Monday, April 21, 2025
Google search engine

Homeರಾಜಕೀಯಕೆಇಎ ಪರೀಕ್ಷಾ ಅಕ್ರಮ - ಅಗತ್ಯ ಬಿದ್ದರೆ ಸಿಐಡಿ ತನಿಖೆ : ಗೃಹ ಸಚಿವ ಜಿ....

ಕೆಇಎ ಪರೀಕ್ಷಾ ಅಕ್ರಮ – ಅಗತ್ಯ ಬಿದ್ದರೆ ಸಿಐಡಿ ತನಿಖೆ : ಗೃಹ ಸಚಿವ ಜಿ. ಪರಮೇಶ್ವರ್

ಬೆಂಗಳೂರು : ಕೆಇಎ ಪರೀಕ್ಷಾ ಅಕ್ರಮ ಪ್ರಕರಣವನ್ನು ಅಗತ್ಯ ಬಿದ್ದರೆ ಸಿಐಡಿಗೆ ವಹಿಸಲಾಗುತ್ತದೆ ಎಂದು ಗೃಹಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ಈ ಕುರಿತು ಇಂದು ಮಂಗಳವಾರ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು ಪ್ರಕರಣದಲ್ಲಿ ಯಾವುದೇ ಪ್ರಭಾವಿಗಳು ಭಾಗಿಯಾಗಿದ್ದರೂ ಸಹ ಬಿಡುವುದಿಲ್ಲ ಎಂದು ಹೇಳಿದರು.

ಪ್ರಕರಣದ ಕಿಂಗ್ ಪಿನ್ ಆರ್.ಡಿ. ಪಾಟೀಲ್ ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗಿರುವುದರ ಕುರಿತು ಪ್ರತಿಕ್ರಿಯಿಸಿದ ಅವರು, ಆತನ ವಿರುದ್ಧ ಸಾಕಷ್ಟು ಪ್ರಕರಣಗಳಿವೆ. ಆತ ತಪ್ಪಿಸಿಕೊಂಡು ಎಲ್ಲಿಗೆ ಎಷ್ಟು ದಿವಸ ಹೋಗುತ್ತಾನೆ ನೋಡೋಣ ಎಂದರು. ಜೊತೆಗೆ ಈಗಾಗಲೇ ಪಿಎಸ್‌ಐ ಹಗರಣದಲ್ಲಿ ಕಿಂಗ್ ಪಿನ್ ಕೂಡ ಇದರಲ್ಲೂ ಕೂಡ ಭಾಗಿಯಾಗಿದ್ದರೆ. ಎಲ್ಲಿಯೇ ಹೋದರು ಅವರನ್ನು ಬಿಡುವುದಿಲ್ಲ ಬಂಧಿಸಿ ತರುತ್ತೇವೆ. ಒಂದು ವೇಳೆ ಅವರು ತಪ್ಪಿಸಿಕೊಳ್ಳಲು ಪೊಲೀಸರ ನಿರ್ಲಕ್ಷವೇ ಕಾರಣವಾಗಿದ್ದರೆ ಅಂತಹ ಪೊಲೀಸ್ ಅಧಿಕಾರಿಗಳ ವಿರುದ್ಧ ಕೂಡ ಸೂಕ್ತವಾದಂತಹ ಕ್ರಮ ಕೈಗೊಳ್ಳುತ್ತೇವೆ ಎಂದರು.

ಅವನನ್ನ ಯಾವುದೇ ಕಾರಣಕ್ಕೂ ಕೂಡ ಬಿಡುವುದಿಲ್ಲ ಅರೆಸ್ಟ್ ಮಾಡಲೇಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿದ್ದೇವೆ. ಈಗಾಗಲೇ ಅವರು ಮಹಾರಾಷ್ಟ್ರಕ್ಕೆ ತಪ್ಪಿಸಿಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಬಂದಿದೆ. ಅವರನ್ನು ಬಂಧಿಸಿ ಕರೆದುಕೊಂಡು ಬಂದೇ ಬರುತ್ತಾರೆ. ಯಾರಾದರೂ ಅಲ್ಲಿಯ ಅಧಿಕಾರಿಗಳು ಅವರನ್ನು ತಪ್ಪಿಸಿಕೊಂಡು ಹೋಗಲು ಅವಕಾಶ ಮಾಡಿಕೊಟ್ಟಿದರೆ ಅಂತವರು ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹಸಚಿವರು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular