Tuesday, June 10, 2025
Google search engine

Homeಅಪರಾಧಕೆಂಗೇರಿ: ನಾಪತ್ತೆಯಾಗಿದ್ದ ಇಬ್ಬರು ಮಕ್ಕಳಲ್ಲಿ ಒಬ್ಬರು ಶವವಾಗಿ ಪತ್ತೆ

ಕೆಂಗೇರಿ: ನಾಪತ್ತೆಯಾಗಿದ್ದ ಇಬ್ಬರು ಮಕ್ಕಳಲ್ಲಿ ಒಬ್ಬರು ಶವವಾಗಿ ಪತ್ತೆ

ಕೆಂಗೇರಿ: ಕೆರೆಯಂಗಳದಲ್ಲಿ ನಾಪತ್ತೆಯಾಗಿದ್ದ ಇಬ್ಬರ ಪೈಕಿ ಒಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಕೆಂಗೇರಿ ಬಳಿಯ ಹರ್ಷ ಲೇಔಟ್ ನಿವಾಸಿಯಾದ ಜಯಮ್ಮ ಎಂಬುವರ ಮಕ್ಕಳಾದ ಜಾನ್ಸನ್( ೧೫) ಹಾಗೂ ಮಹಾಲಕ್ಚ್ಮಿ(೧೩) ಎಂಬುವರು ಸೋಮವಾರ ಸಂಜೆ ಕೆಂಗೇರಿ ಕೆರೆ ಅಂಗಳಕ್ಕೆ ತೆರಳಿದ್ದರು.

ಈ ವೇಳೆ ಸಹೋದರ ಜಾನ್ಸನ್ ಕಾಲು ಜಾರಿ ಕೆರೆಗೆ ಬಿದ್ದರು, ಅವರನ್ನು ಹಿಡಿಯಲು ಪ್ರಯತ್ನಿಸಿದ ಸಹೋದರಿ ಕೂಡ ನೀರು ಪಾಲಾಗಿದ್ದಾರೆ ಎಂದು ತಿಳಿದು ಬಂದಿದ್ದು ಮೃತ ಜಾನ್ಸನ್ ಶವ ಕೆರೆಯಲ್ಲಿ ಪತ್ತೆಯಾಗಿದೆ. ಕೆಲಸದ ನಿಮಿತ್ತ ತಾಯಿ ಹೊರ ಹೋಗಿದ್ದಾಗ ಕೆರೆ ಬಳಿಗೆ ಬಂದಿದ್ದ ಮಕ್ಕಳು, ಕಾಲು ಜಾರಿ ಕೆರೆಗೆ ಬಿದ್ದಿರುವ ಶಂಕೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular