Monday, April 21, 2025
Google search engine

Homeರಾಜ್ಯಹನೂರು ತಾಲ್ಲೂಕು ಕಚೇರಿಯ ರೆಕಾರ್ಡ್ ರೂಂ ಬೀಗ ಒಡೆದು ದಾಖಲೆಗಳನ್ನು ಕದ್ದೊಯ್ದ ಖದೀಮರು

ಹನೂರು ತಾಲ್ಲೂಕು ಕಚೇರಿಯ ರೆಕಾರ್ಡ್ ರೂಂ ಬೀಗ ಒಡೆದು ದಾಖಲೆಗಳನ್ನು ಕದ್ದೊಯ್ದ ಖದೀಮರು

ಹನೂರು: ತಾಲ್ಲೂಕು ಕಛೇರಿಯಲ್ಲಿರುವ ರೆಕಾರ್ಡ್ ರೂಂ ಗೆ ಕಿಡಿಗೇಡಿಗಳು ಬೀಗ ಒಡೆದು ಒಳ ನುಗ್ಗಿ ಕೆಲವು ದಾಖಲೆಗಳನ್ನ ಕದ್ದೊಯ್ದಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದಲ್ಲಿರುವ ತಾಲ್ಲೂಕು ಕಛೇರಿಗೆ ಸೋಮವಾರ ರಾತ್ರಿ ಬಂದ ಕಿಡಿಗೇಡಿಗಳು ರೆಕಾರ್ಡ್ ರೂಂ ಬೀಗ ಹೊಡೆದು ಅಕ್ರಮವಾಗಿ ಒಳ ಪ್ರವೇಶ ಮಾಡಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಬೆರಳಚ್ಚು ವಿಭಾಗ ಹಾಗೂ ಶ್ವಾನ ದಳವನ್ನು ಕರೆಯಿಸಿ ಪರಿಶೀಲಿಸಿದರು.

ಹನೂರು ಪಟ್ಟಣ ಹಾಗೂ ತಾಲ್ಲೂಕಿನಲ್ಲಿ ಭೂ ಕಳ್ಳರು ಹೆಚ್ಚಾಗುದ್ದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಮೀನು ಖರೀದಿ ಹಾಗೂ ಪರಭಾರೆ ಮಾಡಿರುವವರೇ ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಪೊಲೀಸರ ತನಿಖೆಯಿಂದ ಸತ್ಯಾಸತ್ಯತೆ ಬಯಲಿಗೆ ಬರಬೇಕಾಗಿದೆ.

RELATED ARTICLES
- Advertisment -
Google search engine

Most Popular