- ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಹನಸೋಗೆ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಕರ್ತಾಳು ಕೆ.ಎಂ.ಮಂಜುನಾಥ್ ಆಯ್ಕೆಯಾಗಿದ್ದಾರೆ.
ಮಂಗಳವಾರ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೆ.ಎಂ.ಮಂಜುನಾಥ್ 9 ಮತಗಳನ್ನು ಪಡೆದು ಗೆಲುವು ಸಾಧಿಸಿದರೇ ಇವರ ಪ್ರತಿಸ್ಪರ್ಧಿಯಾಗಿದ್ದ ಎ.ಎನ್.ರೇಣಕೇಶ್ 4 ಮತಗಳನ್ನು ಪಡೆದು ಪರಾಭಗೊಂಡರು.
14 ಮತಗಳಲ್ಲಿ ಒಂದು ಮತ ತಿರಸ್ಕಾರ ಗೊಂಡಿತು ಚುನಾವಣಾಧಿಕಾರಿಯಾಗಿ ತೋಟಗಾರಿಕೆ ಇಲಾಖೆಯ ಎಡಿ ಟಿ.ಎಸ್.ಭಾರತಿ ಮತ್ತು ಸಹಾಯಕ ಚುನಾವಣಾಧಿಕಾರಿಯಾಗಿ ನವೀನ್ ಕುಮಾರ್ ಮತ್ತು ಚಿಕ್ಕಕೊಪ್ಪಲು ಪಿ.ಚರಣ್ ಕಾರ್ಯನಿರ್ವಹಿಸಿದರು. ಪಿಡಿಓ ಸರಳ ಸಹಕಾರ ನೀಡಿದರು.
ಅಧ್ಯಕ್ಷರಾಗಿ ಆಯ್ಕೆ ಗೊಂಡು ಮಾತನಾಡಿದ ಮಂಜುನಾಥ್ ತಮ್ಮ ಅವದಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳನ್ನು ಅನುಷ್ಠಾನ ಗೊಳಿಸುವುದು, ಕುಡಿಯುವ ನೀರು, ಸ್ವಚ್ಚತೆ, ಬೀದಿ ದೀಪದ ನಿರ್ವಹಣೆ ಹೆಚ್ಚಿನ ಒತ್ತು ನೀಡಿ ಕೆಲಸ ನಿರ್ವಹಿಸುವುದಾಗಿ ತಿಳಿಸಿದರು.
ಚುನಾವಣಾ ಸಭೆಯಲ್ಲಿ ಉಪಾಧ್ಯಕ್ಷ ರೂಪಲವ ಸದಸ್ಯರಾದ ಎಸ್.ಧರ್ಮೇಶ್ ಕರ್ತಾಳ್,ಕಿರಣ್ ಕುಮಾರ್, ಜಯಮ್ಮ ಪುಟ್ಟಶೆಟ್ಟಿ ಎಚ್.ಆರ್.ಹರೀಶ್, ಭಾಗ್ಯಶಂಕರ್, ಮಧುಸೂಧನ್, ಆಸಿಫ್ ಖಾನ್, ವಿಶಾಲಾಕ್ಷಿರಾಜಕುಮಾರ್, ಪ್ರಭಾ ಸುರೇಶ್, ಪವಿತ್ರಧರ್ಮ, ಲಕ್ಷ್ಮಿಮೋಹನ್ ಸೇರಿದಂತೆ ಮತ್ತಿತರರು ಹಾಜರಿದ್ದರು.
ನಂತರ ನೂತನ ಅಧ್ಯಕ್ಷ ಮಂಜುನಾಥ್ ಅವರನ್ನು ಹನಸೋಗೆ ಗ್ರಾಮದ ಯಜಮಾನರಾದ ತಿಮ್ಮೇಗೌಡ, ನವೀನ್, ರವೀಶ್,ಸಿದ್ದಯ್ಯ,ಕರ್ತಾಳ್ ಕೃಷ್ಣೇಗೌಡ, ನಟಬುದ್ದಿ, ರಮೇಶ್ ಬಂಗಾರಪ್ಪ, ಪುಟ್ಟಸ್ವಾಮೀಗೌಡ, ರಾಘು, ಪಿಡಿಓಮಹದೇವೇಗೌಡ, ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಯೋಗೇಶ್,ರುದ್ರೇಶ್, ಸಂದೀಪ್, ಪುನೀತ್,ನರಸಿಂಹ,ರಾಮು,ಮಹದೇವ್,ಸುರೇಶ್, ತಂದ್ರೆ ಜಯಣ್ಣ, ಸುರೇಶ್,ನಟ, ಮತ್ತಿತರರು ಅಭಿನಂದಿಸಿದರು,