ಮಂಡ್ಯ: ಕಾವೇರಿ ನದಿಯ ಮಹತ್ವಕ್ಕಾಗಿ ಶ್ರೀರಂಗಪಟ್ಟಣದ ಸ್ನಾನಘಟ್ಟದ ಬಳಿ ನಡೆದ ಅದ್ದೂರಿಯಾಗಿ ಕಾವೇರಿ ಆರತಿ ಕಾರ್ಯಕ್ರಮ ನಡೆಸಲಾಯಿತು.
ಯುವ ಬ್ರಿಗೇಡ್ ವತಿಯಿಂದ ಉತ್ತರ ಭಾರತದಲ್ಲಿನ ಗಂಗಾರತಿ ಮಾದರಿಯಲ್ಲಿ ಕಾವೇರಿ ನದಿಗೆ ಆರತಿ ಮಾಡಲಾಯಿತು.
ಕಾವೇರಿ ನದಿಯ ಮಹತ್ವ ಹಾಗೂ ನದಿ ನೀರಿನ ಸ್ವಚ್ಛತೆ ಕುರಿತ ಜಾಗೃತಿಗಾಗಿ ಕಾವೇರಿ ಆರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಚಂದ್ರವನ ಮಠದ ಶ್ರೀ ತ್ರಿನೇತ್ರ ಮಹಂತ ಸ್ವಾಮೀಜಿ, ವೈದಿಕ ಅರ್ಚಕ ಡಾ.ಭಾನುಪ್ರಕಾಶ ಶರ್ಮಾ ,ಇತಿಹಾಸಕಾರ ನೇತೃತ್ವದಲ್ಲಿ ಕಾವೇರಿ ಆರತಿ ಕಾರ್ಯಕ್ರಮ ನಡೆಸಲಾಯಿತು.
ಉತ್ಸವದಲ್ಲಿ ಪಾಲ್ಗೊಂಡ ಹಲವು ಸ್ವಾಮೀಜಿಗಳು ಕಾವೇರಿಗೆ ಆರತಿ ಸಲ್ಲಿಸಿದರು.
ಕಾವೇರಿ ಆರತಿ ಕಾರ್ಯಕ್ರಮ ನೋಡಲು ಸ್ಥಳಕ್ಕೆ ಜನರೇ ದಂಡೇ ಆಗಮಿಸಿತ್ತು.