Sunday, April 20, 2025
Google search engine

Homeರಾಜ್ಯಕೆರೆಗೋಡು ಹನುಮಧ್ವಜ ತೆರವು ವಿವಾದ: ನಾಳೆ ಮಂಡ್ಯ ಬಂದ್ ಡೌಟ್.!!

ಕೆರೆಗೋಡು ಹನುಮಧ್ವಜ ತೆರವು ವಿವಾದ: ನಾಳೆ ಮಂಡ್ಯ ಬಂದ್ ಡೌಟ್.!!

ಮಂಡ್ಯ: ಹನುಮಧ್ವಜ ‌ತೆರವು ಖಂಡಿಸಿ ಫೆ.9ಕ್ಕೆ ಮಂಡ್ಯ ನಗರ ಬಂದ್ ಗೆ ಭಜರಂಗದಳ, ವಿಶ್ವ ಹಿಂದೂ ಪರಿಷತ್ ಹಾಗೂ ಶ್ರೀರಾಮ ಭಜನಾ ಮಂಡಳಿಯಿಂದ ಕರೆ ನೀಡಲಾಗಿತ್ತು.

ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ನಾಳಿನ ಬಂದ್ ಗೆ ಬಿಜೆಪಿ, ಜೆಡಿಎಸ್ ಪಕ್ಷಗಳು ಬೆಂಬಲ ನೀಡ್ತಿಲ್ಲ. ಅಲ್ಲದೆ ಅಂಗಡಿ ಮುಗ್ಗಟ್ಟುಗಳನ್ನ ಬಲವಂತವಾಗಿ ಮುಚ್ಚಿಸುವುದಿಲ್ಲ. ಆದರೆ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿದ್ರೆ ಸ್ವಾಗತ ಮಾಡುವುದಾಗಿ ಬಿಜೆಪಿ ಮುಖಂಡ ಅಶೋಕ್ ಜಯರಾಂ ತಿಳಿಸಿದರು.

ನಾಳೆ ಹನುಮಭಕ್ತರು, ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಜೊತೆ ಸೇರಿ ಕೆರಗೋಡಿನಿಂದ ಮಂಡ್ಯದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಕೆರಗೋಡಿನಿಂದ ಬೈಕ್ ರ್ಯಾಲಿ  ನಡೆಯಲಿದೆ. ಬೈಕ್ ರ್ಯಾಲಿ ನಂತ್ರ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಹೇಳಿದರು.

ಬಂದ್ ಕೈಬಿಡುವಂತೆ ಜಿಲ್ಲಾಡಳಿತ ಮನವಿ ಮಾಡಿತ್ತು. ಜಿಲ್ಲಾಡಳಿತದ ಮನವಿಗೆ ಸ್ಪಂದಿಸಿ ಸಮಾನ ಮನಸ್ಕರ ವೇದಿಕೆ ಫೆ.7ರ ಬಂದ್ ಹಿಂಪಡೆದಿತ್ತು. ಇದೀಗ ಬಿಜೆಪಿ ಜೆಡಿಎಸ್ ಪಕ್ಷಗಳು ಬಂದ್ ಗೆ ಬಂದ್ ಗೆ ಬೆಂಬಲ ನೀಡುತ್ತಿಲ್ಲ ಎಂದು ಅಶೋಕ್ ಜಯರಾಂ ಹೇಳಿದರು.

RELATED ARTICLES
- Advertisment -
Google search engine

Most Popular