Monday, April 21, 2025
Google search engine

HomeUncategorizedರಾಷ್ಟ್ರೀಯಕರ್ನಾಟಕದಿಂದ ಕಾಶಿ ಯಾತ್ರೆ:4ನೇ ಟ್ರಿಪ್ ಜುಲೈ 29ಕ್ಕೆ ಆರಂಭ

ಕರ್ನಾಟಕದಿಂದ ಕಾಶಿ ಯಾತ್ರೆ:4ನೇ ಟ್ರಿಪ್ ಜುಲೈ 29ಕ್ಕೆ ಆರಂಭ

ಬೆಂಗಳೂರು: ಕರ್ನಾಟಕದ ಜನರಿಗೆ ಪುಣ್ಯ ಕ್ಷೇತ್ರಗಳಿಗೆ ತೆರಳಿ ದೇವರ ದರ್ಶನಕ್ಕೆ ಅನುಕೂಲ ಒಗಿಸುತ್ತಿರುವ ‘ಕರ್ನಾಟಕ ಭಾರತ್ ಗೌರವ ಕಾಶಿ ದರ್ಶನ’ (Karnataka Bharat Gaurav Kashi Darshan) ರೈಲಿನ ನಾಲ್ಕನೇ ಟ್ರಿಪ್ ಇದೇ ಜುಲೈ 29 ರಂದು ಹೊರಡಲಿದೆ. ಪ್ರಯಾಣದ ಒಟ್ಟು ಖರ್ಚಿನ ಪೈಕಿ ರಾಜ್ಯ ಸರ್ಕಾರವೇ ಐದು ಸಾವಿರ ರೂಪಾಯಿ ಹಣ ನೀಡಲಿದೆ.

ಕರ್ನಾಟಕದಿಂದ ಈ ವಿಶೇಷ ”ಕರ್ನಾಟಕ ಭಾರತ್ ಗೌರವ ಕಾಶಿ ದರ್ಶನ” ರೈಲು ಪುಣ್ಯ ಕ್ಷೇತ್ರಗಳ ವಾರಣಾಸಿ, ಅಯೋಧ್ಯೆ ಮತ್ತು ಪ್ರಯಾಗ್-ರಾಜ್ ಕ್ಷೇತ್ರಗಳಿಗೆ ಕಡಿಮೆ ವೆಚ್ಚದಲ್ಲಿ ಪ್ರಯಾಣ ಸೇವೆ ನೀಡುತ್ತಿದೆ. ಜನರ ಈ ರೈಲಿನ ಮೂಲಕ ರಿಯಾಯಿತಿ ದರದ ಪ್ಯಾಕೇಜ್‌ನಲ್ಲಿ ವಿವಿಧ ಧಾರ್ಮಿಕ ಸ್ಥಳಕ್ಕೆ ಹೋಗಿ ಬರುತ್ತಿದ್ದಾರೆ. ಈ ರೈಲು ಪ್ಯಾಕೇಜ್ ಯೋಜನೆಯನ್ನು IRCTC ಮತ್ತು ಭಾರತೀಯ ರೈಲ್ವೇ ಇಲಾಖೆಯಲ್ಲಿ ಕೈಗೊಳ್ಳಲಾಗಿದೆ. ಈ ಕುರಿತಾಗಿ ಸರ್ಕಾರ ಮಾಹಿತಿ ನೀಡಿದೆ .

ರೈಲ್ವೆ ಇಲಾಖೆಯ ಈ ಯೋಜನೆಯಡಿ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ತೆರಳುವ ಯಾತ್ರಾರ್ಥಿಗಳಿಗೆ ಒಬ್ಬರಿಗೆ ತಲಾ 20,000 ರೂಪಾಯಿ ಪ್ಯಾಕೇಜ್ ಒದಗಿಸಲಾಗಿದೆ. ಇದರಲ್ಲಿ ಪ್ರತಿ ಪ್ರಯಾಣಿಕರಿಗೂ ಸರ್ಕಾರವೇ 5,000 ರೂ. ಖರ್ಚಿನ ಹಣ ಒದಗಿಸಲಿದ್ದು, ಉಳಿದ 15,000 ರೂಪಾಯಿಯನ್ನು ಯಾತ್ರಾರ್ಥಿಗಳೇ ಭರಿಸಬೇಕು ಎಂದು ಸರ್ಕಾರ ತಿಳಿಸಿದೆ.

ಇನ್ನೂ ಈ ವಿಶೇಷ ರೈಲಿನಲ್ಲಿ ಪ್ರಯಾಣಿಕರಿಗೆ ಪ್ರಯಾಣದ ಉದ್ದಕ್ಕೂ ತಿಂಡಿ, ಊಟ, ತಂಗಲು ಅನುಕೂಲ, ಸ್ಥಳೀಯ ಸಾರಿಗೆ ಮತ್ತು ಸ್ಥಳೀಯ ವೀಕ್ಷಣೆ ಒಳಗೊಂಡಂತೆ ಸೂಕ್ತ ವ್ಯವಸ್ಥೆ ಇರುತ್ತದೆ. ಒಟ್ಟು ಏಳು ದಿನ ಪ್ಯಾಕೇಜ್ ಇದಾಗಿದೆ.

ಇದುವರೆಗೂ ‘ಕರ್ನಾಟಕ ಭಾರತ್ ಗೌರವ ಕಾಶಿ ದರ್ಶನ’ ರೈಲು ಒಟ್ಟು ಮೂರು (3) ಟ್ರಿಪ್‌ಗಳನ್ನು ಹೊಡೆದಿದೆ. ಸದ್ಯ ನಾಲ್ಕನೇ ಟ್ರೀಪ್ ಇದೆ ತಿಂಗಳಾಂತ್ಯಕ್ಕೆ ಹೊರಡಲಿದೆ. ಒಟ್ಟು 1644 ಯಾತ್ರಾರ್ಥಿಗಳು ಇದರಲ್ಲಿ ತೆರಳಬಹುದಾಗಿದೆ. ಒಟ್ಟು ಏಳು ದಿನ ಒಬ್ಬ ಯಾತ್ರಾರ್ಥಿ ಪ್ರಯಾಣದ ಪ್ಯಾಕೇಜ್‌ ದರ 20,000 ರೂಪಾಯಿ, ಅದರಲ್ಲಿ ಸರ್ಕಾರ ತಲಾ 5,000 ರೂ.ಯಂತೆ ಒಟ್ಟು 82.20 ಲಕ್ಷ ರೂಪಾಯಿ ಹಣವನ್ನು ಸಹಾಯಧನವಾಗಿ ಪೂರೈಸಿದೆ. ಈಗಾಗಲೇ IRCTC ಪೋರ್ಟಲ್ ನಲ್ಲಿಟಿಕೆಟ್ ಕಾಯ್ದಿರಲು ಅವಕಾಶ ನೀಡಲಾಗಿದೆ.

ಸದರಿ ಟ್ರೀಪ್‌ನ ವಿಶೇಷತೆ ಏನೆಂದರೆ, ಈ ರೈಲಿಗೆ ಹೊಸದಾಗಿ ಸುಸಜ್ಜಿತ LHB ಕೋಚ್ ಅಳವಡಿಕೆ ಮಾಡಲಾಗಿದೆ. ಯಾತ್ರಾರ್ಥಿಗಳಿಗೆ ಅಡುಗೆ ತಯಾರು ಮಾಡಲು ಸೂಕ್ತ ಅಡುಗೆ ಮನೆ ವ್ಯವಸ್ಥೆ ಒಳಗೊಂಡಿದೆ. ಇನ್ನೂ ಪ್ರಯಾಣಿಕರ ಹಿತದೃಷ್ಟಿಯಿಂದ ಇಬ್ಬರು ವೈದ್ಯರು ಸಹ ಪ್ರಯಾಣ ಬೆಳೆಸಲಿದ್ದಾರೆ.

ಕರ್ನಾಟಕದಿಂದ ಪುಣ್ಯ ಕ್ಷೇತ್ರಗಳಾದ ವಾರಣಾಸಿ, ಅಯೋಧ್ಯೆ ಮತ್ತು ಪ್ರಯಾಗ್-ರಾಜ್ ಕ್ಷೇತ್ರಗಳಿಗೆ ತೆರಳ ಬಯಸುವ ಭಕ್ತಾಧಿಗಳು ಈ ಸೌಲಭ್ಯವನ್ನು ಪಡೆಯುವಂತೆ ಸರ್ಕಾರ, ಭಾರತೀಯ ರೈಲ್ವೆ ಮನವಿ ಮಾಡಿದೆ.

RELATED ARTICLES
- Advertisment -
Google search engine

Most Popular