ಯಳಂದೂರು: ಯಳಂದೂರು ತಾಲೂಕು ಕಿನಕಹಳ್ಳಿ ಗ್ರಾಮದ ಮಾಜಿ ಶಾಸಕ ಕೆ.ಪಿ. ಶಾಂತಮೂರ್ತಿ ರವರ ಪುತ್ರ ಕಿನಕನಹಳ್ಳಿ ಎಸ್. ಪ್ರಭುಪ್ರಸಾದ್ ಯಳಂದೂರು ತಾಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಈ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾರೋತ್ ಅಧಿಕೃತವಾಗಿ ಜ್ಞಾಪನ ಪತ್ರವನ್ನು ಹೊರಡಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಭುಪ್ರಸಾದ್ ಮಾತನಾಡಿ, ನನ್ನ ಆಯ್ಕೆಗೆ ಕಾರಣರಾದ ಸಚಿವ ಕೆ. ವೆಂಕಟೇಶ್ ಹಾಗೂ ಶಾಸಕ ಎ.ಆರ್. ಕೃಷ್ಣಮೂರ್ತಿರವರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ನನಗೆ ನೀಡಿರುವ ಜವಾಬ್ದಾರಿಯನ್ನು ಪ್ರಮಾಣಿಕವಾಗಿ ನಿರ್ವಹಿಸುತ್ತೇನೆ ಎಂದರು.