Sunday, April 20, 2025
Google search engine

Homeಅಪರಾಧಕೇರಳ: ಮಾವನೊಬ್ಬ ಸೊಸೆಯ ಕತ್ತು ಸೀಳಿ, ಆತ್ಮಹತ್ಯೆಗೆ ಶರಣು

ಕೇರಳ: ಮಾವನೊಬ್ಬ ಸೊಸೆಯ ಕತ್ತು ಸೀಳಿ, ಆತ್ಮಹತ್ಯೆಗೆ ಶರಣು

ಕೇರಳ: ಮಾವನೊಬ್ಬ ಸೊಸೆಯ ಕತ್ತು ಸೀಳಿ ಬಳಿಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೇರಳದಲ್ಲಿ ನಡೆದಿದೆ.

ಕೌಟುಂಬಿಕ ಕಲಹ ತಾರಕಕ್ಕೇರಿ ಸೆಬಾಸ್ಟಿಯನ್ ಎಂಬ ವ್ಯಕ್ತಿ ತನ್ನ ಸೊಸೆ ಮೇಲೆ ಹಲ್ಲೆ ನಡೆಸಿದ್ದರು. ಕೇರಳದ ವಡಕೇಕರ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಕುತ್ತಿಗೆಯನ್ನು ಸೀಳಿದ್ದ ಪರಿಣಾಮ ಶಾನು ಕುತ್ತಿಗಿಂತ ರಕ್ತ ಸುರಿಯುತ್ತಿತ್ತು. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮನೆಗೆ ಬಂದು ನೋಡುವಷ್ಟರಲ್ಲಿ ಮಾವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದರು. ಜನರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಅಕ್ಕಪಕ್ಕದ ಮನೆಯವರನ್ನು ವಿಚಾರಿಸಿದಾಗ ಸೆಬಾಸ್ಟಿಯನ್ ಮತ್ತು ಶಾನು ನಡುವೆ ಯಾವಾಗಲೂ ಜಗಳಗಳು ನಡೆಯುತ್ತಿತ್ತು ಎಂದು ತಿಳಿಸಿದ್ದಾರೆ. ಘಟನೆ ನಡೆದ ದಿನ ಶಾನು ಅವರ ಪತಿ ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು. ಶಾನು ಕಿರುಚಾಟ ಕೇಳಿದಾಗ ಅಕ್ಕಪಕ್ಕದ ಮನೆಯವರು ತಕ್ಷಣವೇ ಸ್ಥಳಕ್ಕೆ ಬಂದಿದ್ದರು. ಆಕೆಯ ಗಂಟಲನ್ನು ಸೀಳಲಾಗಿತ್ತು.

ಮೆದು ಧ್ವನಿಯಲ್ಲಿ ಮಾವ ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಆಕೆ ಹೇಳಿದ್ದಳು. ಕೂಡಲೇ ಪತಿ ಆಸ್ಪತ್ರೆಗೆ ಆಗಮಿಸಿದ್ದಾರೆ, ಆಕೆಯ ಸ್ಥಿತಿ ಚಿಂತಾಜನಕವಾಗಿದ್ದು, ಸ್ಥಿತಿ ಸುಧಾರಿಸಿದ ಬಳಿಕವೇ ಹೇಳಿಕೆ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಸೆಬಾಸ್ಟಿಯನ್ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

RELATED ARTICLES
- Advertisment -
Google search engine

Most Popular