ಮಂಗಳೂರು (ದಕ್ಷಿಣ ಕನ್ನಡ): ಸುಗಂಧ ದ್ರವ್ಯಗಳನ್ನು (Perfume) ವಿದೇಶದಿಂದ ಅಕ್ರಮವಾಗಿ ಮಂಗಳೂರಿಗೆ ಸಾಗಾಟ ಮಾಡಲಾ ಗಿದೆ ಎಂಬ ದೂರಿನ ಮೇರೆಗೆ ರಾತ್ರಿ ಕೇರಳ ಪೊಲೀಸರು ಮಂಗಳೂರಿನಲ್ಲಿ ಶೋಧ ನಡೆಸಿದ್ದಾರೆ.
ಮಂಗಳೂರು ನಗರದ ಬಿಜೈ ಸರಕಾರಿ ಬಸ್ ನಿಲ್ದಾಣದಲ್ಲಿ ಮೂರು ಬಾಕ್ಸ್‌ಗಳಲ್ಲಿದ್ದ ಸುಗಂಧ ದ್ರವ್ಯಗಳನ್ಮು ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. ದುಬೈನಿಂದ ಇದನ್ನು ಅಕ್ರಮವಾಗಿ ಸಾಗಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಕೇರಳ ಪೊಲೀಸರು ಡ್ರಗ್ಸ್ ಪೆಡ್ಲರ್‌ಗಳಿಗೆ ಶೋಧ ನಡೆಸಿದ್ದಾರೆ. ಆದರೆ ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.