ಇಂದು ಜಗತ್ತಿನಾದ್ಯಂತ ವಿಶ್ವ ಮೂತ್ರಪಿಂಡ ದಿನವನ್ನು ಆಚರಿಸಲಾಗುತ್ತಿದ್ದು ಇದು ಮೂತ್ರಪಿಂಡದ ಆರೋಗ್ಯ ರಕ್ಷಣೆಯ ಬಗ್ಗೆ ಹೇಳುತ್ತದೆ. ಎಲ್ಲರಿಗೂ ಮೂತ್ರಪಿಂಡದ ಆರೋಗ್ಯ – ಜನರ ಆರೈಕೆ, ಗ್ರಹವನ್ನು ರಕ್ಷಿಸುವುದು” ಎಂಬ ಥೀಮ್ ನಂತೆ ಜಾಗತಿಕವಾಗಿ ಈ ದಿನವನ್ನು ಆಚರಿಸಲಾಗುತ್ತಿದ್ದು ಈ ಹಿನ್ನಲೆಯಲ್ಲಿ ನಮ್ಮ ಆಸ್ಪತ್ರೆಯು ಮಾರ್ಚ್ 14 ರಂದು 2250 ರ ಮೂತ್ರಪಿಂಡ ತಪಾಸಣೆ / ಸ್ಕ್ರೀನಿಂಗ್ ಪ್ಯಾಕೇಜ್ ಅನ್ನು ಕೇವಲ 999ಗೆ ನೀಡುತ್ತಿದೆ ಎಂದು ಇಂಡಿಯಾನಾ ಆಸ್ಪತ್ರೆಯ ಮೂತ್ರಪಿಂಡ ಕಸಿ ತಜ್ಞ ಡಾ. ಪ್ರದೀಪ್ ಕೆ.ಜೆ ತಿಳಿಸಿದರು. ಅವರು ಮಂಗಳೂರಿನ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಮೂತ್ರಪಿಂಡ ಕಾಯಿಲೆಯ ದೀರ್ಘಕಾಲೀನ ಹೊರೆಯನ್ನು ಕಡಿಮೆ ಮಾಡಲು ಸಾರ್ವಜನಿಕರು ಆರಂಭಿಕ ತಪಾಸಣೆ ಮತ್ತು ಹೆಚ್ಚಿನ ಜಾಗೃತಿಯತ್ತ ಗಮನಹರಿಸಬೇಕು . ಮೂತ್ರಪಿಂಡ ವೈಫಲ್ಯದ ರೋಗಿಗಳಲ್ಲಿ ಡಯಾಲಿಸಿಸ್ ಜೀವನದ ಗುಣಮಟ್ಟವನ್ನು ಸುಧಾರಿಸಬಹುದು, ಆದರೆ ಅದು ರೋಗವನ್ನು ಸಂಪೂರ್ಣವಾಗಿ ಗುಣಪಡಿಸುವುದಿಲ್ಲ ಮತ್ತು ಬಹುಸಾರಿಗೆ ಜೀವನಪರ್ಯಂತ ಚಿಕಿತ್ಸೆಯ ಅಗತ್ಯವಿರುತ್ತದೆ. ಆದರೆ ಮೂತ್ರಪಿಂಡ ಕಸಿ ಮಾಡಿದರೆ ರೋಗಿಗಳು ಸಾಮಾನ್ಯ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ವ್ಯವಹಾರ ವಿಭಾಗದ ಮುಖ್ಯಸ್ಥೆ ಲಿಡ್ವಿನ್ ಡಿಸೋಜ ಉಪಸ್ಥಿತರಿದ್ದರು.
ವರದಿ: ಶಂಶೀರ್ ಬುಡೋಳಿ



