Sunday, April 20, 2025
Google search engine

Homeರಾಜ್ಯಸುದ್ದಿಜಾಲಕೆಂಪೇಗೌಡ ಕರ್ನಾಟಕ ಪ್ರಾದೇಶಿಕ ಸಾಂಸ್ಕೃತಿಕ ಕಲಾ ಉತ್ಸವ: ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಪ್ರದಾನ

ಕೆಂಪೇಗೌಡ ಕರ್ನಾಟಕ ಪ್ರಾದೇಶಿಕ ಸಾಂಸ್ಕೃತಿಕ ಕಲಾ ಉತ್ಸವ: ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಪ್ರದಾನ

ಬೆಂಗಳೂರು: ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ (ರಿ.) ಕಳೆದ ೩೦ ವರ್ಷಗಳಿಂದ, ಶ್ರೇಷ್ಠ ಕೃತಿಗಳ ಆಯ್ಕೆಗಾಗಿ, ಸಾಹಿತ್ಯ ಸ್ವರ್ಧೆ ಹಮ್ಮಿಕೊಂಡು ಬರುತ್ತಿದೆ. ಈಗಾಗಲೇ ೩೦ ವರ್ಷದಲ್ಲಿ, ೩೦೦ಕ್ಕೂ ಹೆಚ್ಚು ಕೃತಿಗಳನ್ನು ಆಯ್ಕೆ ಮಾಡಿ, ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ ಜೊತೆಗೆ ೧೦ ಲಕ್ಷಕ್ಕೂ ಹೆಚ್ಚು ರೂ.ಗಳ ಪುಸ್ತಕ ಬಹುಮಾನವನ್ನು ನೀಡಿ ಗೌರವಿಸಿ, ಪ್ರೋತ್ಸಾಹಿಸಿದೆ.

ಪ್ರಸ್ತುತ ಈ ನಿಟ್ಟಿನಲ್ಲಿ ಸಂಸ್ಥೆ ಕೆಂಪೇಗೌಡ ಕರ್ನಾಟಕ ಪ್ರಾದೇಶಿಕ ಸಾಂಸ್ಕೃತಿಕ ಕಲಾ ಉತ್ಸವದ ಅಂಗವಾಗಿ, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಹಿಂಭಾಗದಲ್ಲಿರುವ ಸಂಸ ರಂಗಮಂದಿರದಲ್ಲಿ ಡಿಸೆಂಬರ್ ೩೦ ಮತ್ತು ೩೧ ರಂದು ಎರಡು ದಿನಗಳ ಕಾಲ ಸಂಜೆ ೪ ರಿಂದ ೯.೩೦ ರವರೆಗೆ, ೮ನೇ ರಾಷ್ಟ್ರೀಯ ನೃತ್ಯ ಕಲಾಮೇಳ ಮತ್ತು ೬೯ನೇ ಸಾಂಸ್ಕೃತಿಕ ಪ್ರತಿಭೊತ್ಸವ ಹಾಗೂ ಕೆಂಪೇಗೌಡರ ಕೊಡುಗೆ ಕುರಿತು ನಡೆಯುವ ವಿಚಾರ ಸಂಕಿರಣದಲ್ಲಿ, ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಂಡಿದೆ.

ಸಮಾರಂಭವನ್ನು ವಿಶ್ರಾಂತ ಕುಲಪತಿ ಡಾ. ಮಲ್ಲೇಪುರಂ ಜಿ ವೆಂಕಟೇಶ್ ಉದ್ಘಾಟಿಸಲಿದ್ದು, ವಿಜಯಪುರದ ಹಿರಿಯ ಲೇಖಕಿ ಡಾ. ಸರಸ್ವತಿ ಚಿಮ್ಮಲಗಿ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಕುಮಾರ ಚಂದ್ರಶೇಖರನಾಥ ಸ್ವಾಮಿಗಳು ಆಶೀರ್ವಚನ ನೀಡಲಿದ್ದು, ಶ್ರೀ ವನಕಲ್ಲು ಮಲ್ಲೇಶ್ವರ ಸುಕ್ಷೇತ್ರದ ಡಾ. ಬಸವರಮಾನಂದ ಸ್ವಾಮಿಗಳು ದಿವ್ಯಸಾನಿಧ್ಯ ವಹಿಸಲಿದ್ದಾರೆ. ಕೆಂಪೇಗೌಡರ ಕುರಿತು ಡಾ. ತಲಕಾಡು ಚಿಕ್ಕರಂಗೇಗೌಡ ಮತ್ತು ಗದಗನ ಡಾ. ರಾಜೇಂದ್ರ ಎಸ್. ಗಡಾದ ವಿಷಯ ಮಂಡಿಸಲಿದ್ದಾರೆ.

ಎರಡು ದಿನದಲ್ಲಿ ಚಿಕ್ಕಮಗಳೂರಿನ ಲೇಖಕಿ ನಳಿನಾ ಡಿ. ಹಾಗೂ ಹಾಸನ ಜಿಲ್ಲೆಯ ಪತ್ರಕರ್ತೆ ಗೋರೂರು ಪಂಕಜಾ ರವರು ಕೆಂಪೇಗೌಡ ಕುರಿತು ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ. ಸತೀಶಕುಮಾರ್ ಹೊಸಮನಿ, ಮಾಜಿ ಶಾಸಕ, ಚಲನಚಿತ್ರ ಕಲಾವಿದ ಡಾ. ನೆ.ಲ. ನರೇಂದ್ರಬಾಬು, ಚಲನಚಿತ್ರ ಗೀತರಚನೆಕಾರ ಡಾ. ಮಹಂತೇಶ ಮಲ್ಲಗೌಡರ ಮತ್ತು ಚಲನಚಿತ್ರ ಕಲಾವಿದ ಶಂಕರಭಟ್ ಮತ್ತು ಮೀನಾ ಮತ್ತು ನೂತನ ಗೌರವ ಅಧ್ಯಕ್ಷ ರಮೇಶ ಎನ್. ಅಂಗಡಿ ಮತ್ತು ಚಿಪ್ಪಲಕಟ್ಟಿ ಹಿರೇಮಠದ ಡಾ. ಕಲ್ಮೇಶ್ವರ ಸ್ವಾಮಿಗಳು ಉಪಸ್ಥಿತರಿರುತ್ತಾರೆ.

ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಬೀದರ ಹಾಗೂ ಖ್ಯಾತ ಸಂಶೋಧಕ ಡಾ. ತಲಕಾಡು ಚಿಕ್ಕರಂಗೇಗೌಡರಿಗೆ ಇವರ ಜೀವಮಾನ ಸಾಧನೆಗಾಗಿ ಗೌರವಿಸಲಾಗುತ್ತಿದೆ. ಇದರ ಜೊತೆಗೆ ಸಮಗ್ರ ಸಾಹಿತ್ಯ ಸೇವೆ ಮತ್ತು ಜೀವಮಾನ ಸಾಧನೆಗಾಗಿ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಕೆಳಕಂಡ ಹಿರಿಯ ಸಾಹಿತಿಗಳು ಭಾಜನರಾಗಿದ್ದಾರೆ.

ಸದಾನಂದ ನಾರಾವಿ ಮೂಡುಬಿದಿರೆ ದ.ಕ. ಜಿಲ್ಲೆ, ಡಾ. ಎಸ್.ವಿ ಪ್ರಭಾವತಿ ಬೆಂಗಳೂರು, ಪ್ರೊ. ಸತ್ಯನಾರಾಯಣ ಶಿವಮೊಗ್ಗ ಜಿಲ್ಲೆ, ತಲ್ಲೂರು ಶಿವರಾಮ ಶೆಟ್ಟಿ ಉಡುಪಿ ಜಿಲ್ಲೆ, ಸಿದ್ಧರಾಮ ಉಪ್ಪಿನ ಆಲಮೇಲ ವಿಜಯಪುರ ಜಿಲ್ಲೆ, ಎ.ಜಿ. ರತ್ನಕಾಳೇಗೌಡ ಬೆಂಗಳೂರು, ಡಾ. ಬೆಳವಾಡಿ ಮಂಜುನಾಥ ಚಿಕ್ಕಮಗಳೂರು ಜಿಲ್ಲೆ, ಯು.ಎನ್. ಸಂಗನಾಳಮಠ ಹೊನ್ನಾಳಿ ದಾವಣಗೆರೆ ಜಿಲ್ಲೆ, ಸಿದ್ಧರಾಮ ಹೊನ್ಕಲ್ ಶಹಾಪುರ ಯಾದಗಿರಿ ಜಿಲ್ಲೆ, ಡಾ. ಫಕೀರಪ್ಪ ವಜ್ರಬಂಡಿ ಕೊಪ್ಪಳ ಜಿಲ್ಲೆ, ಬೆ.ಗೋ. ರಮೇಶ ಬೆಂಗಳೂರು, ಶರಣಗೌಡ ಸ. ಪಾಟೀಲ್ ಬೆಳಗಾವಿ ಜಿಲ್ಲೆ, ಶ್ರೀಮತಿ ಸರಸ್ವತಿ ಭೋಸಲೆ ಧಾರವಾಡ ಜಿಲ್ಲೆ, ಮಹಾದೇವ ಬಸರಕೋಡ ಅಮೀನಗಡ ಬಾಗಲಕೋಟೆ ಜಿಲ್ಲೆ, ಡಾ. ಹಾ.ಮ. ನಾಗಾರ್ಜುನ ಹಾದಿಕೆರೆ ಚಿಕ್ಕಮಗಳೂರು ಜಿಲ್ಲೆ, ಡಾ. ವಿ.ವಿ. ಹಿರೇಮಠ ಗದಗ ಜಿಲ್ಲೆ, ತಿರುಮಲ ಮಾವಿನಕುಳಿ ಕರ್ಕಿಕೊಪ್ಪ ಶಿವಮೊಗ್ಗ ಜಿಲ್ಲೆ, ವಿಜಯಾ ಮೋಹನ್ ಮಧುಗಿರಿ ತುಮಕೂರು ಜಿಲ್ಲೆ, ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಶಂಕರಘಟ್ಟ ಶಿವಮೊಗ್ಗ ಜಿಲ್ಲೆ, ಜಿ.ಎಸ್. ಗೋನಾಳ್ ಮಾದಿನೂರು ಕೊಪ್ಪಳ ಜಿಲ್ಲೆ, ಡಾ. ಗುರುಪಾದಯ್ಯ ವಿ. ಸಾಲಿಮಠ ಸವಣೂರು ಹಾವೇರಿ ಜಿಲ್ಲೆ, ಎಸ್.ಜಿ. ಮಾಲತಿಶೆಟ್ಟಿ ಬೆಂಗಳೂರು, ಉಮೇಶ ಮುನವಳ್ಳಿ ಧಾರವಾಡ ಜಿಲ್ಲೆ, ರಾಜಶೇಖರ ಜಮದಂಡಿ ಮೈಸೂರು, ಎಂ.ಎನ್. ಸುಂದರರಾಜ್ ಶಿವಮೊಗ್ಗ, ಕೊಂಡಜ್ಜಿ ವೆಂಕಟೇಶ್ ಬೆಂಗಳೂರು, ರವೀಂದ್ರನಾಥ ಸಿರಿವರ ಬೆಂಗಳೂರು, ಜ್ಯೋತಿ ಲೋಣಿ ಗದಗ ಜಿಲ್ಲೆ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಸಂಜೆ ೪ ಗಂಟೆಯಿಂದ ಕೆಂಪೇಗೌಡ ಕರ್ನಾಟಕ ಪ್ರಾದೇಶಿಕ ಸಾಂಸ್ಕೃತಿಕ ಕಲಾ ಉತ್ಸವದ ಅಂಗವಾಗಿ ನೃತ್ಯ, ಗಾಯನ ಹಾಗೂ ಜನಪದೋತ್ಸವ ಕಾರ್ಯಕ್ರಮಗಳು ಎರಡು ದಿನ ನಡೆಯಲಿವೆ ಎಂದು ಸಂಸ್ಥೆಯ ಅಧ್ಯಕ್ಷ ರಮೇಶ ಸುರ್ವೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular