ಯಳಂದೂರು : ತಾಲೂಕಿನ ಕೆಸ್ತೂರು ಗ್ರಾಮದ ಕಬ್ಬಡಿ ತಂಡವು ಚಾಮರಾಜನಗರದಲ್ಲಿ ನಡೆದ ನಡೆದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುವುದನ್ನು ಗ್ರಾಮಸ್ಥರು ಅಭಿನಂದಿಸಿದರು.
ಚಾಮರಾಜನಗರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯವತಿಯವರ ಆಶ್ರಯದಲ್ಲಿ ಚಾಮರಾಜನಗರ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ-೨೦೨೫-೨೬ ನೇ ಸಾಲಿನಲ್ಲಿ ಬುಧವಾರ ನಗರದ ಡಾ.ಬಿ,ಆರ್,ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಬ್ಬಡಿ ಪಂದ್ಯಾವಳಿಯಲ್ಲಿ ಚಾಮರಾಜನಗರ ತಾಲೂಕಿನ ಅಮಚವಾಡಿ ಕಬ್ಬಡಿ ತಂಡದ ವಿರುದ್ಧ ಜಯಗಳಿಸುವ ಮೂಲಕ ಜಿಲ್ಲಾ ಮಟ್ಟದ ಕಬ್ಬಡಿಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ಮುಂದೆ ನಡೆಯುವ ಹಾಸನದಲ್ಲಿ ನಡೆಯುವ ವಿಭಾಗ ಮಟ್ಟ ಕ್ಕೆ ಆಯ್ಕೆಯಾಗಿದ್ದಾರೆ. ಮುಂದೆ ನಡೆಯುವ ಸ್ಪರ್ಧೆಯಲ್ಲಿ ಜಯಶೀಲರಾಗಲ್ಲಿ ಎಂದು ಸದಸ್ಯರಾದ ಸಿದ್ದಸ್ವಾಮಿ, ಸಿದ್ದಶೆಟ್ಟಿ, ಕಿರಣ್‌ಕುಮಾರ್, ಪ್ರವೀಣ್‌ನಾಯಕ, ಮಹೇಶ್ ಸೇರಿದಂತೆ ಇತರರನ್ನು ಅಭಿನಂಧಿಸಿದರು.
.