ಚಾಮರಾಜನಗರ: ಖೋ ಖೊ ವಿಶ್ವಕಪ್ ಫೈನಲ್ ಮಹಿಳೆಯ ಮತ್ತು ಪುರುಷ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಪಟ್ಟಕ್ಕೆ ಏರಿದ ಭಾರತದ ತಂಡಕ್ಕೆ ಅಭಿನಂದನೆಗಳನ್ನು ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ,ಜೈ ಹಿಂದ್ ಪ್ರತಿಷ್ಠಾದ ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ ಅಭಿನಂದಿಸಿದ್ದಾರೆ.
ಭಾರತ ತಂಡದ ಆಟಗಾರರು ಅತ್ಯಂತ ಕ್ರಿಯಾಶೀಲವಾಗಿ, ಆಸಾಧಾರಣ ಪ್ರದರ್ಶನ ನೀಡಿ, ಪ್ರತಿ ಹಂತದಲ್ಲೂ ವಿಶೇಷ ಅಂಕಗಳನ್ನು ಪಡೆದು ಭಾರತದ ಗೌರವವನ್ನು ವಿಶ್ವಖ್ಯಾತಿಗೊಳಿಸಿದ ಎಲ್ಲಾ ಆಟಗಾರರಿಗೆ ತರಬೇತಿದಾರರಿಗೆ ಬೆಂಬಲ ನೀಡಿದ ಕೋಟ್ಯಾಂತರ ಭಾರತೀಯರಿಗೆ ಧನ್ಯವಾದಗಳು .
ಕೋ ಕೋ ಪಂದ್ಯಾವಳಿ ಭಾರತದ ಗ್ರಾಮೀಣ ಕ್ರೀಡೆಯಾಗಿತ್ತು .ಈ ಗೆಲುವು ಕ್ರೀಡಾಪಟುಗಳಲ್ಲಿ ಮತ್ತಷ್ಟು ಉತ್ಸಾಹ, ಸ್ಪೂರ್ತಿ, ಚೈತನ್ಯ ಹಾಗೂ ಕ್ರೀಡೆಯ ಮಾನಸಿಕತೆಯನ್ನು ಹೆಚ್ಚಿಸಿದೆ ಎಂದು ವಿಶೇಷವಾಗಿ ಕ್ರೀಡಾಪಟುಗಳಿಗೆ ಕೋಟ್ಯಾಂತರ ಭಾರತೀಯರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.