ಚಾಮರಾಜನಗರ: ಋಗ್ವೇದಿ ಯೂತ್ ಕ್ಲಬ್ ಹಾಗೂ ಯುವ ಸಂಘಟನೆಗಳ ಒಕ್ಕೂಟದ ವತಿಯಿಂದ ಅಮಚವಾಡಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜನ್ಮದಿನ ಹಾಗೂ ಕಿತ್ತೂರು ವಿಜಯೋತ್ಸವ ಆಚರಿಸಲಾಯಿತು.
ವಿಜಯೋತ್ಸವ ಉದ್ಘಾಟಿಸಿದ ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತರು , ಯುವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಯುವಕರಿಗೆ ಚೈತನ್ಯ ಶಕ್ತಿ ರಾಣಿ ಚೆನ್ನಮ್ಮ. ದೇಶಕ್ಕಾಗಿ ಅರ್ಪಿಸುವ ನಾಡು ,ನುಡಿ, ಜಲ ಭಾಷೆಯ ಬಗ್ಗೆ ಸದಾ ಕಾಲ ಚಿಂತಿಸುವ ದೃಢ ಮನಸ್ಸನ್ನು ಬೆಳೆಸಿಕೊಳ್ಳಬೇಕು ಆ ಮೂಲಕ ತ್ಯಾಗ ಬಲಿದಾನ ಮಾಡಿದ ವ್ಯಕ್ತಿಗಳಿಗೆ ಗೌರವ ಸಲ್ಲಿಸುವ ಕಾರ್ಯ ಮಾಡಬೇಕು .
ಕಿತ್ತೂರು ಸಂಸ್ಥಾನದ ವಿಜಯ ದೇಶದ ಸದಾಕಾಲದ ಸ್ಮರಣೆಯ ವಿಜಯ. ಮಹಿಳೆಯಾಗಿ ಧೈರ್ಯ, ಸಾಹಸದಿಂದ ಬ್ರಿಟಿಷರನ್ನು ಎದುರಿಸುವ ಮನೋಸ್ಥೈರ್ಯ ಮೆಚ್ಚುವಂಥದ್ದು. ನಾಡಿಗಾಗಿ ಅರ್ಪಿಸಿಕೊಂಡ ಕಿತ್ತೂರು ರಾಣಿ ಚೆನ್ನಮ್ಮಳ ಧೈರ್ಯ ಎಲ್ಲ ಯುವಕರಿಗೆ ಸದಾ ದಾರಿ ದೀಪವಾಗಬೇಕು. ಯುವಶಕ್ತಿ ರಾಷ್ಟ್ರ ಶಕ್ತಿಯಾಗಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಮನೋಗುಣವನ್ನು ಬೆ ಳಸಿಕೊಳ್ಳುವ ಮೂಲಕ ವೀರರಿಗೆ ಅರ್ಥಪೂರ್ಣವಾದ ಗೌರವವನ್ನು ಸಲ್ಲಿಸೋಣ. ಶಿಕ್ಷಣ ,ಉದ್ಯೋಗ, ಸಮಾಜ ಸೇವೆ ,ಸರ್ವರನ್ನು ಗೌರವಿಸುವ ,ಪ್ರೀತಿಸುವ ,ಸಂಸ್ಕೃತಿ ಪರಂಪರೆಯನ್ನು ಕಟ್ಟುವ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ಪಾಲ್ಗೊಳ್ಳಬೇಕು. ವ್ಯಸನಗಳಿಗೆ ಬಲಿಯಾಗದೆ, ಸದೃಢವಾಗಿ ,ಆರೋಗ್ಯವಂತರಾಗಿ , ಜ್ಞಾನಾರ್ಜನೆಯ ಮೂಲಕ ಬಲಿಷ್ಠರಾಗೋಣ ಎಂದರು.
ಜಿಲ್ಲಾ ಯುವ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್ ದೊಡ್ಡಮೋಳೆ ಮಾತನಾಡಿ ಕಿತ್ತೂರು ಚೆನ್ನಮ್ಮ ನಾಡಿನ ಹೆಮ್ಮೆಯ ಸಂಕೇತ. ಕಿತ್ತೂರು ಸಂಸ್ಥಾನದ ಹೋರಾಟ, ಸಾಹಸ , ಮರೆಯಲಾಗದು. ಕಿತ್ತೂರು ರಾಣಿ ಚೆನ್ನಮ್ಮಳ ಇತಿಹಾಸ ಯುವಕರಿಗೆ ಶಕ್ತಿ ತರುತ್ತದೆ. ವೀರ ಯೋಧರ ಬಗ್ಗೆ ಅಭಿಮಾನ ಹೆಚ್ಚುತ್ತದೆ. ಕಿತ್ತೂರು ಉತ್ಸವ ಹಳ್ಳಿ ಹಳ್ಳಿಗಳಲ್ಲೂ ನಡೆಯಬೇಕು ಎಂದರು.
ಯುವ ಸಂಘಟನೆಯ ಸಂಜನಾ,ಗೀತಾ, ಕಾವ್ಯ ರಾಧ, ರಾಮು, ರವಿ, ಸಂಜನಾ ಎಸ್.ಮಹಾದೇವಶೆಟ್ಟಿ ಮುಂತಾದವರು ಇದ್ದರು.