Saturday, April 19, 2025
Google search engine

Homeರಾಜ್ಯಖರ್ಗೆ ಮಲ್ಲಿಕಾರ್ಜುನ ಅಸಹ್ಯಕರವಾಗಿ ಮಾತನಾಡಿ ತಮ್ಮ ನಾಯಕರು, ಪಕ್ಷವನ್ನು ಮೀರಿಸಿದ್ದಾರೆ: ಗೃಹ ಸಚಿವ ಅಮಿತ್ ಶಾ

ಖರ್ಗೆ ಮಲ್ಲಿಕಾರ್ಜುನ ಅಸಹ್ಯಕರವಾಗಿ ಮಾತನಾಡಿ ತಮ್ಮ ನಾಯಕರು, ಪಕ್ಷವನ್ನು ಮೀರಿಸಿದ್ದಾರೆ: ಗೃಹ ಸಚಿವ ಅಮಿತ್ ಶಾ

ನವದೆಹಲಿ: ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ಭಾಷಣದಲ್ಲಿ ಸಂಪೂರ್ಣವಾಗಿ ಅಸಹ್ಯಕರವಾಗಿ ಮಾತನಾಡುವ ಮೂಲಕ ತಮ್ಮ ನಾಯಕರು ಮತ್ತು ತಮ್ಮ ಪಕ್ಷವನ್ನು ಮೀರಿಸಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ ಅವರು ತಿಳಿಸಿದ್ದಾರೆ.

ಖರ್ಗೆ ಅವರು ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ನಾನು ಸಾಯುವುದಿಲ್ಲ ಎಂಬ ಹೇಳಿಕೆಯ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಖರ್ಗೆಯವರ ಹೇಳಿಕೆ ಪ್ರಧಾನಿ ಮೋದಿಯವರ ಬಗ್ಗೆ ಕಾಂಗ್ರೆಸ್ ಹೊಂದಿರುವ ದ್ವೇಷ ಮತ್ತು ಭಯವನ್ನು ತೋರಿಸುತ್ತದೆ. ಖರ್ಗೆ ಅವರ ಮಾತು ಅಸಹ್ಯಕರ ಮತ್ತು ಅವಮಾನಕರ. ಅನಗತ್ಯವಾಗಿ ತಮ್ಮ ವೈಯಕ್ತಿಕ ಆರೋಗ್ಯದ ವಿಷಯಗಳಿಗೆ ಪ್ರಧಾನಿ ಮೋದಿಯನ್ನು ಎಳೆದಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಖರ್ಗೆ ಅವರ ಆರೋಗ್ಯಕ್ಕಾಗಿ, ಮೋದಿಯವರು, ನಾನು ಪ್ರಾರ್ಥಿಸುತ್ತೇವೆ. ಅವರು ಹಲವು ವರ್ಷಗಳ ಕಾಲ ಬದುಕಲಿ. ೨೦೪೭ ರ ವೇಳೆಗೆ ವಿಕಸಿತ ಭಾರತ ನಿರ್ಮಾಣವನ್ನು ನೋಡಲು ಅವರು ಬದುಕಲಿ ಎಂದು ಬರೆದುಕೊಂಡಿದ್ದಾರೆ.

RELATED ARTICLES
- Advertisment -
Google search engine

Most Popular