Friday, April 11, 2025
Google search engine

Homeಅಪರಾಧಇನ್ಶೂರೆನ್ಸ್ ಹಣಕ್ಕಾಗಿ ಅಮಾಯಕನ ಕೊಲೆ ಮಾಡಿ ನಾಟಕವಾಡಿದ್ದ ದಂಪತಿ ಅರೆಸ್ಟ್

ಇನ್ಶೂರೆನ್ಸ್ ಹಣಕ್ಕಾಗಿ ಅಮಾಯಕನ ಕೊಲೆ ಮಾಡಿ ನಾಟಕವಾಡಿದ್ದ ದಂಪತಿ ಅರೆಸ್ಟ್

ಹಾಸನ: ಕೋಟಿ ಕೋಟಿ ಇನ್ಶೂರೆನ್ಸ್ ಹಣಕ್ಕಾಗಿ ಅಮಾಯಕನನ್ನು ಕೊಲೆ ಮಾಡಿ ಅಪಘಾತವೆಂದು ಬಿಂಬಿಸಿ ನಾಟಕವಾಡಿದ್ದ ಖತರ್ನಾಕ್ ದಂಪತಿಯನ್ನು ಬಂಧಿಸಲಾಗಿದೆ. ಈ ನಟೋರಿಯಸ್ ದಂಪತಿ ಅಮಾಯಕನನ್ನು ಕೊಂದು ಹಣ ಪೀಕಲು ಪ್ಲಾನ್ ಮಾಡಿದ್ದರು. ಹತ್ತು ದಿನಗಳ ನಂತರ ಸಿನಿಮೀಯ ಮಾದರಿ ಕೊಲೆ ಪ್ರಕರಣದ ರಹಸ್ಯ ಬಯಲಾಗಿದೆ.

ಆಗಸ್ಟ್​ 12ರಂದು ಅರಸೀಕೆರೆ ತಾಲೂಕಿನ, ಗೊಲ್ಲರಹೊಸಳ್ಳಿ ಗೇಟ್ ಬಳಿ ಲಾರಿ ಡಿಕ್ಕಿಯಾಗಿ ಓರ್ವ ವ್ಯಕ್ತಿ ಮೃತಪಟ್ಟಿದ್ದ. ಸ್ಥಳದಲ್ಲಿ ಇದ್ದ ಕಾರಿನ ಆಧಾರದಲ್ಲಿ ಪೊಲೀಸರು ಮೃತನ ಗುರುತು ಪತ್ತೆ ಹಚ್ಚಿದ್ದರು. ಬೆಂಗಳೂರು ಹೊಸಕೋಟೆ ಮೂಲದ ಶಿಲ್ಪರಾಣಿ ಎಂಬುವವರು ಆ.13ರಂದು ಜಿಲ್ಲಾಸ್ಪತ್ರೆಗೆ ಬಂದು ಶವದ ಗುರುತು ಪತ್ತೆ ಹಚ್ಚಿದ್ದರು. ಈ ಮೃತದೇಹ ನನ್ನ ಪತಿ ಮುನಿಸ್ವಾಮಿಗೌಡರದ್ದು ಎಂದು ಕಣ್ಣೀರು ಹಾಕಿದ್ದರು. ಆ.13 ರಂದು ಹೊಸಕೋಟೆ ತಾಲೂಕಿನ, ಚಿಕ್ಕಕೋಲಿಗ ಗ್ರಾಮದಲ್ಲಿ ಅಂತ್ಯಸಂಸ್ಕಾರ ಕೂಡ ನಡೆಸಲಾಗಿತ್ತು. ಇಷ್ಟೆಲ್ಲ ಆದ ನಂತರ ಮೃತ ವ್ಯಕ್ತಿಯ ಕುತ್ತಿಗೆಯಲ್ಲಿದ್ದ ಗಾಯದ ಗುರುತು ಕಂಡು ಅನುಮಾನಗೊಂಡ ಪೊಲೀಸರು ತೀವ್ರ ತನಿಖೆಗೆ ಇಳಿದರು.

ಮೃತ ವ್ಯಕ್ತಿಯ ಕುತ್ತಿಗೆ ಭಾಗದಲ್ಲಿ ಕಂಡು ಬಂದಿದ್ದ ಗುರುತಿನಿಂದ ಅನುಮಾನಗೊಂಡ ಗಂಡಸಿ ಠಾಣೆಯ ಪಿಎಸ್​ಐ ಹಾಗೂ ಅರಸೀಕೆರೆ ಗ್ರಾಮಾಂತರ ವೃತ್ತ ನಿರೀಕ್ಷರರು ತನಿಖೆ ನಡೆಸಿದ್ದು, ತನಿಖೆ ವೇಳೆ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಹೊಸಕೋಟೆಯಲ್ಲಿ ಎಮ್‌ಆರ್​ಎಫ್ ಟೈರ್ ಅಂಗಡಿ ಇಟ್ಟುಕೊಂಡಿದ್ದ ಮುನಿ ಸ್ವಾಮಿ ಗೌಡ, ಸಾಕಷ್ಟು ಸಾಲ ಮಾಡಿಕೊಂಡಿದ್ದ. ಈ ಸಾಲ ತೀರಿಸಲು ಹಣಕ್ಕಾಗಿ ಈ ದಂಪತಿ ಮಾಡಿದ ಪ್ಲಾನ್ ಅಂತಿಂತದ್ದಲ್ಲ.

ಮುನಿಸ್ವಾಮಿ ಗೌಡ ಹಾಗೂ ಆಕೆಯ ಹೆಂಡತಿ ಶಿಲ್ಪರಾಣಿ ಇಬ್ಬರೂ ಸೇರಿಕೊಂಡು ಸಾಲ ತೀರಿಸಲು ಇನ್ಶೂರೆನ್ಸ್ ಹಣಬೇಕೆಂದು ಖತರ್ನಾಕ್ ಪ್ಲಾನ್ ಮಾಡಿದ್ದಾರೆ. ಮುನಿಸ್ವಾಮಿಗೌಡನನ್ನೇ ಹೋಲುವ ವ್ಯಕ್ತಿಯನ್ನ ಹುಡುಕಿ ಹತ್ಯೆಗೆ ಪ್ಲಾನ್ ಮಾಡಿದ್ದಾರೆ. ವ್ಯಕ್ತಿಯನ್ನು ಕಾರಿನಲ್ಲಿ ಕರೆತಂದು ಅರಸೀಕೆರೆ ತಾಲೂಕಿನ ಗೊಲ್ಲರಹೊಸಳ್ಳಿ ಬಳಿ ಹತ್ಯೆ ಮಾಡಿ ಲಾರಿ ಚಾಲಕನ ಜೊತೆ ಸೇರಿ ಲಾರಿ ಡಿಕ್ಕಿ ಹೊಡೆಸಿ ಅಪಘಾತದಿಂದ ಸಾವು ಎಂಬಂತೆ ಬಿಂಭಿಸಿದ್ದಾರೆ.

ಈ ಘಟನೆ ಬಳಿಕ ಮುನಿಸ್ವಾಮಿ ತಲೆಮರಿಸಿಕೊಂಡಿದ್ದ. ತನ್ನದೇ ಸಾವಲ್ಲಿ ಏನಾಗುತ್ತಿದೆ ಎಂದು ತಿಳಿಯದೆ ಗೊಂದಲಕ್ಕೆ ಬಿದ್ದಿದ್ದ. ಇತ್ತ ಪತಿ ಕಳೆದುಕೊಂಡ ನೋವಿನಲ್ಲಿ ಇದ್ದಂತೆ ಪತ್ನಿ ಶಿಲ್ಪರಾಣಿ ಕೂಡ ನಾಟಕವಾಡಿದ್ದಳು. ಮುಂದೇನು ಮಾಡಬೇಕೆಂದು ತಿಳಿಯದೆ ಆರೋಪಿ ಮುನಿಸ್ವಾಮಿ ತನ್ನ ಸಂಬಂಧಿ ಇನ್ಸ್ಪೆಕ್ಟರ್ ಒಬ್ಬರ ಮುಂದೆ ಹಾಜರಾಗಿದ್ದ. ನಡೆದ ಘಟನೆ ವಿವರಿಸಿ ರಕ್ಷಣೆಗೆ ಅಂಗಲಾಚಿದ್ದ. ಆ ಇನ್ಸ್ಪೆಕ್ಟರ್, ಮುನಿಸ್ವಾಮಿ ಮಾಹಿತಿ ಬಳಿಕ ಗಂಡಸಿ ಪೊಲೀಸರಿಗೆ ಮಾಹಿತಿ ನೀಡಿದ್ದು ಕೂಡಲೇ ಆರೋಪಿಯನ್ನ ಬಂಧಿಸಲಾಗಿದೆ. ಶಿಡ್ಲಘಟ್ಟ ಇನ್ಸ್ಪೆಕ್ಟರ್ ರ ಕರ್ತವ್ಯ ಪ್ರಜ್ಞೆ ಹಾಗು ನಿಷ್ಠಾವಂತಿಕೆಯಿಂದ ಆರೋಪಿಯನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

RELATED ARTICLES
- Advertisment -
Google search engine

Most Popular