Thursday, September 18, 2025
Google search engine

Homeಅಪರಾಧಕಾನೂನುಶಬರಿಮಲೆ ದೇವಾಲಯದಲ್ಲಿ ಚಿನ್ನದ ಲೋಪದ ಆರೋಪ: ಕೇರಳ ಹೈಕೋರ್ಟ್ ತನಿಖೆಗೆ ಆದೇಶ

ಶಬರಿಮಲೆ ದೇವಾಲಯದಲ್ಲಿ ಚಿನ್ನದ ಲೋಪದ ಆರೋಪ: ಕೇರಳ ಹೈಕೋರ್ಟ್ ತನಿಖೆಗೆ ಆದೇಶ

ತಿರುವನಂತಪುರಂ: ಪ್ರಸಿದ್ಧ ಪುಣ್ಯ ಕ್ಷೇತ್ರ ಶಬರಿಮಲೆ ದೇವಸ್ಥಾನದಲ್ಲಿನ ದ್ವಾರ ಪಾಲಕ ವಿಗ್ರಹಗಳ ಚಿನ್ನಲೇಪಿತ ತಾಮ್ರದ ತಟ್ಟೆಯ ಚಿನ್ನದ ಪ್ರಮಾಣ ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇರಳ ಹೈಕೋರ್ಟ್ ತನಿಖೆ ಮಾಡಲು ಆದೇಶ ನೀಡಿದೆ.

ಶಬರಿಮಲೆ ದೇಗುಲದ ದ್ವಾರದಲ್ಲಿರುವ ವಿಗ್ರಹಗಳ ಕೈಯಲ್ಲಿ ತಟ್ಟೆಗಳಿವೆ. ಇದು ಸ್ವರ್ಣಲೇಪಿತ ತಾಮ್ರದ ತಟ್ಟೆಗಳು. ನಿಯಮಿತವಾಗಿ ಈ ತಟ್ಟೆಗಳಿಗೆ ಚಿನ್ನದ ಪಾಲಿಶ್‌ ಮಾಡಲಾಗುತ್ತೆ. ಹೊಸದಾಗಿ ಚಿನ್ನದ ಲೇಪನಕ್ಕಾಗಿ 2019ರಲ್ಲಿ ತಟ್ಟೆಗಳನ್ನು ತೆಗೆದಾಗ ಅವುಗಳ ತೂಕ 42.8 ಕೆ.ಜಿ ಇತ್ತು. ಈ ಚಿನ್ನದ ಲೇಪನದ ಪ್ರಾಯೋಜಕರಾದ  ಉನ್ನಿಕೃಷ್ಣನ್‌ ಪೊಟ್ಟಿ ಎಂಬಾತ ಒಂದು ತಿಂಗಳಿಗಿಂತಲೂ ಹೆಚ್ಚು ಸಮಯದ ನಂತರ ಚೆನ್ನೈ ಮೂಲದ ಸಾರ್ಟ್‌ ಕ್ರಿಯೇಷನ್ಸ್‌ಗೆ ತಟ್ಟೆಗಳನ್ನು ಕೊಂಡೊಯ್ದರು.

ಆದರೆ ಚೆನ್ನೈ ಮೂಲಕ ಸಂಸ್ಥೆ ಪರೀಕ್ಷೆ ಮಾಡಿದಾಗ ಕೇವಲ 38.258 ಕೆಜಿ ಮಾತ್ರ ಇದ್ದಿದ್ದು ಕಂಡು ಬಂದಿದೆ. ಇದರಲ್ಲಿ ಗಮನಿಸಿದಾಗ 4.54 ಕೆಜಿ ಕೊರತೆ ಇದ್ದಿದ್ದು ತಿಳಿದು ಬಂದಿದೆ ಎಂದು ನ್ಯಾಯಮೂರ್ತಿಗಳಾದ ರಾಜ ವಿಜಯ ರಾಘವನ್ ವಿ ಮತ್ತು ಕೆವಿ ಜಯಕುಮಾರ್ ಅವರ ಪೀಠ ತಿಳಿಸಿದೆ.

1999ರಲ್ಲಿ ದ್ವಾರ ಪಾಲಕ ವಿಗ್ರಹಗಳನ್ನು ಮಂಡಳಿಯ ಅಧಿಕೃತ ಅನುಮೋದನೆಯ ಆಧಾರದ ಮೇಲೆ ಸ್ಥಾಪನೆ ಮಾಡಲಾಗಿತ್ತು. ಆದರೆ 6 ವರ್ಷಗಳ ನಂತರ ಲೇಪನದಲ್ಲಿ ದೋಷಗಳು ಕಂಡುಬಂದಿತ್ತು. 2019 ರಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ದ್ವಾರಪಾಲಕ ವಿಗ್ರಹಗಳನ್ನು ಮುಚ್ಚಿದ್ದ ಚಿನ್ನದ ಲೇಪಿತ ತಾಮ್ರದ ತಗಡುಗಳನ್ನು ದುರಸ್ತಿ ಮತ್ತು ಮರು-ಪಾಲಿಷ್‌ಗಾಗಿ ವಿಶೇಷ ಆಯುಕ್ತರು ಅಥವಾ ನ್ಯಾಯಾಲಯದಿಂದ ಪೂರ್ವ ಸೂಚನೆ ಅಥವಾ ಅನುಮೋದನೆಯಿಲ್ಲದೆ ತೆಗೆದು ಪಾಲಿಷ್‌ ಮಾಡುವ ಕಾರ್ಯಕ್ಕಿಳಿದಾಗ ಈ ವಿವಾದ ಪ್ರಾರಂಭವಾಗಿತ್ತು.

ದೇವಸ್ವಂ ಸಮಿತಿಯ ಮುಖ್ಯ ಜಾಗೃತ ಮತ್ತು ಭದ್ರತಾ ಅಧಿಕಾರಿ, ಪೊಲೀಸ್‌‍ ವರಿಷ್ಠಾಧಿಕಾರಿಗೆ ಸಮಗ್ರ ತನಿಖೆ ನಡೆಸಿ, ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ, ಮೂರು ವಾರಗಳಲ್ಲಿ ವರದಿ ಸಲ್ಲಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ. ಎಲ್ಲಾ ರಿಜಿಸ್ಟರ್‌ಗಳನ್ನು ವಿಜಿಲೆನ್ಸ್ ಅಧಿಕಾರಿಗೆ ಹಸ್ತಾಂತರಿಸುವಂತೆ ಆದೇಶಿಸಿದ ಪೀಠ, ಟಿಡಿಬಿಗೆ ಸಂಪೂರ್ಣ ಸಹಕಾರ ನೀಡುವಂತೆ ಸೂಚಿಸಿದೆ.

RELATED ARTICLES
- Advertisment -
Google search engine

Most Popular