Friday, April 4, 2025
Google search engine

Homeರಾಜ್ಯಸುದ್ದಿಜಾಲಕರ್ತಾಳು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ವರ್ಷದ ದಿನದರ್ಶಿಕೆ ಬಿಡುಗಡೆ

ಕರ್ತಾಳು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ವರ್ಷದ ದಿನದರ್ಶಿಕೆ ಬಿಡುಗಡೆ

  • ವರದಿ :ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಗ್ರಾಮೀಣ ಪ್ರದೇಶದ ಜನರ ಬದುಕನ್ನು ಹಸನು ಮಾಡುವಲ್ಲಿ ಸಹಕಾರ ಕ್ಷೇತ್ರವು ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಮೈಮುಲ್ ನಿರ್ದೇಶಕ ಎ.ಟಿ.ಸೋಮಶೇಖರ್ ಹೇಳಿದರು. ಸಾಲಿಗ್ರಾಮ ತಾಲೂಕಿನ ಕರ್ತಾಳು ಹಾಲು ಉತ್ಪಾದಕರ ಸಹಕಾರ ಸಂಘವು ಹೊರತಂದಿರುವ ನೂತನ ವರ್ಷದ ದಿನದರ್ಶಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದರು.

ಸಹಕಾರ ಕ್ಷೇತ್ರವು ವಿವಿಧ ಸಂಘಗಳ ಮೂಲಕ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ. ಅವುಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಸಾರ್ವಜನಿಕರು ಅದರ ಲಾಭ ಪಡೆದುಕೊಳ್ಳಬೇಕು ಎಂದರು.

ಹಾಲು ಉತ್ಪಾದಕರು ಸಹಕಾರ ಸಂಘಗಳಿಗೆ ಗುಣಮಟ್ಟದ ಹಾಲನ್ನು ಹಾಕುವ ಮೂಲಕ ತಮ್ಮ ಕುಟುಂಬದ ಆರ್ಥಿಕ ಅಭಿವೃದ್ಧಿಯ ಜೊತೆಗೆ ಸಂಘದ ಬೆಳವಣಿಗೆಗೆ ಎಲ್ಲರೂ ಕೈ ಜೋಡಿಸಬೇಕೆಂದರು.

ಗ್ರಾಮೀಣ ಪ್ರದೇಶಗಳಲ್ಲಿ ಇತ್ತೀಚಿಗೆ ಮಹಿಳೆಯರು, ರೈತರು, ಯುವಕರು ಹೆಚ್ಚು ಹೆಚ್ಚು ಹೈನುಗಾರಿಕೆ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಕಾರ್ಯನಿರ್ವಹಿಸುವ ಮೂಲಕ ಗ್ರಾಮಾಂತರ ಪ್ರದೇಶಗಳಲ್ಲಿ ಉದ್ಯೋಗಗಳನ್ನು ಸೃಷ್ಟಿ ಮಾಡಿಕೊಂಡಿದ್ದಾರೆ. ಆ ಮೂಲಕ ತಮ್ಮ ತಮ್ಮ ಕುಟುಂಬಗಳು ಆರ್ಥಿಕ ಅಭಿವೃದ್ಧಿ ಯಾಗುವುದರ ಜೊತೆ ಜೊತೆಗೆ ಗ್ರಾಮದ ಅಭಿವೃದ್ಧಿಗೆ ಪೂರಕವಾದ ವಾತಾವರಣ ಎಲ್ಲಿಡೆ ಸೃಷ್ಟಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕೆ.ಕೆ.ಚಂದ್ರಶೇಖರ, ಉಪಾಧ್ಯಕ್ಷ ಕೆ.ಎಂ.ಜಯಣ್ಣ, ನಿರ್ದೇಶಕರುಗಳಾದ
ಕೆ.ಸಿ.ಪರಮೇಶ್, ಕೆ.ಪಿ.ಮೋಹನ್, ಕೆ.ಎಸ್.ಶಿವಮೂರ್ತಿ, ಕೆ.ಸಿ.ಗೋವಿಂದೇಗೌಡ, ಶಿವಣ್ಣಶೆಟ್ಟಿ,
ಎ.ಟಿ.ಪ್ರೇಮಮ್ಮ, ಸಿಇಓ ಕೆ.ಎಸ್.ಮನೋಜ್, ಸಿಬ್ಬಂದಿಗಳಾದ ಕೆ.ವಿ.ಲೋಕೇಶ್, ಹೊಂಕಿರಣ, ಗ್ರಾ.ಪಂ. ಸದಸ್ಯ ಎಸ್.ಧರ್ಮೇಶ್ ಕರ್ತಾಳು, ಯ.ಸುರೇಶ, ಮಾಜಿ ಅಧ್ಯಕ್ಷರುಗಳಾದ ಮರೀಗೌಡ, ಮಾಯಿಶೆಟ್ಟಿಗೌಡ, ಮಾಜಿ ಉಪಾಧ್ಯಕ್ಷ ಪುಟ್ಟಸ್ವಾಮಿಗೌಡ, ಮುಖಂಡರುಗಳಾದ ರೈಸ್ ಮಿಲ್ ಹರೀಶ್, ಮಿಷನ್ ಜಗದೀಶ್, ನರಸಿಂಹೇಗೌಡ, ಚಂದ್ರಶೇಖರ್, ಪುಟ್ಟಣ್ಣ, ರಾಜೇಗೌಡ ಸೇರಿದಂತೆ ಹಲವರು ಇದ್ದರು.

RELATED ARTICLES
- Advertisment -
Google search engine

Most Popular