ಮಂಡ್ಯ: ತಲಕಾವೇರಿಗೆ ಪೂಜೆ ಸಲ್ಲಿಸಲು ಎಂದು ಕದಂಬ ಸೈನ್ಯದಿಂದ ಕಾವೇರಿಗಾಗಿ ಯಾತ್ರೆ ಆರಂಭವಾಗಿದೆ.
ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಎದುರಿನ ಕಾವೇರಿ ವನದಲ್ಲಿರುವ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿ, ರಾಜಕೀಯ ಪಕ್ಷಗಳು ಕಾವೇರಿ ಕೈ ಬಿಟ್ಟರು. ತಲಕಾವೇರಿ ತಾಯಿ ಕಾಪಾಡು ಎಂದು ಯಾತ್ರೆಯನ್ನು ಆರಂಭಿಸಲಾಗಿದೆ.
ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ನೇತೃತ್ವದಲ್ಲಿ ಯಾತ್ರೆ ಹಮ್ಮಿಕೊಂಡಿದ್ದು, ಮೈಸೂರು, ಮಡಿಕೇರಿ ಮೂಲಕ ತಲಕಾವೇರಿಗೆ ಕದಂಬ ಸೈನ್ಯ ಕಾರ್ಯಕರ್ತರು ತೆರಳಲಿದ್ದಾರೆ.
ತಲಕಾವೇರಿಗೆ ವಿಶೇಷ ಪೂಜೆ ಸಲ್ಲಿಸಿ ಕಾವೇರಿಗಾಗಿ ಕಾರ್ಯಕರ್ತರು ಪ್ರಾರ್ಥಿಸಲಿದ್ದಾರೆ.
ರಾಜ್ಯ ಸರ್ಕಾರ ಕಾವೇರಿ ಹಾಗೂ ರೈತರನ್ನ ಕೈ ಬಿಟ್ಟಿದೆ. ನೀರಿನ ವಿಚಾರದಲ್ಲಿ ತಮಿಳುನಾಡಿಗಿಂತ ಧ್ವನಿ ಎತ್ತುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ನಮಗೆ ನೀರು ಸಿಗಲ್ಲ, ಕಾವೇರಿ ಮಾತೆ ಕರುಣೆ ತೋರಬೇಕು ಎಂದು ಪ್ರತಿಭಟನಾಕಾರರು ಪ್ರಾರ್ಥಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸಂಕಷ್ಟ ಸೂತ್ರ ಅನುಸರಿಸಿ ಕುಡಿಯಲು ನೀರು ಉಳಿಸಿ ಎಂದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.