Monday, December 2, 2024
Google search engine

Homeರಾಜ್ಯಕೆಂಗಲ್ ಹನುಮಂತಯ್ಯ ಒಬ್ಬ ದಕ್ಷ ಆಡಳಿಗಾರರಾಗಿದ್ದರು: ಸಿಎಂ ಸಿದ್ದರಾಮಯ್ಯ

ಕೆಂಗಲ್ ಹನುಮಂತಯ್ಯ ಒಬ್ಬ ದಕ್ಷ ಆಡಳಿಗಾರರಾಗಿದ್ದರು: ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಕೆಂಗಲ್ ಹನುಮಂತಯ್ಯ ಅವರು ಒಬ್ಬ ದಕ್ಷ ಆಡಳಿಗಾರರು. ಮುಖ್ಯಮಂತ್ರಿಯಾಗಿ, ಕೇಂದ್ರದ ಮಂತ್ರಿಯಾಗಿ ಆಡಳಿತವನ್ನು ಉತ್ತಮವಾಗಿ ನಡೆಸಿದವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಕೆಂಗಲ್ ಹನುಮಂತಯ್ಯ ಅವರ ಪುಣ್ಯ ಸ್ಮರಣೆಯ ಪ್ರಯುಕ್ತ ಅವರ ಪ್ರತಿಮೆಗೆ ಮಾಪಾರ್ಪಣೆ ಮಾಡಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದರು.‌

ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಪುಣ್ಯತಿಥಿಯನ್ನು ಪ್ರತಿ ವರ್ಷ ಆಚರಿಸಲಾಗುತ್ತಿದೆ. ಸರ್ಕಾರದ ಪರವಾಗಿ ಪ್ರತಿ ವರ್ಷವೂ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವಿಸಿ ಅವರನ್ನು ಸ್ಮರಿಸಲಾಗುತ್ತಿದೆ ಎಂದರು.

ವಿಧಾನಸೌಧವನ್ನು ಕಟ್ಟಿಸಿದಾಗ ಸರ್ಕಾರದ ಕೆಲಸ ದೇವರ ಕೆಲಸ ಎಂದು ಹೇಳಿದರು. ಏಕೀಕರಣ ಆಗಬೇಕು ಎಂದು ಬಲವಾಗಿ ನಂಬಿ ಕನ್ನಡ ಮಾತನಾಡುವವರು ಒಂದಾಗಿ ನಾಡಿನ ಸರ್ವತೋಮುಖ ಅಭಿವೃದ್ಧಿ ಆಗಬೇಕೆಂದು ಶ್ರಮಿಸಿ ಕಟಿಬದ್ಧರಾಗಿ ಕೆಲಸ ಮಾಡಿದರು ಎಂದರು.

ಕೆ.ಸಿ.ರೆಡ್ಡಿಯವರು ಮೊದಲನೇ ಮುಖ್ಯಮಂತ್ರಿಗಳಾಗಿದ್ದರೆ ಸ್ವಾತಂತ್ಯ್ರ ಬಂದ ನಂತರ ರಾಜ್ಯದ ಎರಡನೇ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದವರು. ನೆಹರೂ ಅವರು ಪ್ರಧಾನಮಂತ್ರಿಗಳಾಗಿದ್ದಾಗ ಇವರು ಮುಖ್ಯಮಂತ್ರಿಗಳಾಗಿದ್ದರು. ನೆಹರೂ ಅವರೊಂದಿಗೆ ಅನ್ಯೋನ್ಯ ಸಂಬಂಧವಿತ್ತು ಎಂದು ಮುಖ್ಯಮಂತ್ರಿಗಳು ಸ್ಮರಿಸಿದರು.

ಅವರ ಆಡಳಿತ ಜನಪರ, ದಕ್ಷವಾಗಿತ್ತು. ಅದನ್ನು ನಾವು ಸ್ಮರಿಸಿ ಅವರು ಹಾಕಿದ ದಾರಿಯಲ್ಲಿ ನಡೆಯುವ ಪ್ರಯತ್ನವನ್ನು ಮಾಡುತ್ತೇವೆ. ಅದೇ ನಾವು ಅವರಿಗೆ ಸಲ್ಲಿಸುವ ಗೌರವ ಎಂದರು.

RELATED ARTICLES
- Advertisment -
Google search engine

Most Popular