ಹುಣಸೂರು: ನನ್ನ ಧರ್ಮ ಪತ್ನಿಯಾದ ಪುಷ್ಪಲತಾ ಅವರನ್ನು ಅಪಹರಿಸಿ ಇಪ್ಪತ್ತನಾಲ್ಕು ವರ್ಷ ಕಳೆದರೂ ನನಗೆ ನ್ಯಾಯ ಸಿಕ್ಕಿಲ್ಲವಾದ್ದರಿಂದ ನನಗೆ ನ್ಯಾಯದೊರಕಿಸಿಕೊಡಬೇಕಾಗಿ ದೂರುದಾರ ರಾಜೇಗೌಡ ಮನವಿ ಮಾಡಿದ್ದಾರೆ.
ನಗರದ ಪತ್ರಕರ್ತರ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಅಕ್ಕ ಪಕ್ಕದ ಕೆಲವರು ನನ್ನ ಪತ್ನಿ ಪುಷ್ಪಲತಾ ಅವರನ್ನು ಅಂದು ಅಪಹರಿಸಿ ಮಾನವ ಕಳ್ಳ ಸಾಗಣೆಯಲ್ಲಿ ತೊಡಗಿದ್ದ ಕೆಲವರು 01.12.2000 ಇಸವಿಯಲ್ಲಿ ಸುಳ್ಳು ದಾಖಲೆ ಸೃಷ್ಠಿಮಾಡಿ ನಾನು ಮತ್ತು ಸಹೋದರರ ಮೇಲೆ ಕೇಸು ದಾಖಲಿಸಿ ಪ್ರಕರಣದ ದಾರಿ ತಪ್ಪಿಸಿ ನಮ್ಮನ್ನೇ ಆರೋಪಿಗಳನ್ನಾಗಿ ಮಾಡಿದ್ದರು.
ನಂತರ ಈ ಪ್ರಕರಣದ ಮಾಹಿತಿಯನ್ನು ನ್ಯಾಯಾಲಯಕ್ಕೆ ಸತ್ಯವರದಿನ್ನು ಸಲ್ಲಿಸಿದಾಗ ನ್ಯಾಯಾಲಯ ಎಲ್ಲವನ್ನು ಪರೀಶೀಲಿಸಿ ತನಿಖೆಯಲ್ಲಿ ನನ್ನ ಎದುರಾಳಿಗಳು ನಮ್ಮ ಮೇಲೆ ನೀಡಿದ ದೂರು ಸತ್ಯಕ್ಕೆ ದೂರವಾದ ಕಾರಣ ಸ್ಥಳೀಯ ಪೊಲೀಸ್ ಇಲಾಖೆಗೆ ಮತ್ತು ಕರ್ನಾಟಕ ಎ.ಡಿ.ಜಿ.ಪಿ.ಯವರು ನನಗೆ ತನಿಖೆ ಮಾಡಿ ನ್ಯಾಯ ಕೊಡಿಸಿಲ್ಲ ವೆಂದರು.
ಆದ್ದರಿಂದ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದಂತೆ ನನಗೆ ತಾಲೂಕಿನ ಸಂಬಂಧಿಸಿದ ಅಧಿಕಾರಿಗಳಿಂದ ನಮ್ಮ ಕುಟುಂಬಕ್ಕೆ ನ್ಯಾಯ ಸಿಗದ ಕಾರಣ ಮಾಧ್ಯಮದ ಮುಂದೆ ಬಂದಿದ್ದು ನನಗೆ ನ್ಯಾಯ ದೊರಕಿಸಿಕೊಡಬೇಕಾಗಿ ಮನವಿ ಮಾಡಿದ್ದಾರೆ.