ರಾಮನಗರ : ನಮ್ಮ ಸುತ್ತಮುತ್ತಲು ಇರುವ ಪರಿಸರವನ್ನು ಸ್ವಚ್ಚವಾಗಿಡುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ದಿಗ್ವಿಜಯ್ ಬೋಡ್ಕೆ ತಿಳಿಸಿದರು.
ಇಂದು ರಾಮನಗರ ತಾಲ್ಲೂಕಿನ ಹರಿಸಂದ್ರ ಗ್ರಾಮ ಪಂಚಾಯತಿ ವ್ಯಾಪ್ತಿಯ ಶ್ರೀರಾಮದೇವರ ಬೆಟ್ಟದ ದೇವಸ್ಥಾನದ ಸನ್ನಿಧಿಯಿಂದ ಬೆಟ್ಟದ ಮೇಲಿನವರೆಗೂ ಸ್ವಚ್ಛತೆಯ ಸೇವೆ ಎಂಬ ಅಭಿಯಾನ ಭಾಗವಾಗಿ ಒಂದು ಗಂಟೆಯ ಶ್ರಮದಾನ ಮಾಡಿ ಸಾರ್ವಜನಿಕರು ಸ್ವಚ್ಛತೆಯ ಸೇವೆಯಲ್ಲಿ ಭಾಗವಹಿಸುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ, ಕಾರ್ಯನಿರ್ವಾಹಕ ಅಧಿಕಾರಿ ಪ್ರದೀಪ್, ಪ್ರವಾಸೋದ್ಯಮ ಇಲಾಖೆ, ಯೂತ್ ಆಫ್ ಪರಿವರ್ತನ್ ಎನ್‌ಜಿಓ ರವರ ಸಹಾಯದೊಂದಿಗೆ ಸಹಯೋಗದೊಂದಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಅಭಿವೃದ್ಧಿ ಅಧಿಕಾರಿಗಳು ಪಂಚಾಯಿತಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಸ್ವಚ್ಛತಾ ಗಾರರು ಸೇರಿದಂತೆ ವಿವಿಧ ಸಿಬ್ಬಂದಿಗಳ ಉಪಸ್ಥಿತಿ ಮತ್ತು ಜಿಲ್ಲಾ ಸ್ವಚ್ಛ ಭಾರತ್ ಸಮಾಲೋಚಕರ ತಂಡ ಹಾಗೂ ಇತರರು ಭಾಗವಹಿಸಿದ್ದರು.