ್ಲಿ ನಾವು ಕೊಟ್ಟ ಗ್ಯಾರಂಟಿ ಈಡೇರಿಸಿದ್ದೇವೆ. ಕೋಟ್ಯಂತರ ಕುಟುಂಬಗಳಿಗೆ ನಮ್ಮ ಗ್ಯಾರಂಟಿ ಯೋಜನೆಯ ಫಲ ದೊರಕುತ್ತಿದೆ. ತೆಲಂಗಾಣದಲ್ಲೂ ನಾವು ಆರು ಗ್ಯಾರಂಟಿ ನೀಡಿದ್ದು ಅದರ ಜಾರಿ ಮಾಡಿಯೇ ತೀರುತ್ತೇವೆ ಎಂದು ಹೇಳಿದರು.

ಕರ್ನಾಟಕದಲ್ಲಿ ಕಾಂಗ್ರೆಸ್  ಪಕ್ಷವು ಅಲ್ಪಸಂಖ್ಯಾತರ ಸಮುದಾಯಕ್ಕೆ ಕೊಟ್ಟ ಮಾತು ಉಳಿಸಿಕೊಂಡಿದೆ.  ಸ್ಪೀಕರ್, ಎರಡು ಸಚಿವ ಸ್ಥಾನ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹುದ್ದೆ, ಪರಿಷತ್ ಮುಖ್ಯ ಸಚೇತಕ ಸ್ಥಾನ ಮುಸ್ಲಿಂ ಸಮುದಾಯಕ್ಕೆ ನೀಡಿದೆ. ಇದು ಕಾಂಗ್ರೆಸ್ ನ ಬದ್ಧತೆ ಆಗಿದ್ದು ತೆಲಂಗಾಣ ದಲ್ಲೂ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರ ಸಮುದಾಯಕ್ಕೆ ಹೆಚ್ಚು ಆದ್ಯತೆ ಸಿಗಲಿದೆ ಎಂದು ಹೇಳಿದರು.

ಕೆ. ಸಿ. ರಾಮರಾವ್ ಕಳೆದ ಐದು ವರ್ಷ ತೋಟದ ಮನೆಯಲ್ಲಿದ್ದು ಇದೀಗ ಚುನಾವಣೆ ಬಂತು ಎಂದು ಹೊರಗೆ ಬಂದಿದ್ದಾರೆ. ಅಲ್ಪಸಂಖ್ಯಾತ ಸಮುದಾಯಕ್ಕೆ ನೀಡಿದ್ದ ಶೇ.22 ರಷ್ಟು ಮೀಸಲಾತಿ ವಾಗ್ದಾನ ಈಡೇರಿಸಿಲ್ಲ. ಶೇ.16 ರಿಂದ 17 ರಷ್ಟು ಜನಸಂಖ್ಯೆ ಹೊಂದಿರುವ ಅಲ್ಪ ಸಂಖ್ಯಾತ ಸಮುದಾಯಕ್ಕೆ ಕೇವಲ 2200 ಕೋಟಿ ರೂ. ಅನುದಾನ ಘೋಷಿಸಿ 800 ರಿಂದ 1000 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದ್ದಾರೆ. ಇದು ಮುಸ್ಲಿಂ ಸಮುದಾಯದ ಬಗ್ಗೆ ಅವರಿಗೆ ಇರುವ ಕಾಳಜಿ ಎಂದು ಲೇವಡಿ ಮಾಡಿದರು.

ನಮ್ಮ ಸರ್ಕಾರ ಬಂದರೆ ಐದು ಸಾವಿರ ಕೋಟಿ ರೂ. ಅನುದಾನ, ಬಡ ಮುಸ್ಲಿಂ ಕುಟುಂಬಕ್ಕೆ ಮನೆ ಕಟ್ಟಿಕೊಳ್ಳಲು ಐದು ಲಕ್ಷ ರೂ. ನೆರವು, ಉನ್ನತ ವ್ಯಾಸಂಗ ಮಾಡುವ ಸಮುದಾಯದ ವಿದ್ಯಾರ್ಥಿಗಳಿಗೆ ಐದು ಲಕ್ಷ ರೂ. ವಿದ್ಯಾರ್ಥಿ ವೇತನ, ಇಮಾಮ್, ಮೌಜ್ವನ್ ರಿಗೆ ಮಾಸಿಕ 12 ಸಾವಿರ ರೂ. ಗೌರವ ಧ2004 ರಿಂದ ಖಾಲಿ ಉಳಿದಿರುವ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳು ವುದಾಗಿ ಭರವಸೆ ನೀಡಿದ್ದೇವೆ ಅದರಂತೆ ನಡೆಯುತ್ತೇವೆ ಎಂದು ಹೇಳಿದರು.

ಕೆ. ಸಿ. ರಾಮರಾವ್ ಅವರು ಅಲ್ಪಸಂಖ್ಯಾತರ ಸಮುದಾಯದ ಕಲ್ಯಾಣ ಕ್ಕಾಗಿ ಹತ್ತು ವರ್ಷಗಳಿಂದ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಶ್ವೇತ ಪತ್ರ ಹೊರಡಿಸಲಿ ಎಂದು ಅಗ್ರಹಿಸಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅಲ್ಪಸಂಖ್ಯಾತರ ಸಮುದಾಯದ ಕಲ್ಯಾಣ ಕ್ಕೆ ಹೆಚ್ಚು ಒತ್ತು ನೀಡಿದೆ. ಅದೇ ರೀತಿ ತೆಲಂಗಾಣ ದಲ್ಲೂ ಕಾರ್ಯಕ್ರಮ ರೂಪಿಸುವ ಗುರಿ ಹೊಂದಿದ್ದೇವೆ ಎಂದು ಹೇಳಿದರು.

ತೆಲಂಗಾಣ ದಲ್ಲಿ ಬಿ ಆರ್ ಎಸ್, ಬಿಜೆಪಿ, ಐ ಎ ಎಂ ಎಲ್ಲವೂ ಒಂದೇ. ಕಾಂಗ್ರೆಸ್ ಮಾತ್ರ ಅಪ್ಪಟ ಜಾತ್ಯತೀತವಾದಿ ಪಕ್ಷ ಎಂದು ತಿಳಿಸಿದರು.

ಎ ಐ ಸಿಸಿ ತೆಲಂಗಾಣ ಉಸ್ತುವಾರಿ ಅಜೋಯ್ ಕುಮಾರ್, ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ತೆಲಂಗಾಣ ಕಾಂಗ್ರೆಸ್ ಮಾಧ್ಯಮ ಘಟಕದ ಕಮಲ್ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular