ಕೇರಳ-ತಮಿಳುನಾಡು: ಲೋಕಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದ್ದು, ಕೇರಳದಲ್ಲಿ ಎಂದಿನಂತೆ ಆರಂಭಿಕ ಮತ ಎಣಿಕೆಯಲ್ಲಿ ಎಡ ಪಕ್ಷಗಳು ಮುನ್ನಡೆಯಲಿದ್ದರೆ, ತಮಿಳುನಾಡಿನಲ್ಲಿ ಇಂಡಿಯಾ ಒಕ್ಕೂಟವು ಪೋಸ್ಟಲ್ ಬ್ಯಾಲೆಟ್ ಮತ ಎಣಿಕೆಯಲ್ಲಿ ಮುನ್ನಡೆ ಸಾಧಿಸಿದೆ.
ತಮಿಳುನಾಡಿನಲ್ಲಿ ಏಪ್ರಿಲ್ ೧೯ರಂದು ಚುನಾವಣೆ ನಡೆದಿದ್ದು, ಕೇರಳದಲ್ಲಿ ಏಪ್ರಿಲ್ ೨೬ರಂದು ಒಂದೇ ಹಂತದಲ್ಲಿ ಚುನಾವಣೆ ನಡೆದಿದೆ.
ಇನ್ನು ತಮಿಳುನಾಡಿನಲ್ಲಿ ತಿರುನೆಲ್ವೇಲಿ ಸಂಸದೀಯ ಕ್ಷೇತ್ರದ ಅಂಬಾಸಮುದ್ರಂ ವಿಧಾನಸಭಾ ಕ್ಷೇತ್ರದಲ್ಲಿಇವಿಎಂಗಳನ್ನು ಇರಿಸಲಾಗಿದ್ದ ಸ್ಟ್ರಾಂಗ್ ರೂಮ್‌ನ ಬೀಗದ ಕೀ ಕಳೆದುಹೋಗಿರುವ ಘಟನೆ ನಡೆದಿದೆ. ಕೊನೆಗೆ ಬೀಗವನ್ನು ಹೊಡೆಯಲಾಗಿದೆ. ವಯನಾಡಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮುನ್ನಡೆ ಸಾಧಿಸುತ್ತಿದ್ದರೆ, ತಿರುವನಂತಪುರಂನಲ್ಲಿ ಪೋಸ್ಟಲ್ ಬ್ಯಾಲೆಟ್ ಎಣಿಕೆಯಲ್ಲಿ ಬಿಜೆಪಿಯ ಕೆ ಸುರೇಂದ್ರನ್ ಮುನ್ನಡೆ ಸಾಧಿಸಿದ್ದಾರೆ.
ಮತ ಎಣಿಕೆಗೆ ಅರ್ಧ ಗಂಟೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ೧೨ ಸ್ಥಾನಗಳಲ್ಲಿ ಮತ್ತು ಸಿಪಿಐ(ಎಂ) ಎಲ್ ಡಿಎಫ್ ೬ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕ್ರಿಶ್ಚಿಯನ್ ಅಲ್ಪಸಂಖ್ಯಾತರ ಪ್ರಬಲ ಶಕ್ತಿಯಾಗಿರುವ ಇಡುಕ್ಕಿಯಲ್ಲಿ ಕಾಂಗ್ರೆಸ್ ಹಾಲಿ ಸಂಸದ ಡೀನ್ ಕುರಿಯಾಕೋಸ್ ೩೦೦೦ ಹಿನ್ನೆಡೆ ಸಾಧಿಸಿದರೆ, ಪೊನ್ನಾನಿಯಲ್ಲಿ ಮುಸ್ಲಿಂ ಲೀಗ್ ಅಭ್ಯರ್ಥಿ ಇ ಟಿ ಮುಹಮ್ಮದ್ ಬಶೀರ್ ಸಹ ೧೦೦೦ಕ್ಕೂ ಹೆಚ್ಚು ಮತಗಳ ಮುನ್ನಡೆ ಸಾಧಿಸಿದ್ದಾರೆ.
ಅಂಚೆ ಮತಪತ್ರಗಳ ಎಣಿಕೆಯಲ್ಲಿ ರಾಹುಲ್ ಗಾಂಧಿ ವಯನಾಡಿನಲ್ಲಿ ಮುನ್ನಡೆ ಸಾಧಿಸಿದ್ದಾರೆ. ಕೊಲ್ಲಂನಲ್ಲಿ, ಕೇರಳದಲ್ಲಿ ಕಾಂಗ್ರೆಸ್‌ನ ಮಿತ್ರಪಕ್ಷವಾದ ಆರ್‌ಎಸ್‌ಪಿಯ ಹಾಲಿ ಸಂಸದ ಎನ್‌ಕೆ ಪ್ರೇಮಚಂದ್ರನ್ ೩೮೦೦ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಕೇರಳದ ೨೦ ಸ್ಥಾನಗಳ ಪೈಕಿ ಯುಡಿಎಫ್ ೧೫ ಮತ್ತು ಎಲ್‌ಡಿಎಫ್ ೫ ಸ್ಥಾನಗಳಲ್ಲಿ ಆರಂಭಿಕ ಮುನ್ನಡೆ ಸಾಧಿಸಿದೆ.