ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ದೊಡ್ಢೇಗೌಡನ ಕೊಪ್ಪಲು ಗ್ರಾಮದಲ್ಲಿರುವ ಗೌತಮ ಕ್ಷೇತ್ರ ಕಾವೇರಿ ನದಿ ಪ್ರವಾಹದಿಂದಾಗಿ ನಡುಗಡ್ಡೆಯಾಗಿದೆ.
ಗೌತಮ ಕ್ಷೇತ್ರದ ಗಜಾನನ ಸ್ವಾಮೀಜಿ ಸೇರಿ ಮತ್ತಿಬ್ಬರು ಸಹಚರರನ್ನು ಅಗ್ನಿಶಾಮಕ ದಳ ಹಾಗೂ ಎಂಜಿಎಮ್ ರಕ್ಷಣಾ ತಂಡದಿಂದ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಲಾಗಿದೆ.
ತುಂಬಿ ಹರಿಯುತ್ತಿರುವ ಕಾವೇರಿ ನದಿ ಪ್ರವಾಹದ ಬೋಟ್ ಮೂಲಕ ನಡುಗಡ್ಡೆಗೆ ತೆರಳಿ ರಕ್ಷಣೆ ಮಾಡಲಾಯಿತು. ಕಾವೇರಿ ನದಿ ಪ್ರವಾಹ ಬಂದಾಗಿನಿಂದ ನಡುಗಡ್ಡೆ ಪ್ರದೇಶದಲ್ಲಿ ಸ್ವಾಮೀಜಿ ಹಾಗೂ ಸಹಚರರು ಉಳಿದಿದ್ದರು.
ಇಂದು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಲಾಯಿತು.